Health and Lifestyle: ಗಂಡನಿಗೆ ಆ ಸಮಸ್ಯೆ ಇದ್ದರೆ… ಹೆಂಡತಿಗೂ ಅದು ಬರುತ್ತದೆ, ಅಧ್ಯಯನದಲ್ಲಿ ಬಯಲಾಯ್ತು ಆ ಆತಂಕಕಾರಿ ಮಾಹಿತಿ

Diabetes, Hypertension: ಕುಟುಂಬದ ಹಿರಿಯರು ಬಿಪಿ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದು ಅವರ ಮಕ್ಕಳಿಗೂ ಬರುವ ಸಾಧ್ಯತೆಯಿದೆ ಎಂದು ಇದುವರೆಗೂ ಹೇಳಲಾಗುತ್ತಿತ್ತು. ಆದರೆ ಈಗ ಕಾಲಕ್ರಮ ಬದಲಾಗಿದೆ. ಈ ರೋಗಲಕ್ಷಣಗಳು ಮಕ್ಕಳಲ್ಲಿ ಮಾತ್ರವಲ್ಲದೆ ...

Health and Lifestyle: ಗಂಡನಿಗೆ ಆ ಸಮಸ್ಯೆ ಇದ್ದರೆ... ಹೆಂಡತಿಗೂ ಅದು ಬರುತ್ತದೆ, ಅಧ್ಯಯನದಲ್ಲಿ ಬಯಲಾಯ್ತು ಆ ಆತಂಕಕಾರಿ ಮಾಹಿತಿ
ಗಂಡನಿಗೆ ಆ ಸಮಸ್ಯೆ ಇದ್ದರೆ... ಹೆಂಡತಿಗೂ ಅದು ಬರುತ್ತದೆImage Credit source: Shutterstock
Follow us
ಸಾಧು ಶ್ರೀನಾಥ್​
|

Updated on:Sep 16, 2024 | 9:21 AM

Diabetes and hypertension in spouses: ಕೆಲವೊಂದು ಸಾಮಾನ್ಯ ರೋಗಗಳು ಇವೆ. ಅವು ಎಲ್ಲರಿಗೂ ಸಾಮಾನ್ಯವಾಗಿ ಬಂದುಬಿಡುತ್ತವೆ. ಕೆಲವೊಂದು ವಂಶಪಾರ.ಪರ್ಯಬ ಎಂಬಂತೆ ಕಾಡುತ್ತವೆ. ಇತ್ತೀಚಿನ ಜೀವನಶೈಲಿಯಲ್ಲಂತೂ ಇದು ತುಸು ಹೆಚ್ಚೇ ಮುಂದಿನ ಪೀಳಿಗೆಯವರನ್ನು ಜೀವನಾರಂಭದಲ್ಲಿಯೇ ಕಾಡತೊಡಗಿವೆ. ಕುಟುಂಬದ ಹಿರಿಯರು ಬಿಪಿ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದು ಅವರ ಮಕ್ಕಳಿಗೂ ಬರುವ ಸಾಧ್ಯತೆಯಿದೆ ಎಂದು ಇದುವರೆಗೂ ಹೇಳಲಾಗುತ್ತಿತ್ತು. ಆದರೆ ಈಗ ಕಾಲಕ್ರಮ ಬದಲಾಗಿದೆ. ಈ ರೋಗಲಕ್ಷಣಗಳು ಮಕ್ಕಳಲ್ಲಿ ಮಾತ್ರವಲ್ಲದೆ; ಜೀವನ ಸಂಗಾತಿಯಲ್ಲೂ ಕಂಡುಬರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇತ್ತೀಚಿನ ಅಧ್ಯಯನವೊಂದರಲ್ಲಿ ಈ ಆತಂಕಕಾರಿ ಮತ್ತು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿವೆ.

ಸಂಗಾತಿಗಳಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿದ್ದರೆ ಮತ್ತೊಬ್ಬರಲ್ಲಿಯೂ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅಂದರೆ ಹೆಂಡತಿ ಬಿಪಿಯಿಂದ ಬಳಲುತ್ತಿದ್ದರೆ ಪತಿಗೂ ಅದೇ ಸಮಸ್ಯೆ ಬರುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣ ಎಂದು ಸಂಶೋಧಕರು ಕೆಲವು ವಿಷಯಗಳನ್ನು ಹೇಳುತ್ತಿದ್ದಾರೆ. ಅನೇಕ ದಂಪತಿಗಳಲ್ಲಿ ಇದು ಬರುವುದಕ್ಕೆ ಮುಖ್ಯವಾಗುವ ಕಾರಣಗಳು ಏನೆಂದರೆ ಒಂದೇ ರೀತಿಯ ಆಸಕ್ತಿಗಳು, ಜೀವನ ಪರಿಸರ, ಜೀವನಶೈಲಿ ಅಭ್ಯಾಸಗಳು, ಆರೋಗ್ಯ ಪರಿಸ್ಥಿತಿಗಳು ಎಂದು ಹೇಳುತ್ತಾರೆ.

ಇದನ್ನೂ ಓದಿ: Horseshoe Luck – ಮನೆಯ ಬಾಗಿಲಿಗೆ ಕುದುರೆ ಲಾಳ ಹಾಕಿದರೆ ಅದೃಷ್ಟವಂತೆ! ಅದನ್ನು ಹಾಕುವುದು ಹೇಗೆ?

ಅಟ್ಲಾಂಟಾದ ಅಮೇರಿಕನ್ ಗ್ಲೋಬಲ್ ಡಯಾಬಿಟಿಸ್ ರಿಸರ್ಚ್ ಸೆಂಟರ್‌ನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿತಿನ್ ಸ್ಯಾಮ್ ವರ್ಗೀಸ್ ಅವರು ಇದನ್ನು ಹೇಳುತ್ತಾರೆ. ಅಮೆರಿಕ, ಇಂಗ್ಲೆಂಡ್, ಚೀನಾ ಹಾಗೂ ಭಾರತದ ಸಾವಿರಾರು ದಂಪತಿಗಳಿಂದ ಸಂಶೋಧಕರು ಆರೋಗ್ಯ ಮಾಹಿತಿ ಸಂಗ್ರಹಿಸಿದರು. ಆ ಮಾಹಿತಿಯನ್ನು ವಿಶ್ಲೇಷಿಸಿದ ನಂತರ, ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ. ಪತಿ-ಪತ್ನಿಯರ ಜೀವನಶೈಲಿ ಸಮಾನವಾಗಿರುವುದು ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವಿವರಗಳನ್ನು ‘ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್’ನಲ್ಲಿ ಪ್ರಕಟಿಸಲಾಗಿದೆ.

ಹೆಚ್ಚು ಒತ್ತಡದ ಜೀವನಶೈಲಿಯನ್ನು ಹೊಂದಿರುವ ದಂಪತಿ ಸುಖಾಸುಮ್ಮನೆ ದೇಹತೂಕ ಬರಿಸಿಕೊಳ್ಳುವ ಅವಕಾಶಗಳು ಹೆಚ್ಚಿವೆ ಎಂದು ತಜ್ಞರು ಹೇಳುತ್ತಾರೆ. ಒತ್ತಡದಿಂದ ಬಳಲುತ್ತಿರುವವರು ತುಂಬಾ ರುಚಿಕರವಾದುದನ್ನು ತಿನ್ನುತ್ತಾರೆ. ಇದು ನಮ್ಮ ರೇಸ್ಟ್​​​ ಬಡ್ಸ್​​​ ತೃಪ್ತಿಯಾಗುವವರೆಗೆ ಏನನ್ನಾದರೂ ತಿನ್ನುವ ಬಯಕೆಯನ್ನು ಉಂಟುಮಾಡುತ್ತದೆ. ಇದು ಬೊಜ್ಜು ಹೆಚ್ಚಾಗಲು ಕಾರಣ ಎನ್ನುತ್ತಾರೆ ತಜ್ಞರು. ಈ ವಿವರಗಳನ್ನು ‘ಫಿಸಿಯಾಲಜಿ ಅಂಡ್ ಬಿಹೇವಿಯರ್’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:15 am, Mon, 16 September 24