Sleeping Disorder: ಸಿರ್ಕಾಡಿಯನ್ ರಿದಮ್ ಎಂದರೇನು? ಈ ಲಯ ತಪ್ಪಿದರೆ ಏನಾಗುತ್ತದೆ?

ನಮ್ಮ ದೇಹ ಗಡಿಯಾರದಂತೆ ಕೆಲಸ ಮಾಡುವುದನ್ನು ಸಿರ್ಕಾಡಿಯನ್ ಚಕ್ರ ಎಂದು ಕರೆಯಲಾಗುತ್ತದೆ. ಇದು ದೇಹದ ಎಲ್ಲಾ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ನಾವು ಎಚ್ಚರಗೊಳ್ಳುವುದರಿಂದ ಹಿಡಿದು, ಮಲಗುವ ವರೆಗೆ ನಿಗದಿತ ಸಮಯದಲ್ಲಿ ಕೆಲಸ ಮಾಡುತ್ತೇವೆ, ಆದರೆ ಕೆಲವು ಬಾಹ್ಯ ಕಾರಣಗಳಿಂದಾಗಿ ಈ ಚಕ್ರದಲ್ಲಿ ಬದಲಾವಣೆ ಆಗುವುದರಿಂದ ನಮ್ಮ ದೇಹದ ನಿದ್ರೆ, ಎಚ್ಚರಗೊಳ್ಳುವ ಮತ್ತು ಕೆಲಸ ಮಾಡುವ ಸಮಯ ಬದಲಾಗುತ್ತದೆ. ಇದರಿಂದಾಗಿ ಇನ್ನೂ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಈ ಚಕ್ರದ ಅಡೆತಡೆಯಿಂದಾಗಿ ನಿದ್ರಾಹೀನತೆಯ ಸಮಸ್ಯೆಯನ್ನು ಸಿರ್ಕಾಡಿಯನ್ ರಿದಮ್ ಅಥವಾ ಸಿರ್ಕಾಡಿಯನ್ ಲಯ ಎಂದು ಕರೆಯಲಾಗುತ್ತದೆ. ಆದರೆ ಈ ಸಮಸ್ಯೆ ತಾತ್ಕಾಲಿಕವಾಗಿದ್ದು ಇದನ್ನು ಸರಿಪಡಿಸಬಹುದಾಗಿದೆ.

Sleeping Disorder: ಸಿರ್ಕಾಡಿಯನ್ ರಿದಮ್ ಎಂದರೇನು? ಈ ಲಯ ತಪ್ಪಿದರೆ ಏನಾಗುತ್ತದೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 17, 2024 | 11:04 AM

ಸಾಮಾನ್ಯವಾಗಿ ನಮ್ಮ ದೇಹ ಒಂದು ನಿಗದಿತ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಹಗಲಿನಲ್ಲಿ ಕೆಲಸ ಮಾಡುವುದು, ರಾತ್ರಿಯಾದಾಗ ವಿಶ್ರಾಂತಿ ಪಡೆಯುತ್ತದೆ. ಪ್ರತಿನಿತ್ಯ ಇದೆ ಮಾದರಿಯಂತೆ, ಸ್ವಯಂಚಾಲಿತವಾಗಿ ನಮ್ಮ ದೇಹ ಗಡಿಯಾರದಂತೆ ಕೆಲಸ ಮಾಡುವುದನ್ನು ಸಿರ್ಕಾಡಿಯನ್ ಚಕ್ರ ಎಂದು ಕರೆಯಲಾಗುತ್ತದೆ. ಇದು ದೇಹದ ಎಲ್ಲಾ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ನಾವು ಎಚ್ಚರಗೊಳ್ಳುವುದರಿಂದ ಹಿಡಿದು, ಮಲಗುವ ವರೆಗೆ ನಿಗದಿತ ಸಮಯದಲ್ಲಿ ಕೆಲಸ ಮಾಡುತ್ತೇವೆ, ಆದರೆ ಕೆಲವು ಬಾಹ್ಯ ಕಾರಣಗಳಿಂದಾಗಿ ಈ ಚಕ್ರದಲ್ಲಿ ಬದಲಾವಣೆ ಆಗುವುದರಿಂದ ನಮ್ಮ ದೇಹದ ನಿದ್ರೆ, ಎಚ್ಚರಗೊಳ್ಳುವ ಮತ್ತು ಕೆಲಸ ಮಾಡುವ ಸಮಯ ಬದಲಾಗುತ್ತದೆ. ಇದರಿಂದಾಗಿ ಇನ್ನೂ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಈ ಚಕ್ರದ ಅಡೆತಡೆಯಿಂದಾಗಿ ನಿದ್ರಾಹೀನತೆಯ ಸಮಸ್ಯೆಯನ್ನು ಸಿರ್ಕಾಡಿಯನ್ ರಿದಮ್ ಅಥವಾ ಸಿರ್ಕಾಡಿಯನ್ ಲಯ ಎಂದು ಕರೆಯಲಾಗುತ್ತದೆ. ಆದರೆ ಈ ಸಮಸ್ಯೆ ತಾತ್ಕಾಲಿಕವಾಗಿದ್ದು ಇದನ್ನು ಸರಿಪಡಿಸಬಹುದಾಗಿದೆ.

ಸಿರ್ಕಾಡಿಯನ್ ರಿದಮ್ ಎಂದರೇನು?

ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಡಾ. ಪ್ರವೀಣ್ ಕುಮಾರ್ ಅವರು ಹೇಳುವ ಪ್ರಕಾರ ನಮ್ಮ ದೇಹದಲ್ಲಿ ಒಂದು ನೈಸರ್ಗಿಕ ಗಡಿಯಾರವಿದೆ, ಅದನ್ನು ‘ಸಿರ್ಕಾಡಿಯನ್ ರಿದಮ್’ ಎಂದು ಕರೆಯಲಾಗುತ್ತದೆ. ಕೆಟ್ಟ ಜೀವನಶೈಲಿಯಿಂದಾಗಿ ನಮ್ಮ ನಿದ್ರೆಯ ಮಾದರಿ ಹದಗೆಡುತ್ತಿದೆ. ಈ ಕಾರಣದಿಂದಾಗಿ, ‘ಸಿರ್ಕಾಡಿಯನ್ ರಿದಮ್’ ಎಂದು ಕರೆಯಲ್ಪಡುವ ದೇಹದ ನೈಸರ್ಗಿಕ ಗಡಿಯಾರದ ಲಯ ತಪ್ಪುತ್ತಿದೆ. ಇದರಿಂದ ಜನರು ಅನೇಕ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ನಮ್ಮ ನಿದ್ರೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆದರೂ ಕೂಡ ನಿದ್ರಾಹೀನತೆಯ ಸಮಸ್ಯೆ ಉಂಟಾಗುತ್ತದೆ. ಏಕೆಂದರೆ ನಮ್ಮ ದೇಹವು ನಿಗದಿತ ಚಕ್ರದ ಪ್ರಕಾರ ನಡೆಯುತ್ತದೆ. ಇದಕ್ಕೆ ಮತ್ತೆ ಮತ್ತೆ ತೊಂದರೆಗಳಾದರೆ ಸಿರ್ಕಾಡಿಯನ್ ಲಯವೂ ಅಡ್ಡಿಯಾಗುತ್ತದೆ ಎಂದು ಡಾ. ಕುಮಾರ್ ಹೇಳುತ್ತಾರೆ.

ನಿದ್ರೆಗೆ ಏಕೆ ಅಡ್ಡಿಯಾಗುತ್ತದೆ?

ನಿದ್ರೆಯ ಚಕ್ರವು ತೊಂದರೆಗೊಳಗಾಗಲು ಅನೇಕ ಕಾರಣಗಳಿವೆ. ಅವುಗಳೆಂದರೆ,

– ಜೆಟ್ ಲ್ಯಾಗ್; ನೀವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ, ಹಗಲು / ರಾತ್ರಿಯ ವ್ಯತ್ಯಾಸವು ನಿಮ್ಮ ವೇಳಾಪಟ್ಟಿಯನ್ನು ಅಡ್ಡಿಪಡಿಸುತ್ತದೆ, ಇದರಿಂದಾಗಿ ನಿಮಗೆ ನಿದ್ರೆ ಮಾಡಲು ತೊಂದರೆಯಾಗುತ್ತದೆ.

– ರಾತ್ರಿ ಪಾಳಿ: ಆಗಾಗ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ ಏಕೆಂದರೆ ಅವರ ನಿದ್ರೆಯ ಚಕ್ರವು ತೊಂದರೆಗೊಳಗಾಗುತ್ತದೆ, ಇದರಿಂದಾಗಿ ಅವರಿಗೆ ಹಗಲಿನಲ್ಲಿಯೂ ಮಲಗಲು ಸರಿಯಾಗಿ ನಿದ್ದೆ ಬರುವುದಿಲ್ಲ.

– ಹೆಚ್ಚು ಸಮಯ ಮಲಗುವುದು: ಈ ಅಸ್ವಸ್ಥತೆ ಸರಾಸರಿ ವ್ಯಕ್ತಿಗಿಂತ ಹೆಚ್ಚು ಸಮಯ ಮಲಗುವ ಜನರಲ್ಲಿಯೂ ಕಂಡು ಬರುತ್ತದೆ, ಇದು ಹೆಚ್ಚಾಗಿ ಸಣ್ಣ ಮಕ್ಕಳು ಮತ್ತು ವಯಸ್ಕರನ್ನು ಒಳಗೊಂಡಿದೆ.

ಇದನ್ನೂ ಓದಿ; ಈ ಎಲೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ತಡೆಯಬಹುದು

ಲಕ್ಷಣಗಳು ಯಾವವು?

-ನಿದ್ರೆಯಲ್ಲಿ ತೊಂದರೆ

-ನಿದ್ರೆ ಪೂರ್ಣಗೊಳ್ಳುವ ಮೊದಲು ಎಚ್ಚರವಾಗುವುದು

– ಹಗಲಿನ ನಿದ್ರೆ

– ದಣಿದ ಅನುಭವ

-ನಿದ್ರೆಯ ಕೊರತೆಯಿಂದಾಗಿ ತಲೆನೋವು

-ನಿದ್ರೆಯ ಕೊರತೆಯಿಂದಾಗಿ ಕಿರಿಕಿರಿ, ಖಿನ್ನತೆ

– ಯಾವುದೇ ಕೆಲಸದ ಮೇಲೆ ಗಮನ ಹರಿಸಲು ಕಷ್ಟವಾಗುವುದು

ತಡೆಗಟ್ಟುವ ಕ್ರಮಗಳು:

– ಮಲಗುವ ಸಮಯವನ್ನು ಸರಿಯಾಗಿ ನಿಗದಿ ಮಾಡಿಕೊಳ್ಳಿ, ದೀಪಗಳನ್ನು ಇಟ್ಟು ಮಲಗಬೇಡಿ.

– ದೀಪ ಇಲ್ಲದೆ ನಿಮಗೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ದೀಪಗಳನ್ನು ಮಸುಕಾಗಿಸಲು ಪ್ರಯತ್ನಿಸಿ ಅಥವಾ ಸಮಧುರ ಸಂಗೀತ ಕೇಳುತ್ತಾ ಮಲಗಲು ಪ್ರಯತ್ನಿಸಿ.

-ನಿದ್ರೆಗೆ ಸಂಬಂಧಿಸಿದ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

-ರಾತ್ರಿ ಪುಸ್ತಕಗಳನ್ನು ಓದಿ. ಹೀಗೆ ಓದುವುದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ.

-ಫೋನ್ ಅಥವಾ ಲ್ಯಾಪ್ಟಾಪ್ ಅಥವಾ ಟಿವಿಯನ್ನು ರಾತ್ರಿ ಸಮಯದಲ್ಲಿ ಹೆಚ್ಚು ನೋಡಬೇಡಿ.

-ರಾತ್ರಿ ಪಾಳಿ ಮಾಡುವುದನ್ನು ತಪ್ಪಿಸಿ, ನೀವು ರಾತ್ರಿ ಪಾಳಿ ಮಾಡಬೇಕಾದರೆ ಹಗಲಿನಲ್ಲಿ ಸಂಪೂರ್ಣ ನಿದ್ರೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Mon, 16 September 24