World Ozone Day 2024: ಓಜೋನ್ ಪದರ ಕ್ಷೀಣಿಸುವಿಕೆಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳಿವು

ಓಝೋನ್ ಪದರ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವುದರ ಜೊತೆಗೆ ಭೂಮಂಡಲದಲ್ಲಿರುವ ಜೀವ ಸಂಕುಲವನ್ನು ರಕ್ಷಿಸುವ ಪದರವಾಗಿ ಕೆಲಸ ಮಾಡುತ್ತಿದೆ. ಆದರೆ ಓಝೋನ್ ಪದರದ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Ozone Day 2024: ಓಜೋನ್ ಪದರ ಕ್ಷೀಣಿಸುವಿಕೆಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳಿವು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 16, 2024 | 9:38 AM

ಓಝೋನ್ ಪದರವು ವಾಯುಮಂಡಲದಲ್ಲಿನ ತೆಳುವಾದ ಪದರವಾಗಿದ್ದು, ಇದು ಸೂರ್ಯನ ನೆರಳಾತೀತ ಕಿರಣಗಳು ಭೂಮಿಗೆ ಬೀಳದಂತೆ ತಡೆದು ಜೀವರಾಶಿಗಳನ್ನು ರಕ್ಷಿಸುತ್ತದೆ. ಆದರೆ ಈ ಓಝೋನ್ ಪದರದಲ್ಲಿ ರಂಧ್ರಗಳು ಕಾಣಿಸಿಕೊಂಡು, ಅದು ಕ್ಷೀಣಿಸುತ್ತಿದೆ. ಈ ಪದರವು ಸಂಪೂರ್ಣವಾಗಿ ಕ್ಷೀಣಿಸಿದರೆ ಭೂಮಿಯಲ್ಲಿನ ಜೀವಿಗಳು ಮತ್ತು ಸಸ್ಯರಾಶಿಗಳ ಮೇಲೆ ಗಂಭೀರ ಪರಿಣಾಮ ಬೀರು ವುದಲ್ಲದೆ, ಆರೋಗ್ಯ ಸಮಸ್ಯೆಗಳನ್ನು ತಂದೊಡ್ದುತ್ತದೆ. ಹೀಗಾಗಿ ಓಝೋನ್ ಪದರದ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ

ವಿಶ್ವ ಓಝೋನ್ ದಿನದ ಇತಿಹಾಸ ಹಾಗೂ ಮಹತ್ವ

ಸೆಪ್ಟೆಂಬರ್ 16, 1987 ರಂದು ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಮೇಲೆ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಸಹಿ ಹಾಕಿದ್ದವು. ತದನಂತರದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಜನವರಿ 23, 1995 ರಂದು ವಿಶ್ವದಾದ್ಯಂತ ಓಝೋನ್ ಪದರದ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸೆಪ್ಟೆಂಬರ್ 16 ನ್ನು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ನಿರ್ಣಯವನ್ನು ಅಂಗೀಕರಿಸಿತು. ಈ ದಿನವು 1987 ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್​​​ಗೆ ಸಹಿ ಮಾಡಿದ ದಿನವನ್ನು ನೆನಪಿಸುತ್ತದೆ. ತದನಂತರದಲ್ಲಿ 2010 ರ ವೇಳೆಗೆ ಪ್ರಪಂಚದಾದ್ಯಂತ ಓಝೋನ್ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು. ಹೀಗಾಗಿ ಈ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಕ್ಷೀಣಿಸುತ್ತಿರುವ ಓಝೋನ್ ಪದರದ ರಕ್ಷಣೆಗಾಗಿ ಜನರು ಏನು ಮಾಡಬೇಕು ಹಾಗೂ ಅದರ ಸಂರಕ್ಷಣೆ ಹೇಗೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಓಝೋನ್ ದಿನವು ಮಹತ್ವದ್ದಾಗಿದೆ.

ಓಜೋನ್ ಪದರ ಕ್ಷೀಣಿಸುತ್ತಿರುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು

  1. ಕಾಡುತ್ತಿರುವ ಚರ್ಮದ ಸಮಸ್ಯೆಗಳು : ಓಜೋನ್ ಪದರ ಕ್ಷೀಣಿಸುತ್ತಿರುವ ಪರಿಣಾಮವಾಗಿ ಬಿಳಿ ತ್ವಚೆವುಳ್ಳವರು ಅತಿ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸೂರ್ಯನ ಸಮಸ್ಯೆಯ ಅಲ್ಟ್ರಾವೈಲಟ್-ಬಿ ಕಿರಣಗಳು ನೇರವಾಗಿ ಭೂಮಿಗೆ ಅಪ್ಪಳಿಸುವುದರಿಂದ ಬಿಳಿ ತ್ವಚೆ ಇರುವವರಿಗೆ ಚರ್ಮದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ.
  2. ರೋಗ ನಿರೋಧಕ ಶಕ್ತಿ ಕುಂಠಿತ : ದೇಹವು ರೋಗದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯು ಬೇಕೇ ಬೇಕು. ಆದರೆ ಈ ಯುವಿ-ಬಿ ಕಿರಣಕ್ಕೆ ದೇಹವು ಒಡ್ಡಿಕೊಂಡಷ್ಟು ದೇಹದಲ್ಲಿರುವ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ಹೀಗಾಗಿ ಅತಿ ಹೆಚ್ಚು ಯುವಿ-ಬಿ ಕಿಣಗಳು ದೇಹಕ್ಕೆ ಬಿದ್ದಷ್ಟು ವೈರಸ್ ಗಳಿಂದ ಹರಡುವ ಕಾಯಿಲೆಗಳು ಅಧಿಕವಾಗುತ್ತಿದೆ.
  3. ಹದಗೆಡುತ್ತಿರುವ ಕಣ್ಣಿನ ಆರೋಗ್ಯ : ಅಲ್ಟ್ರಾವೈಲಟ್-ಬಿ ನಂಥ ನೇರಳಾತೀತ ಕಿರಣಗಳು ನೇರವಾಗಿ ಕಣ್ಣಿಗೆ ಬಿದ್ದರೆ ಕಣ್ಣುಗಳ ಮೇಲೆ ಗಂಭೀರ ಪರಿಣಾಮಗಳಾಗುತ್ತದೆ. ಕಣ್ಣಿನ ಲೆನ್ಸ್, ಕಾರ್ನಿಯಾ, ಕಣ್ಣಿನ ರಕ್ಷಾಕವಚಗಳು ಸೇರಿದಂತೆ ಬಹುಮುಖ್ಯ ಅಂಗಗಳು ಹಾನಿಗೊಳಗಾಗುತ್ತದೆ. ಅದಲ್ಲದೇ ದೀರ್ಘ ಕಾಲದ ಕಣ್ಣಿನ ಸಮಸ್ಯೆಗಳಾದ ಶಾಶ್ವತ ಕುರುಡುತನವು ಬರುವ ಸಾಧ್ಯತೆಯೇ ಹೆಚ್ಚು. ಓಝೋನ್ ಪದರದ ಕ್ಷೀಣಿಸುವಿಕೆಯಿಂದಾಗಿ ದೃಷ್ಟಿ ಕಳೆದುಕೊಂಡವರ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Mon, 16 September 24