ನಿತ್ಯ ವರ್ಕ್ ಔಟ್ ಮಾಡಿದ ಬಳಿಕ ಉತ್ತಮ ಆಹಾರ, ಪಾನೀಯಗಳು ಹೊಟ್ಟೆಗೆ ಹೋದರೆ ಕಳೆದುಕೊಂಡಿರುವ ಶಕ್ತಿ ಪುನಃ ಮರಳುತ್ತದೆ. ವ್ಯಾಯಾಮದ ನಂತರದ ದಿನಚರಿಯಲ್ಲಿ ಪ್ರೋಟೀನ್ ಏಕೆ ಅಗತ್ಯ? ವ್ಯಾಯಾಮದ ಬಳಿಕ ಪ್ರೋಟೀನ್ ಸೇರಿಸುವುದು ಸ್ನಾಯುಗಳ ದುರಸ್ತಿ, ಚೇತರಿಕೆ ಮತ್ತು ತೂಕ ನಷ್ಟಕ್ಕೆ ಅತ್ಯಗತ್ಯ.
ಬೇಸಗೆಯಲ್ಲಿ ನಿಮ್ಮ ರಕ್ಷಣೆಗೆ ದೇಶೀಯವಾಗಿರುವಂತಹ ಪಾನೀಯಕ್ಕಿಂತ ಒಳ್ಳೆಯದಾಗಿರುವುದು ಬೇರೆ ಏನಾದರೂ ಇದೆಯಾ?
ಬಿಹಾರದಲ್ಲಿ ಹೆಚ್ಚು ಜನಪ್ರಿಯವಾಗಿರುವಂತಹ ಸತ್ತು ಶರ್ಬತ್ ಬಿರು ಬೇಸಗೆ ಸಮಯದಲ್ಲೂ ದೇಹವನ್ನು ತುಂಬಾ ತಂಪಾಗಿ ಇಡುವುದು. ಈ ಪಾನೀಯವನ್ನು ಸತ್ತು ಹಿಟ್ಟು, ಸಕ್ಕರೆ ಮತ್ತು ನೀರು ಹಾಕಿ ತಯಾರು ಮಾಡಲಾಗುತ್ತದೆ. ಇದು ದೇಹಕ್ಕೆ ಆಹ್ಲಾದ ನೀಡುವುದರ ಜತೆಗೆ ಹೊಟ್ಟೆ ಕೂಡ ತುಂಬಿಸುವುದು.
ಸತ್ತು ಪಾನೀಯವನ್ನು ಸಿದ್ಧಪಡಿಸುವುದು ಹೇಗೆ?
ಪದಾರ್ಥಗಳು
1 ಗ್ಲಾಸ್ ನೀರು
3-4 ಚಮಚ – ಸತ್ತು ಪುಡಿ
ಟೀಸ್ಪೂನ್ – ಕಪ್ಪು ಉಪ್ಪು
ಟೀಸ್ಪೂನ್ – ಹುರಿದ ಜೀರಿಗೆ ಬೀಜಗಳ ಪುಡಿ
1 ಟೀಸ್ಪೂನ್ – ನಿಂಬೆ ರಸ
ವಿಧಾನ
ಒಂದು ಲೋಟ ನೀರಿನಲ್ಲಿ, ಪದಾರ್ಥಗಳನ್ನು ಸೇರಿಸಿ. ಚೆನ್ನಾಗಿ ಬೆರೆಸಿ ನಂತರ ಕುಡಿಯಿರಿ.
ಪ್ರಯೋಜನಗಳೇನು?
ಜೀರ್ಣಕ್ರಿಯೆಗೆ ಉತ್ತಮ: ಸತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಹೆಚ್ಚಿನ ಪ್ರಮಾಣದ ಕರಗದ ಫೈಬರ್ ಅನ್ನು ಹೊಂದಿರುತ್ತದೆ. ಸಟ್ಟು ಕರುಳನ್ನು ಶುದ್ಧೀಕರಿಸಲು, ಕರುಳಿನಿಂದ ವಿಷವನ್ನು ತೆಗೆದುಹಾಕಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ