Black Salt In Tea: ಚಹಾದಲ್ಲಿ ನೀವು ಕಪ್ಪು ಉಪ್ಪು ಮಿಶ್ರಣ ಮಾಡಿ ಕುಡಿದರೆ ಈ ಅದ್ಭುತ ಆರೋಗ್ಯ ಪ್ರಯೋಜನಗಳ ಪಡೆಯುವಿರಿ

|

Updated on: May 20, 2023 | 9:00 AM

ಭಾರತದಲ್ಲಿ ಬಹಳಷ್ಟು ಮಂದಿ ಚಹಾದೊಂದಿಗೆ ತಮ್ಮ ದಿನವನ್ನು ಶುರು ಮಾಡುತ್ತಾರೆ. ಸಾಮಾನ್ಯವಾಗಿ ಬ್ಲ್ಯಾಕ್​ ಟೀ, ಲೆಮನ್ ಟೀ, ಹಾಲು ಮಿಶ್ರಿತ ಚಹಾವನ್ನು ನೀವು ನೋಡಿರಬಹುದು.

Black Salt In Tea: ಚಹಾದಲ್ಲಿ ನೀವು ಕಪ್ಪು ಉಪ್ಪು ಮಿಶ್ರಣ ಮಾಡಿ ಕುಡಿದರೆ ಈ ಅದ್ಭುತ ಆರೋಗ್ಯ ಪ್ರಯೋಜನಗಳ ಪಡೆಯುವಿರಿ
ಕಪ್ಪು ಉಪ್ಪು
Follow us on

ಭಾರತದಲ್ಲಿ ಬಹಳಷ್ಟು ಮಂದಿ ಚಹಾದೊಂದಿಗೆ ತಮ್ಮ ದಿನವನ್ನು ಶುರು ಮಾಡುತ್ತಾರೆ. ಸಾಮಾನ್ಯವಾಗಿ ಬ್ಲ್ಯಾಕ್​ ಟೀ, ಲೆಮನ್ ಟೀ, ಹಾಲು ಮಿಶ್ರಿತ ಚಹಾವನ್ನು ನೀವು ನೋಡಿರಬಹುದು. ಈ ಎಲ್ಲಾ ಚಹಾಗಳಲ್ಲಿ ಸಕ್ಕರೆ ಹಾಕಿ ಅಥವಾ ಹಾಕದೇ ಕುಡಿಯಬಹುದು. ಆದರೆ ಚಹಾಗೆ ಉಪ್ಪು ಸೇರಿಸಿ ಎಂದಾದರೂ ಕುಡಿದಿದ್ದೀರಾ. ಚಹಾಕ್ಕೆ ಉಪ್ಪನ್ನು ಸೇರಿಸುವುದರಿಂದ ನೀವು ಅಪಾರ ಪ್ರಯೋಜನಗಳನ್ನು ಪಡೆಯಬಹುದು. ಚಹಾದಲ್ಲಿ ಉಪ್ಪಿನ ಬಳಕೆ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ನೀವು ಇಂದಿನಿಂದ ಕಪ್ಪು ಉಪ್ಪನ್ನು ಸೇರಿಸಿ ಚಹಾ ಕುಡಿಯಲು ಪ್ರಾರಂಭಿಸಿದರೆ, ಅದರಿಂದ ನಿಮಗೆ ಸಿಗುವ ಪ್ರಯೋಜನಗಳನ್ನು ನೋಡಿ. ಉದಾಹರಣೆಗೆ ನಮ್ಮ ಹೊಟ್ಟೆಯ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ಅನೇಕ ಪ್ರಯೋಜನಗಳಿವೆ.

ಈ ಚಹಾಗಳಿಗೆ ಕಪ್ಪು ಉಪ್ಪನ್ನು ಸೇರಿಸಿ
1. ಗ್ರೀನ್ ಟೀಯಲ್ಲಿ ಕಪ್ಪು ಉಪ್ಪನ್ನು ಮಿಶ್ರಣ ಮಾಡಿ
ನೀವು ಗ್ರೀನ್ ಟೀ ಕುಡಿಯಲು ಇಷ್ಟಪಡುತ್ತಿದ್ದರೆ, ಖಂಡಿತವಾಗಿಯೂ ಅದರಲ್ಲಿ ಕಪ್ಪು ಉಪ್ಪನ್ನು ಸೇರಿಸಿ. ಏಕೆಂದರೆ ಗ್ರೀನ್​ ಠಿಘೇ ಕಪ್ಪು ಉಪ್ಪನ್ನು ಸೇರಿಸುವುದರಿಂದ ಅದರ ಜೀರ್ಣಕಾರಿ ಗುಣಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಪ್ಪು ಉಪ್ಪನ್ನು ಬೆರೆಸಿದ ಹಸಿರು ಚಹಾವನ್ನು ಕುಡಿಯಿರಿ. ಇದರೊಂದಿಗೆ, ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ, ಜೊತೆಗೆ ಅಜೀರ್ಣ ಮತ್ತು ಆಮ್ಲೀಯತೆಯಂತಹ ಹೊಟ್ಟೆಯ ಅನೇಕ ಸಮಸ್ಯೆಗಳು ಸಹ ದೂರವಾಗುತ್ತವೆ.

2. ನಿಂಬೆ ಚಹಾದಲ್ಲಿ ಕಪ್ಪು ಉಪ್ಪನ್ನು ಮಿಶ್ರಣ ಮಾಡಿ
ಲೆಮನ್ ಟೀಯಲ್ಲಿ ಕಪ್ಪು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ಕಪ್ಪು ಉಪ್ಪು ಬೆರೆಸಿದ ನಿಂಬೆ ಚಹಾವನ್ನು ಕುಡಿಯಿರಿ, ಇದು ನಿಮಗೆ ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ. ಈ ಚಹಾವು ಹೊಟ್ಟೆಯ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಈ ಟೀ ಕುಡಿಯುವುದರಿಂದ ನೀವು ಸೇವಿಸಿದ ಪ್ರತಿಯೊಂದು ಆಹಾರವೂ ಬೇಗ ಜೀರ್ಣವಾಗುತ್ತದೆ. ನಿಂಬೆ ಚಹಾಕ್ಕೆ ಕಪ್ಪು ಉಪ್ಪನ್ನು ಸೇರಿಸುವ ಮೂಲಕ ದೇಹವು ಉತ್ತಮ ರೀತಿಯಲ್ಲಿ ಡಿಟಾಕ್ಸ್ ಮಾಡಲು ಸಾಧ್ಯವಾಗುತ್ತದೆ.

3. ಬ್ಲ್ಯಾಕ್​ ಟೀನಲ್ಲಿ ಕಪ್ಪು ಉಪ್ಪನ್ನು ಮಿಶ್ರಣ ಮಾಡಿ

ಕಪ್ಪು ಚಹಾವನ್ನು ಕುಡಿಯಲು ಇಷ್ಟಪಡುವವರು ತಮ್ಮ ಚಹಾದಲ್ಲಿ ಕಪ್ಪು ಉಪ್ಪನ್ನು ಸೇರಿಸಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಕಪ್ಪು ಬ್ಲ್ಯಾಕ್​ ಟೀಗೆ ಕಪ್ಪು ಉಪ್ಪನ್ನು ಸೇರಿಸುವುದರಿಂದ ತೂಕ ನಷ್ಟದ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ವಾಸ್ತವವಾಗಿ, ಬ್ಲ್ಯಾಕ್​ ಟೀ ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಇದರಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ ಮತ್ತು ಕೊಬ್ಬು ಕೂಡ ಕಡಿಮೆಯಾಗುತ್ತದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ