Chewing Gum Recipe: ಮಕ್ಕಳು ಇಷ್ಟಪಡುವ ಈ ಚ್ಯೂಯಿಂಗ್ ಗಮ್ ಮನೆಯಲ್ಲೇ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ
ಕೇವಲ ಮಕ್ಕಳಷ್ಟೇ ಅಲ್ಲ ದೊಡ್ಡವರಿಗೂ ಚ್ಯೂಯಿಂಗ್ ಗಮ್ ಹೆಚ್ಚು ಇಷ್ಟ ಪಡುತ್ತಾರೆ. ದಿನಕ್ಕೆ ನಾಲ್ಕರಿಂದ ಐದು ಚ್ಯೂಯಿಂಗ್ ಗಮ್ ಅನ್ನು ಅಗಿಯುವ ಅಭ್ಯಾಸವನ್ನು ಹೊಂದಿರುವವರನ್ನು ಕಾಣಬಹುದು. ಆದರೆ ಮನೆಯಲ್ಲೇ ನಿಮಗಿಷ್ಟವಾದ ಫ್ಲವರ್ಡ್ ನಲ್ಲಿ ಈ ಚೂಯಿಂಗ್ ಗಮ್ ಮಾಡಬಹುದಾಗಿದ್ದು, ಈ ಕೆಲವು ಐಟಂಗಳಿರಲೇಬೇಕು. ಹಾಗಾದ್ರೆ ಈ ಚೂಯಿಂಗ್ ಗಮ್ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾವೆಲ್ಲಾ ಚಿಕ್ಕವರಿದ್ದಾಗ ಅಂಗಡಿಗೆ ಹೋದಾಗ ಅಮ್ಮನ ಬಳಿ ಚೂಯಿಂಗ್ ಗಮ್ ಬೇಕೆಂದು ಹಠ ಹಿಡಿಯುತ್ತಿದ್ದೆವು. ಈಗಿನ ಕಾಲದ ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ. ಈ ಗಮ್ ನಿಂದ ಬರುವ ರಸವನ್ನು ನುಂಗುತ್ತಾ ಬಲೂನ್ ರೀತಿ ಮಾಡಿ ಮಕ್ಕಳು ಅದರಲ್ಲಿ ಸಂತಸ ಪಡುವುದನ್ನು ಕಾಣಬಹುದು. ಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟಪಡುವ ಈ ಚೂಯಿಂಗ್ ಗಮ್ ನ ಅತಿಯಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಈ ಮನೆಯಲ್ಲೇ ಅತ್ಯಂತ ಸುಲಭವಾಗಿ ಚೂಯಿಂಗ್ ಗಮ್ ರೆಸಿಪಿಯನ್ನು ಮಾಡಬಹುದು.
ಚೂಯಿಂಗ್ ಗಮ್ ತಯಾರಿಸಲು ಬೇಕಾ ಗುವ ಸಾಮಗ್ರಿಗಳು
* 1/3 ಕಪ್ ಗಮ್ ಬೇಸ್
* 1/4 ಚಮಚ ಸಿಟ್ರಿಕ್ ಆಮ್ಲ
* 1 ಚಮಚ ಗ್ಲಿಸರಿನ್
* 2 ಚಮಚ ಕಾರ್ನ್ ಸಿರಪ್
* ಫ್ಲೆವರ್ಡ್
* ಸಕ್ಕರೆ ಪುಡಿ
* ಆಹಾರ ಬಣ್ಣ
ಇದನ್ನೂ ಓದಿ: ಗಂಡನಿಗೆ ಆ ಸಮಸ್ಯೆ ಇದ್ದರೆ… ಹೆಂಡತಿಗೂ ಅದು ಬರುತ್ತದೆ, ಅಧ್ಯಯನದಲ್ಲಿ ಬಯಲಾಯ್ತು ಆ ಆತಂಕಕಾರಿ ಮಾಹಿತಿ
ಚೂಯಿಂಗ್ ಗಮ್ ಮಾಡುವ ವಿಧಾನ:
* ಒಂದು ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಗಮ್ ಬೇಸ್, ಟೀಸ್ಪೂನ್ ಸಿಟ್ರಿಕ್ ಆಮ್ಲ, ಗ್ಲಿಸರಿನ್ ಹಾಗೂ ಕಾರ್ನ್ ಸಿರಪ್ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ದ್ರವ ರೂಪದ ಮಿಶ್ರಣವು ಸಿದ್ಧವಾಗುತ್ತಿದ್ದಂತೆ ಬೇಕಾದ ಫ್ಲೆವರ್ ಸೇರಿಸಿಕೊಳ್ಳಿ. ತದನಂತರದಲ್ಲಿ ಸಕ್ಕರೆ ಪುಡಿ ಮತ್ತು ಆಹಾರ ಬಣ್ಣವನ್ನು ಸೇರಿಸಿ ಒಂದು ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ತದನಂತರದಲ್ಲಿ ಈ ಮಿಶ್ರಣವನ್ನು ಕ್ಯಾಂಡಿ ಅಚ್ಚು ಅಥವಾ ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ ಮತ್ತು ತಣ್ಣಗಾಗಲು ಬಿಟ್ಟರೆ ಚೂಯಿಂಗ್ ಗಮ್ ಸಿದ್ಧವಾದಂತೆ.
* ಈ ಚೂಯಿಂಗ್ ಗಮ್ ಅನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸಿಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ