AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blueberries: ಮಧುಮೇಹ ನಿಯಂತ್ರಣಕ್ಕೆ ನೇರಳೆ ಹಣ್ಣುಗಳು ಸಹಕಾರಿ: ತಜ್ಞರ ಸಲಹೆಗಳೇನು?

ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದರ ವರದಿಯಲ್ಲಿ ನೇರಳೆ ಹಣ್ಣು ಅಥವಾ ಬ್ಲ್ಯೂ ಬೆರಿ ಹಣ್ಣು ಮಧುಮೇಹ ನಿಯಂತ್ರಣ ಮಾಡಲಿದೆ ಎಂದು ಹೇಳಲಾಗಿದೆ. ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಈ ನೇರಳೆ ಹಣ್ಣು ಪರಿಹಾರ ನೀಡಲಿದೆ.

Blueberries: ಮಧುಮೇಹ ನಿಯಂತ್ರಣಕ್ಕೆ ನೇರಳೆ ಹಣ್ಣುಗಳು ಸಹಕಾರಿ: ತಜ್ಞರ ಸಲಹೆಗಳೇನು?
ನೇರಳೆಹಣ್ಣು
TV9 Web
| Edited By: |

Updated on:Jan 11, 2022 | 1:00 PM

Share

ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ದೇಹದಲ್ಲಿ ಇನ್ಸುಲಿನ್​ ಕೊರತೆಯಾದಾಗ ಮಧುಮೇಹ ಅಥವಾ ಡಯಾಬಿಟಿಸ್​ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್​ ಒಂದು ಹಾರ್ಮೋನ್​ ಆಗಿದ್ದು, ಜೀವಕೋಶಗಳು ಆಹಾರದಿಂದ ಪಡೆಯುವ ಗ್ಲೂಕೋಸ್​ ಅನ್ನು ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ. ಮೆದೋಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್​ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುವುದನ್ನು ತಡೆಯುತ್ತದೆ. ಸಕ್ಕರೆ ಪ್ರಮಾಣವು ರಕ್ತದಲ್ಲಿ ಶೇಖರಣೆಗೊಳ್ಳುವ ಬದಲು ಜೀವಕೋಶಗಳಿಗೆ ಸರಬರಾಜಾಗುವಂತೆ ಮಾಡುತ್ತದೆ.

ಮಧುಮೇಹವನ್ನು ವೈದ್ಯರ ಔಷಧಗಳ ಮೂಲಕ ಕಡಿಮೆ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಆಹಾರದ ಅಭ್ಯಾಸದಲ್ಲಿ ಬದಲಾವಣೆ, ಕೆಲವು ವ್ಯಾಯಾಮಗಳು, ಆಹಾರದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಸೇವಿಸದಿರುವುದರ ಮೂಲಕ ಡಯಾಬಿಟಿಸ್​ ಅನ್ನು ನಿಯಂತ್ರಿಸಿಕೊಳ್ಳಬಹುದು. ಅದರ ಜತೆಗೆ ಕಾರ್ಬೋಹೈಡ್ರೇಟ್​ ಅಂಶ ಕಡಿಮೆ ಇರುವ ಆಹಾರಗಳ ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು.  ಆದರೆ ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದರ ವರದಿಯಲ್ಲಿ ನೇರಳೆ ಹಣ್ಣು ಅಥವಾ ಬ್ಲ್ಯೂ ಬೆರಿ ಹಣ್ಣು ಮಧುಮೇಹ ನಿಯಂತ್ರಣ ಮಾಡಲಿದೆ ಎಂದು ಹೇಳಲಾಗಿದೆ. ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಈ ನೇರಳೆ ಹಣ್ಣು ಪರಿಹಾರ ನೀಡಲಿದೆ.

ನೆರಳೆ ಹಣ್ಣುಗಳಲ್ಲಿ ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್​, ವಿಟಮಿನ್​ ಸಿ, ಕ್ಯಾನ್ಸರ್​​ ವಿರೋಧಿ ಗುಣ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ನೇರಳೆ ಹಣ್ಣು ಒಂದು ಪರಿಪೂರ್ಣ ಆಹಾರವಾಗಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.

ನೇರಳೆ ಹಣ್ಣುಗಳು ಮಧುಮೇಹ ತಡೆಗೆ ಸಹಕಾರಿ ಎಂದು ಪತ್ತೆ ಮಾಡಲು ಅಧ್ಯಯನದಲ್ಲಿ ಪಾಲ್ಗೊಂಡವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮೊದಲ ಗುಂಪಿಗೆ ಬ್ರೆಡ್​ ಮತ್ತು ನೇರಳೆ ಹಣ್ಣುಗಳನ್ನು, ಎರಡನೇ ಗುಂಪಿಗೆ ನೇರಳೆ ಹಣ್ಣುಗಳನ್ನು ಹಾಗೂ ಮೂರನೇ ಗುಂಪಿಗೆ ಕೇವಲ ಬ್ರೆಡ್​ಅನ್ನು ನೀಡಲಾಗಿತ್ತು.  7 ದಿನಗಳ ಬಳಿಕ ರಕ್ತದ ಮಾದರಿಗಳನ್ನು ಕಲೆ ಹಾಕಿ ಪರೀಕ್ಷಿಸಲಾಯಿತು. ಆಗ ನೇರಳೆ ಹಣ್ಣುಗಳನ್ನು ತಿಂದ  ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರುವುದು ಕಂಡುಬಂದಿದೆ. ಹೀಗಾಗಿ ತಜ್ಞರು ನಿಯಮಿತ ನೇರಳೆ ಹಣ್ಣಿನ ಸೇವನೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ಕಂಡುಕೊಂಡಿದ್ದಾರೆ.  ಬ್ರಿಟಿಷ್​ ಜರ್ನಲ್​ನಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ.

ಇದನ್ನೂ ಓದಿ:

Beauty Benefits: ತೆಂಗಿನ ಎಣ್ಣೆಯ ಜತೆಗೆ ಕರ್ಪೂರ; ತ್ವಚೆಯ ಆರೋಗ್ಯಕ್ಕೆ ಈ ಪ್ರಯೋಗ ನೀವು ಮಾಡಲೇಬೇಕು

Published On - 12:59 pm, Tue, 11 January 22

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ