AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಳ್ಯದೆಲೆಯಿಂದ ಬಾಯಿಹುಣ್ಣಿಗೆ ಉಪಶಮನ ಸಿಗುತ್ತದೆಯೇ? ತಿಳಿಯಬೇಕಾದ ಸಂಗತಿಗಳು

ಬಾಯಿಹುಣ್ಣುಗಳಿಂದ ಮಾತನಾಡಲು ಮತ್ತು ಆಹಾರ ಸೇವಿಸಲು ತೊಂದರೆಯಾಗುತ್ತಿದೆಯೇ? ಇಂತಹ ಸಂದರ್ಭದಲ್ಲಿ ವೀಳ್ಯದೆಲೆಯ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ. ಇದರಲ್ಲಿ ಕೆಲವು ನೈಸರ್ಗಿಕ ಸಂಯುಕ್ತಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿವೆ. ಆದರೆ ಬಾಯಿಹುಣ್ಣನ್ನು ಗುಣಪಡಿಸುವಲ್ಲಿ ಇದರ ಪರಿಣಾಮಕಾರಿತ್ವಕ್ಕೆ ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳ ಅಗತ್ಯವಿದೆ. ಬಳಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.

ವೀಳ್ಯದೆಲೆಯಿಂದ ಬಾಯಿಹುಣ್ಣಿಗೆ ಉಪಶಮನ ಸಿಗುತ್ತದೆಯೇ? ತಿಳಿಯಬೇಕಾದ ಸಂಗತಿಗಳು
Betel Leaves For Mouth UlcersImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Nov 11, 2026 | 6:50 PM

Share

ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಂಡಾಗ ಮಾತನಾಡಲು, ಆಹಾರ ಸೇವಿಸಲು ಮತ್ತು ನೀರು ಕುಡಿಯಲೂ ಕಷ್ಟವಾಗುತ್ತದೆ. ಕೆಲವೊಮ್ಮೆ ಹುಣ್ಣುಗಳಿಂದ ಉರಿ, ನೋವು ಮತ್ತು ಅಸ್ವಸ್ಥತೆ ಉಂಟಾಗುತ್ತದೆ. ಇಂತಹ ಸಮಸ್ಯೆಗಳಿಗೆ ಸರಿಯಾದ ಆಹಾರ ಪದ್ಧತಿ ಮತ್ತು ಬಾಯಿಯ ಸ್ವಚ್ಛತೆಯ ಜೊತೆಗೆ ಕೆಲವು ಮನೆಮದ್ದುಗಳ ಬಗ್ಗೆಯೂ ಜನರು ಆಸಕ್ತಿ ತೋರಿಸುತ್ತಾರೆ. ಅವುಗಳಲ್ಲಿ ವೀಳ್ಯದೆಲೆಯೂ ಒಂದು. ಆಯುರ್ವೇದದಲ್ಲಿ ಮಹತ್ವ ಪಡೆದಿರುವ ವೀಳ್ಯದೆಲೆಗೆ ಕೆಲವು ನೈಸರ್ಗಿಕ ಔಷಧೀಯ ಗುಣಗಳಿವೆ. ಹಾಗಾದರೆ ಇದರ ಪ್ರಯೋಜನಗಳ ಕುರಿತ ಮಾಹಿತಿ ಸ್ಟೋರಿಯಲ್ಲಿದೆ.

ವೀಳ್ಯದೆಲೆಯಲ್ಲಿರುವ ಔಷಧೀಯ ಗುಣಗಳೇನು?

ಸಾಮಾನ್ಯವಾಗಿ ವೀಳ್ಯದೆಲೆಯಲ್ಲಿ ವಿವಿಧ ನೈಸರ್ಗಿಕ ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಸಂಯುಕ್ತಗಳು ಪ್ರಯೋಗಾಲಯದ ಅಧ್ಯಯನಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿರೋಧಕ ಗುಣಗಳನ್ನು ತೋರಿಸಿವೆ. ಹೀಗಾಗಿ ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಕೆಲವರಿಗೆ ಇದು ಬಾಯಿ ಹಣ್ಣು ಕಡಿಮೆ ಮಾಡಲು ಸಹಾಯ ಮಾಡಬಹುದು.

ಬಾಯಿಹುಣ್ಣಿನ ಸಮಸ್ಯೆಗೆ ಹೇಗೆ ಸಹಾಯ ಮಾಡಬಹುದು?

ವೀಳ್ಯದೆಲೆಯಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ಸೂಕ್ಷ್ಮಜೀವಿಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಉರಿಯೂತಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು. ಆದರೆ ಬಾಯಿಹುಣ್ಣಿನಿಂದ ಉಂಟಾಗುವ ನೋವು ಮತ್ತು ಉರಿಯನ್ನು ಕಡಿಮೆ ಮಾಡುವಲ್ಲಿ ಇದರ ಪರಿಣಾಮಕಾರಿತ್ವ ಇನ್ನೂ ಸ್ಪಷ್ಟವಾಗಿ ಸಾಬೀತಾಗಿಲ್ಲ. ತಾಜಾ ವೀಳ್ಯದೆಲೆ ಬಾಯಿಯ ದುರ್ವಾಸನೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ ತಾಜಾತನದ ಅನುಭವ ನೀಡಬಹುದು. ಆದರೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಲು ಹಲ್ಲುಜ್ಜುವುದು ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮುಖ್ಯ.

ಇದನ್ನೂ ಓದಿ: ಚಳಿಗಾಲದಲ್ಲಿ ಸೀತಾಫಲ ತಿನ್ನುತ್ತಿದ್ದೀರಾ? ಹೃದಯದಿಂದ ರೋಗನಿರೋಧಕ ಶಕ್ತಿವರೆಗೆ ಹಲವು ಪ್ರಯೋಜನಗಳು!

ವೀಳ್ಯದೆಲೆಯನ್ನು ಬಳಸುವ ವಿಧಾನ

ವೀಳ್ಯದೆಲೆಯನ್ನು ಬಳಸುವುದಾದರೆ ಸ್ವಚ್ಛವಾಗಿ ತೊಳೆದ ತಾಜಾ ಎಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ತಂಬಾಕು, ಸುಣ್ಣ, ಅಡಿಕೆ ಅಥವಾ ಇತರ ರಾಸಾಯನಿಕ ಪದಾರ್ಥಗಳನ್ನು ಸೇರಿಸಿದ ಪಾನ್ ಸೇವಿಸಬಾರದು. ಇವು ಬಾಯಿಯ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಕೆಲವರು ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸುತ್ತಾರೆ. ಇದು ಕೆಲವರಿಗೆ ಹುಣ್ಣು ಕಡಿಮೆ ಮಾಡುವುದಕ್ಕೆ ಸಹಾಯ ಮಾಡಬಹುದು ಆದರೆ ಇದು ಬಾಯಿಹುಣ್ಣಿಗೆ ಸಾಬೀತಾದ ಚಿಕಿತ್ಸೆಯಲ್ಲ. ಕಿರಿಕಿರಿ ಉಂಟಾದರೆ ಬಳಸುವುದನ್ನು ನಿಲ್ಲಿಸಬೇಕು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಸಾಮಾನ್ಯವಾಗಿ ಬಾಯಿಹುಣ್ಣುಗಳು ಒಂದರಿಂದ ಎರಡು ವಾರಗಳಲ್ಲಿ ಕಡಿಮೆಯಾಗಬಹುದು. ಆದರೆ ಎರಡು ವಾರಗಳಿಗೂ ಹೆಚ್ಚು ಕಾಲ ಹುಣ್ಣು ಉಳಿದರೆ, ಪದೇಪದೇ ಕಾಣಿಸಿಕೊಂಡರೆ, ತೀವ್ರ ನೋವು ಅಥವಾ ಜ್ವರ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ವೀಳ್ಯದೆಲೆಯನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More