Health Tips: ನಿಮಗೂ ಸಿಹಿತಿಂಡಿ ಇಷ್ಟನಾ? ಆರೋಗ್ಯ ಕಾಪಾಡಿಕೊಳ್ಳಲು ಯಾವ ಸಮಯದಲ್ಲಿ ತಿನ್ನಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 17, 2024 | 2:59 PM

ನಮ್ಮ ಸುತ್ತಮುತ್ತ ಸಿಹಿತಿಂಡಿ ಇಷ್ಟಪಡುವವರು ಹೆಚ್ಚಾಗಿ ಇದ್ದಾರೆ. ಅದರಲ್ಲಿ ಹಲವರು ಊಟದ ನಂತರ ಸಿಹಿ ತಿಂಡಿಗಳನ್ನು ತಿನ್ನುತ್ತಾರೆ. ಅತಿಯಾದ ಸಿಹಿ ದೇಹಕ್ಕೆ ಒಳ್ಳೆಯದಲ್ಲ, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಈ ವಿಷಯ ನಮಗೆ ತಿಳಿದಿದ್ದರೂ ನಮ್ಮ ನಾಲಿಗೆ ಸಿಹಿಯನ್ನು ತಿನ್ನದಿರಲು ಬಿಡುವುದಿಲ್ಲ. ಹಾಗಾದರೆ ಸಿಹಿ ತಿಂಡಿಗಳನ್ನು ತಿನ್ನಲು ಸರಿಯಾದ ಸಮಯವಿದೆಯೇ? ಯಾವ ಸಮಯದಲ್ಲಿ ಸಿಹಿತಿಂಡಿ ತಿನ್ನುವುದು ಹೆಚ್ಚು ಹಾನಿಕಾರಕ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Health Tips: ನಿಮಗೂ ಸಿಹಿತಿಂಡಿ ಇಷ್ಟನಾ? ಆರೋಗ್ಯ ಕಾಪಾಡಿಕೊಳ್ಳಲು ಯಾವ ಸಮಯದಲ್ಲಿ ತಿನ್ನಬೇಕು?
ಸಾಂದರ್ಭಿಕ ಚಿತ್ರ
Follow us on

ನಮ್ಮಲ್ಲಿ ಖಾರವಿರುವ ಆಹಾರವನ್ನು ಪ್ರೀತಿಸುವವರಿಗಿಂತ ಸಿಹಿತಿಂಡಿ ಇಷ್ಟಪಡುವವರು ಹೆಚ್ಚಾಗಿ ಇದ್ದಾರೆ. ಅದರಲ್ಲಿ ಹಲವರು ಊಟದ ನಂತರ ಸಿಹಿ ತಿಂಡಿಗಳನ್ನು ತಿನ್ನುತ್ತಾರೆ. ಅತಿಯಾದ ಸಿಹಿ ದೇಹಕ್ಕೆ ಒಳ್ಳೆಯದಲ್ಲ, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಈ ವಿಷಯ ನಮಗೆ ತಿಳಿದಿದ್ದರೂ ನಮ್ಮ ನಾಲಿಗೆ ಸಿಹಿಯನ್ನು ತಿನ್ನದಿರಲು ಬಿಡುವುದಿಲ್ಲ. ಹಾಗಾದರೆ ಸಿಹಿ ತಿಂಡಿಗಳನ್ನು ತಿನ್ನಲು ಸರಿಯಾದ ಸಮಯವಿದೆಯೇ? ಯಾವ ಸಮಯದಲ್ಲಿ ಸಿಹಿತಿಂಡಿ ತಿನ್ನುವುದು ಹೆಚ್ಚು ಹಾನಿಕಾರಕ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಹಿತಿಂಡಿಗಳನ್ನು ತಿನ್ನಲು ಉತ್ತಮ ಸಮಯ ಯಾವುದು?

ವ್ಯಾಯಾಮಕ್ಕೆ 30 ನಿಮಿಷಗಳ ಮೊದಲು ಸಿಹಿ ತಿಂಡಿಗಳನ್ನು ತಿನ್ನಲು ಉತ್ತಮ ಸಮಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವ್ಯಾಯಾಮಕ್ಕೆ ಮೊದಲು ನೀವು ಸಿಹಿ ತಿಂಡಿಗಳನ್ನು ಸೇವನೆ ಮಾಡಿದರೆ, ತಕ್ಷಣ ಕ್ಯಾಲೊರಿ ಬರ್ನ್ ಆಗುತ್ತದೆ. ಜೊತೆಗೆ ನೀವು ಮಧ್ಯಾಹ್ನವೂ ಸಿಹಿ ತಿಂಡಿಗಳನ್ನು ಸೇವನೆ ಮಾಡಬಹುದು. ತಜ್ಞರು ಕೂಡ ಇದನ್ನು ಉತ್ತಮ ಸಮಯ ಎನ್ನುತ್ತಾರೆ.

ಯಾವ ಸಮಯದಲ್ಲಿ ಸಿಹಿ ತಿಂಡಿಗಳನ್ನು ತಿನ್ನಬಾರದು?

ರಾತ್ರಿ ಊಟದವಾದ ನಂತರ ಸಿಹಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಮಲಗುವ ಮೊದಲು ತಿನ್ನುವುದರಿಂದ ಇದು ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಕ್ಯಾಲೊರಿ ಹೆಚ್ಚಾಗುತ್ತದೆ. ನಿದ್ರೆ ಮಾಡುವ ಸಮಯದಲ್ಲಿ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಕೊಬ್ಬು ಶೇಖರಣೆಯಾಗುತ್ತದೆ.

ಇದನ್ನೂ ಓದಿ: ಸಿರ್ಕಾಡಿಯನ್ ರಿದಮ್ ಎಂದರೇನು? ಈ ಲಯ ತಪ್ಪಿದರೆ ಏನಾಗುತ್ತದೆ?

ಸಿಹಿತಿಂಡಿಗಳ ಅತಿಯಾದ ಸೇವನೆಯಿಂದ ಉಂಟಾಗುವ ಸಮಸ್ಯೆಗಳೇನು?

ಹೆಚ್ಚು ಸಿಹಿ ಪದಾರ್ಥಗಳ ಸೇವನೆಯು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಧಿಕ ತೂಕವು ಹೃದಯ ಸಮಸ್ಯೆಗಳು, ಕೆಲವು ಕ್ಯಾನ್ಸರ್ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

(ಸೂಚನೆ: ಇಲ್ಲಿ ನೀಡಿರುವ ವಿಷಯವು ಮಾಹಿತಿಗಾಗಿ ಮಾತ್ರ. ಈ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ತಜ್ಞರನ್ನು ಸಂಪರ್ಕಿಸಿ.)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ