AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brinjal Side Effects: ಈ 5 ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬದನೆಕಾಯಿಯಿಂದ ದೂರವಿರಿ

ಬದನೆಕಾಯಿ(Brinjal) ಎಂದಾಕ್ಷಣ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ ನೆನಪಾಗಿ ನಾಲಿಗೆಯಲ್ಲಿ ನೀರೂರದೆ ಇರದು.

Brinjal Side Effects: ಈ 5 ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬದನೆಕಾಯಿಯಿಂದ ದೂರವಿರಿ
ಬದನೆಕಾಯಿ
ನಯನಾ ರಾಜೀವ್
|

Updated on: Mar 27, 2023 | 2:21 PM

Share

ಬದನೆಕಾಯಿ(Brinjal) ಎಂದಾಕ್ಷಣ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ ನೆನಪಾಗಿ ನಾಲಿಗೆಯಲ್ಲಿ ನೀರೂರದೆ ಇರದು. ಜತೆಗೆ ಬದನೆಕಾಯಿ ಪಲ್ಯ, ಸಾಂಬಾರು, ಮಲೆನಾಡಿನಲ್ಲಿ ಮಾಡುವ ಬದನೆಕಾಯಿ ಮೊಸರುಗೊಜ್ಜು ಹೀಗೆ ಹತ್ತು ಹಲವು ಪದಾರ್ಥಗಳನ್ನು ಮಾಡಲಾಗುತ್ತದೆ. ಮೂಲಂಗಿ ರೀತಿಯೇ ಬದನೆ ಫ್ರೈ ಕೂಡ ಮಾಡಬಹುದು, ನೇರಳೆ ಬಣ್ಣವನ್ನು ಹೊರತುಪಡಿಸಿ,  ಹಸಿರು ಮತ್ತು ಬಿಳಿ ಬಣ್ಣಗಳಲ್ಲಿಯೂ ಬದನೆ ಲಭ್ಯವಿದೆ.

ಈ ಆರೋಗ್ಯ ಸಮಸ್ಯೆ ಇರುವವರು ಬದನೆ ತಿನ್ನುವುದನ್ನು ತಪ್ಪಿಸಬೇಕು 1. ಮೂತ್ರಕೋಶದ ಕಲ್ಲಿನ ಅಪಾಯ ಕಿಡ್ನಿ ಸ್ಟೋನ್ ಇರುವವರು ಅಂದರೆ ಮೂತ್ರಕೋಶದ ಕಲ್ಲಿನ ಬದನೆ ತಿನ್ನಬಾರದು. ಬದನೆ ಬೀಜಗಳು ಹೆಚ್ಚುವರಿ ಕಲ್ಲುಗಳನ್ನು ಉತ್ಪತ್ತಿ ಮಾಡುವ ಕೆಲಸ ಮಾಡುತ್ತವೆ. ಇದು ಮೂತ್ರಪಿಂಡಕ್ಕೆ ಹಾನಿಯನ್ನುಂಟುಮಾಡುತ್ತದೆ.

2. ಮೂಳೆಗಳಿಗೆ ಒಳ್ಳೆಯದಲ್ಲ ಆಕ್ಸಲೇಟ್ ಅಂಶ ಬದನೆಕಾಯಿಯಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯು ಕಡಿಮೆಯಾಗುತ್ತದೆ. ಮೂಳೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಮೂಳೆಗಳು ದುರ್ಬಲವಾಗಿರುವವರು ಬದನೆ ತಿನ್ನುವುದನ್ನು ತಪ್ಪಿಸಲೇಬೇಕು.

3. ಪೈಲ್ಸ್ ರೋಗಿಗಳು, ರಕ್ತಹೀನತೆಯಿಂದ ಬಳಲುತ್ತಿರುವವರು ಬದನೆ ತಿನ್ನಬಾರದು. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಮತ್ತಷ್ಟು ಓದಿ: ಒಲೆಯಲ್ಲಿ ಬದನೆಕಾಯಿ ಸುಟ್ಟು ಖಾರ ಖಾರ ಚಟ್ನಿ ಮಾಡಿ; ವಿಧಾನ ಹೀಗಿದೆ

4. ಸಂಧಿವಾತ ರೋಗಿಗಳು ಕೂಡ ಬದನೆ ತಿನ್ನಬಾರದು ಸಂಧಿವಾತದ ಸಮಸ್ಯೆ ಇದ್ದರೂ ಬದನೆಕಾಯಿ ತಿನ್ನಬಾರದು. ಈ ಕಾರಣದಿಂದಾಗಿ, ಸಂಧಿವಾತದ ಸಮಸ್ಯೆಯು ಹೆಚ್ಚು ಗಂಭೀರವಾಗಬಹುದು.

5. ಈ ಸಮಸ್ಯೆಗಳು ಕೂಡ ಬರಬಹುದು

ಹೆಚ್ಚು ಬದನೆಕಾಯಿ ತಿನ್ನುವುದು ಕೂಡ ಹಾನಿಕಾರಕ. ಇದರಿಂದಾಗಿ ಹೊಟ್ಟೆನೋವು, ಹೊಟ್ಟೆ ನೋವು, ವಾಂತಿ, ತಲೆನೋವು, ತುರಿಕೆ ಮುಂತಾದ ಸಮಸ್ಯೆಗಳು ಕಾಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ