AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಎದ್ದ ತಕ್ಷಣ ಕಹಿ ಅಥವಾ ಹುಳಿ ತೇಗು ಬರುವುದಕ್ಕೆ ಕಾರಣವೇನು? ನಿವಾರಣೆಗೆ ಅನುಸರಿಸಿ ಈ ಸರಳ ಕ್ರಮಗಳು

ಬೆಳಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ಕಹಿ ಅಥವಾ ಹುಳಿ ರುಚಿ ಕಾಣಿಸಿಕೊಳ್ಳುತ್ತಿದೆಯೇ? ಇದಕ್ಕೆ ಆಸಿಡ್ ರಿಫ್ಲಕ್ಸ್, ಬಾಯಿಯಲ್ಲಿ ಲಾಲಾರಸದ ಕೊರತೆ, ನಿರ್ಜಲೀಕರಣ ಅಥವಾ ಹಲ್ಲಿನ ಸಮಸ್ಯೆಗಳು ಕಾರಣವಾಗಿರಬಹುದು. ರಾತ್ರಿ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವೂ ಈ ತೊಂದರೆಯನ್ನು ಹೆಚ್ಚಿಸಬಹುದು. ಸರಿಯಾದ ಆಹಾರ ಕ್ರಮ, ಸಾಕಷ್ಟು ನೀರು ಕುಡಿಯುವುದು ಮತ್ತು ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯವಾಗಬಹುದು.

ಬೆಳಿಗ್ಗೆ ಎದ್ದ ತಕ್ಷಣ ಕಹಿ ಅಥವಾ ಹುಳಿ ತೇಗು ಬರುವುದಕ್ಕೆ ಕಾರಣವೇನು? ನಿವಾರಣೆಗೆ ಅನುಸರಿಸಿ ಈ ಸರಳ ಕ್ರಮಗಳು
Bitter Taste In Mouth In The MorningImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Nov 09, 2026 | 8:18 PM

Share

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಬಾಯಿಯಲ್ಲಿ ಕಹಿ ಅಥವಾ ಹುಳಿ ರುಚಿ ಅನುಭವವಾಗುತ್ತಿದೆಯೇ? ಕೆಲವರು ಇದನ್ನು ರಾತ್ರಿ ಸೇವಿಸಿದ ಆಹಾರದ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆ ಪದೇಪದೆ ಕಾಣಿಸಿಕೊಳ್ಳುತ್ತಿದ್ದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೊಟ್ಟೆಯ ಆಮ್ಲವು ಅನ್ನನಾಳದ ಮೂಲಕ ಗಂಟಲು ಅಥವಾ ಬಾಯಿಯವರೆಗೆ ಮರಳುವುದರಿಂದಲೂ ಈ ರೀತಿಯ ರುಚಿ ಉಂಟಾಗಬಹುದು.

ಆಸಿಡ್ ರಿಫ್ಲಕ್ಸ್ ಪ್ರಮುಖ ಕಾರಣವಾಗಿರಬಹುದು

ಬೆಳಗ್ಗೆ ಬಾಯಿಯಲ್ಲಿ ಕಹಿ ಅಥವಾ ಹುಳಿ ರುಚಿ ಕಾಣಿಸಿಕೊಳ್ಳಲು ಆಸಿಡ್ ರಿಫ್ಲಕ್ಸ್ ಒಂದು ಸಾಮಾನ್ಯ ಕಾರಣವಾಗಿದೆ. ಈ ಸ್ಥಿತಿಯಲ್ಲಿ ಹೊಟ್ಟೆಯಲ್ಲಿರುವ ಆಮ್ಲ ಅಥವಾ ಆಹಾರದ ಕೆಲವು ಅಂಶಗಳು ಮತ್ತೆ ಅನ್ನನಾಳದ ಕಡೆಗೆ ಬರುತ್ತವೆ. ಇದರಿಂದ ಗಂಟಲಿನಲ್ಲಿ ಉರಿ, ಹುಳಿ ಡಕಾರ ಅಥವಾ ತೇಗು ಮತ್ತು ಬಾಯಿಯಲ್ಲಿ ಅಹಿತಕರ ರುಚಿ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಆಗಾಗ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ರಾತ್ರಿ ಊಟದ ಸಮಯವೂ ಮುಖ್ಯ

ರಾತ್ರಿ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವಿದ್ದರೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗಬಹುದು. ವಿಶೇಷವಾಗಿ ಅತಿಯಾದ ಆಹಾರ, ಕೊಬ್ಬಿನ ಪದಾರ್ಥಗಳು ಮತ್ತು ಖಾರವಾದ ಆಹಾರ ಸೇವಿಸಿದ ನಂತರ ಮಲಗುವುದರಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಿ.

ಇದನ್ನೂ ಓದಿ: ಚಳಿಗಾಲದಲ್ಲಿ ಸೀತಾಫಲ ತಿನ್ನುತ್ತಿದ್ದೀರಾ? ಹೃದಯದಿಂದ ರೋಗನಿರೋಧಕ ಶಕ್ತಿವರೆಗೆ ಹಲವು ಪ್ರಯೋಜನಗಳು!

ಬಾಯಿಯಲ್ಲಿ ಲಾಲಾರಸದ ಪ್ರಮಾಣ ಕಡಿಮೆಯಾಗುವುದು

ನಿದ್ರೆಯ ಸಮಯದಲ್ಲಿ ಸಹಜವಾಗಿಯೇ ಲಾಲಾರಸದ ಉತ್ಪಾದನೆ ಕಡಿಮೆಯಾಗುತ್ತದೆ. ಲಾಲಾರಸವು ಬಾಯಿಯನ್ನು ತೇವವಾಗಿಡಲು ಮತ್ತು ಆಹಾರದ ಸಣ್ಣ ಕಣಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರ ಪ್ರಮಾಣ ಕಡಿಮೆಯಾದಾಗ ಬೆಳಗ್ಗೆ ಬಾಯಿ ಒಣಗುವುದು, ರುಚಿಯಲ್ಲಿ ಬದಲಾವಣೆ ಮತ್ತು ಬಾಯಿಯ ದುರ್ವಾಸನೆ ಕಾಣಿಸಿಕೊಳ್ಳಬಹುದು. ದೇಹದಲ್ಲಿ ನೀರಿನ ಕೊರತೆ ಇರುವುದು ಅಥವಾ ಕೆಲವು ಔಷಧಿಗಳ ಸೇವನೆಯೂ ಬಾಯಿ ಒಣಗಲು ಕಾರಣವಾಗಬಹುದು. ಹಲ್ಲು ಮತ್ತು ವಸಡುಗಳ ಸಮಸ್ಯೆಗಳೂ ಬಾಯಿಯಲ್ಲಿ ಅಹಿತಕರ ರುಚಿಗೆ ಕಾರಣವಾಗುವ ಸಾಧ್ಯತೆಯಿದೆ.

ಬೆಳಗ್ಗೆ ಕಹಿ ರುಚಿ ಬರದಂತೆ ತಡೆಯಲು ಏನು ಮಾಡಬೇಕು?

  • ಬೆಳಗ್ಗೆ ಎದ್ದ ತಕ್ಷಣ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸಿ.
  • ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ರಾತ್ರಿ ಊಟವನ್ನು ಮಲಗುವ ಕನಿಷ್ಠ ಮೂರು ಗಂಟೆಗಳ ಮುಂಚಿತವಾಗಿ ಮಾಡಿ.
  • ಅತಿಯಾದ ಖಾರ, ಕೊಬ್ಬಿನ ಆಹಾರ ಮತ್ತು ನಿಮಗೆ ತೊಂದರೆ ಉಂಟುಮಾಡುವ ಆಹಾರಗಳನ್ನು ಕಡಿಮೆ ಮಾಡಿ.
  • ಚಹಾ ಮತ್ತು ಕಾಫಿ ಸೇವನೆಯಿಂದ ಲಕ್ಷಣಗಳು ಹೆಚ್ಚಾದರೆ ಅವುಗಳ ಪ್ರಮಾಣವನ್ನು ನಿಯಂತ್ರಿಸಿ.
  • ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳಿ. ಬೆಳಗ್ಗೆ ಬಾಯಿಯಲ್ಲಿ ಕಹಿ ಅಥವಾ ಹುಳಿ ರುಚಿ ಆಗಾಗ್ಗೆ ಕಾಣಿಸಿಕೊಂಡರೆ, ಎದೆಯುರಿ ಅಥವಾ ನುಂಗಲು ತೊಂದರೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ. ನಿರಂತರ ಸಮಸ್ಯೆಯನ್ನು ನಿರ್ಲಕ್ಷಿಸದೆ ಅದರ ಮೂಲ ಕಾರಣವನ್ನು ಪತ್ತೆಹಚ್ಚುವುದು ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಚೌಡೇಶ್ವರಿ ದೇವಾಲಯಕ್ಕೆ ವಿಜಯಲಕ್ಷ್ಮಿ ಭೇಟಿ, ದರ್ಶನ್​​ಗಾಗಿ ವಿಶೇಷ ಪೂಜೆ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಸಿದ್ದರಾಮಯ್ಯರೊಂದಿಗೆ ಡಿಕೆಶಿ ಚರ್ಚೆ: ಕೆಲ ವಿಚಾರ ತಿಳಿಸಿದ್ದೇನೆ; ಸಿಎಂ
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ಇಡೀ ರಾಜ್ಯದ ಮಹಿಳೆಯರಿಗಿದೆ 'ಉಚಿತ ಬಸ್', ನಮಗೇಕಿಲ್ಲ?
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ