ದೇಶದಲ್ಲಿ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಹಾಗಾಗಿ ಈ ವೈರಸ್ ಬಗ್ಗೆ ಎಲ್ಲರ ಮನಸ್ಸಿನಲ್ಲಿಯೂ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದು, ಈ ವೈರಸ್ ಕೊರೊನಾದಂತೆ ಅಪಾಯಕಾರಿಯೇ ಅಥವಾ ಇಲ್ಲವೇ ಎಂಬ ಅನುಮಾನ ಹುಟ್ಟುಕೊಂಡಿದೆ. ಒಂದು ಪ್ರಕರಣ ಬೆಳೆಕಿಗೆ ಬರುತ್ತಿದ್ದಂತೆ ಜನರಲ್ಲಿನ ಆತಂಕ ಇನ್ನು ಹೆಚ್ಚಾಗಿದ್ದು, ಈ ವೈರಸ್ ನಿಂದ ಗರ್ಭಿಣಿಯರಿಗೆ ಅಪಾಯವಿದೆಯೇ? ವೈರಸ್ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದೇ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಜನರಲ್ಲಿ ಮೂಡಿದ್ದು, ತಜ್ಞರು ನೀಡಿದ ಉತ್ತರ ಇಲ್ಲಿದೆ.
ವಿಶ್ವದಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಈ ವೈರಸ್ ಗರ್ಭಿಣಿಯರ ಮೇಲೂ ಪರಿಣಾಮ ಬೀರಬಹುದು. ಮಹಿಳೆ ಗರ್ಭಿಣಿಯಾಗಿದ್ದರೆ ಮತ್ತು ಸೋಂಕಿಗೆ ಒಳಗಾದರೆ, ಈ ವೈರಸ್ ತಾಯಿಯಿಂದ ಹುಟ್ಟಲಿರುವ ಮಗುವಿಗೆ ಸಹ ಹರಡಬಹುದು ಎಂದು ತಜ್ಞರು ಹೇಳುತ್ತಾರೆ. ಈ ವೈರಸ್ ಕಂಡು ಬಂದಲ್ಲಿ ಗರ್ಭದಲ್ಲಿರುವ ಮಗು ಸಾಯುವ ಅಪಾಯವಿದೆ. ಗರ್ಭಿಣಿಯರಲ್ಲಿ ಈ ವೈರಸ್ ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದರೆ ತಕ್ಷಣ ಅದಕ್ಕೆ ಸರಿಯಾದ ಮದ್ದನ್ನು ಪ್ರಾರಂಭಿಸಬೇಕು.
ಜಿಟಿಬಿ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗದ ಡಾ. ಮಂಜು ಸೇಠ್ ಹೇಳುವ ಪ್ರಕಾರ ತಾಯಿಗೆ ಈ ವೈರಸ್ ಸೋಂಕು ತಗುಲಿರುವುದು ಕಂಡು ಬಂದರೆ, ಅವಳು ತಕ್ಷಣ ಆಸ್ಪತ್ರೆಗೆ ದಾಖಲಾಗಿ ಅಗತ್ಯವಿರುವ ಔಷಧಗಳನ್ನು ಪಡೆಯಬೇಕು ಏಕೆಂದರೆ ಈ ವೈರಸ್ ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಮಗುವಿಗೆ ಹಾನಿ ಮಾಡಬಹುದು. ಗರ್ಭಿಣಿಯರಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಂಡು ಅದು ದೃಢಪಟ್ಟರೆ ಗರ್ಭಪಾತವಾಗುವ ಭಯವಿರುತ್ತದೆ. ಆದ್ದರಿಂದ, ನೀವು ಯಾವುದೇ ರೀತಿಯ ರೋಗಲಕ್ಷಣಗಳನ್ನು ಗಮನಿಸಿದರೆ, ಮೊದಲು ವೈದ್ಯರ ಬಳಿ ಹೋಗಿ ಸರಿಯಾಗಿ ಪರೀಕ್ಷಿಸಿಕೊಳ್ಳಿ. ಏಕೆಂದರೆ ಗರ್ಭಾವಸ್ಥೆಯಲ್ಲಿ ತಾಯಿಯ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ, ಆದ್ದರಿಂದ ಅವಳು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದೂ ಅಲ್ಲದೆ ವಿದೇಶದಿಂದ ಬಂದ ಅಥವಾ ಅಂತಹ ರೋಗಲಕ್ಷಣಗಳು ಕಂಡು ಬಂದಿರುವ ಯಾರೊಂದಿಗೂ ಸಂಪರ್ಕಕ್ಕೆ ಬರಬೇಡಿ.
ಇದನ್ನೂ ಓದಿ: ರಾತ್ರಿಯಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಅಪಾಯದಲ್ಲಿದೆ ಎಂದರ್ಥ
ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ 5 ರಿಂದ 21 ದಿನಗಳ ನಂತರ ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ ಮತ್ತು ದಣಿವಿನ ಭಾವನೆಯನ್ನು ಉಂಟು ಮಾಡಬಹುದು. ಕೆಲವು ದಿನಗಳ ನಂತರ, ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳಬಹುದು, ಎಂಪಾಕ್ಸ್ ಹೆಚ್ಚು ಗಂಭೀರವಾದರೆ ವ್ಯಕ್ತಿಯು ಸಾಯಬಹುದು.
ಸೋಂಕಿತ ವ್ಯಕ್ತಿಯ ಚರ್ಮದ ಮೇಲಿನ ಗುಳ್ಳೆಗಳಿಂದ ಬರುವ ದ್ರವ ಸೇರಿದಂತೆ ಆತನ ಸಂಪರ್ಕಕ್ಕೆ ಬರುವುದರಿಂದ, ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಹೀಗಾಗಿ ಈ ವೈರಸ್ ಗರ್ಭಿಣಿಯಿಂದ ಅವಳ ಬೆಳೆಯುತ್ತಿರುವ ಮಗುವಿಗೆ ಹರಡಬಹುದು. ಈಗ ಹೆಚ್ಚಿನ ಪ್ರಕರಣಗಳು ಕಂಡುಬಂದಿಲ್ಲವಾದರೂ, ಗರ್ಭಾವಸ್ಥೆಯಲ್ಲಿ ದೃಢಪಡಿಸಿದ ಎಂಪೋಕ್ಸ್ ಸೋಂಕಿನ ಕೆಲವು ಪ್ರಕರಣಗಳಲ್ಲಿ ಗರ್ಭಪಾತಗಳು ವರದಿಯಾಗಿವೆ. ಇಲ್ಲಿಯ ವರೆಗೆ ವರದಿಯಾದ ಪ್ರಕರಣಗಳಲ್ಲಿ, ಗರ್ಭಾವಸ್ಥೆಯಲ್ಲಿ ತಾಯಿ ಈ ವೈರಸ್ ಸೋಂಕಿಗೆ ಒಳಗಾದ ನಂತರ ಹೆರಿಗೆಯ ಒಂದು ಪ್ರಕರಣ ಮತ್ತು ಅಕಾಲಿಕ ಹೆರಿಗೆಯ ಒಂದು ಪ್ರಕರಣ ಕಂಡು ಬಂದಿದೆ, ಎರಡೂ ಪ್ರಕರಣಗಳಲ್ಲಿ, ಮಕ್ಕಳಲ್ಲಿ ಎಂಪಾಕ್ಸ್ ಸೋಂಕು ಸಹ ಕಂಡು ಬಂದಿದೆ. ಅಲ್ಲದೆ, ಈ ವೈರಸ್ ಹಾಲುಣಿಸುವ ತಾಯಂದಿರಿಂದ ಅವರ ಮಕ್ಕಳಿಗೂ ಹರಡಬಹುದು. ಆದ್ದರಿಂದ, ಈ ಸಮಯದಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಮಗುವನ್ನು ಸೋಂಕಿನಿಂದ ಸಾಧ್ಯವಾದಷ್ಟು ರಕ್ಷಿಸಿ. ಆದ್ದರಿಂದ, ಮಗು ಚೇತರಿಸಿಕೊಳ್ಳುವವರೆಗೆ ಸ್ತನ್ಯಪಾನ ಮಾಡಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ