50 ವರ್ಷದೊಳಗಿನವರಲ್ಲಿ ಕ್ಯಾನ್ಸರ್ ಪ್ರಮಾಣ ಶೇ. 79ರಷ್ಟು ಹೆಚ್ಚಳ

|

Updated on: Sep 06, 2023 | 11:55 AM

ಸ್ತನ ಕ್ಯಾನ್ಸರ್ 2019ರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅತಿ ಹೆಚ್ಚು ಪತ್ತೆಯಾದ ಕ್ಯಾನ್ಸರ್ ಆಗಿದೆ. ಯಕೃತ್ತಿನ ಕ್ಯಾನ್ಸರ್ ಪ್ರಮಾಣ ಶೇ. 2.88ರಷ್ಟು ಕುಸಿದಿದೆ. ಹೊಸ ಆರಂಭಿಕ ಕ್ಯಾನ್ಸರ್ ಪ್ರಕರಣಗಳ ಜಾಗತಿಕ ಸಂಖ್ಯೆಯು 2030ರ ವೇಳೆಗೆ ಶೇ. 31ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

50 ವರ್ಷದೊಳಗಿನವರಲ್ಲಿ ಕ್ಯಾನ್ಸರ್ ಪ್ರಮಾಣ ಶೇ. 79ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
Image Credit source: unsplash
Follow us on

50 ವರ್ಷದೊಳಗಿನವರಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳ (Cancer Cases) ಪ್ರಕರಣದಲ್ಲಿ ಶೇ. 79ರಷ್ಟು ಹೆಚ್ಚಳ ಕಂಡುಬಂದಿದೆ. ಹಾಗೇ, ಕ್ಯಾನ್ಸರ್​ನಿಂದ ಸಾವನ್ನಪ್ಪುವವರ ಸಂಖ್ಯೆ ಶೇ. 28ರಷ್ಟು ಹೆಚ್ಚಾಗಿದೆ ಎಂಬ ಅಂಶವನ್ನು ಸಂಶೋಧಕರು ತಿಳಿಸಿದ್ದಾರೆ. ಮೆಡಿಕಲ್ ಜರ್ನಲ್ (ಆಂಕೊಲಾಜಿ)ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 1990ರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 1.82 ಮಿಲಿಯನ್‌ ಇದ್ದುದು 2019ರಲ್ಲಿ 3.26 ಮಿಲಿಯನ್‌ಗೆ ಏರಿಕೆಯಾಗಿದೆ.

ಈ ಅಧ್ಯಯನವು 2019ರ ವರದಿಯ ದತ್ತಾಂಶವನ್ನು ಆಧರಿಸಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್, ಭಾರತ ಸೇರಿದಂತೆ 204 ದೇಶಗಳು ಮತ್ತು ಪ್ರದೇಶಗಳಲ್ಲಿನ 29 ವಿಧದ ಕ್ಯಾನ್ಸರ್‌ಗಳನ್ನು ಈ ದತ್ತಾಂಶ ಒಳಗೊಂಡಿದೆ.

ಕ್ಯಾನ್ಸರ್​ನ ವಿಧಗಳು:
ಸ್ತನ ಕ್ಯಾನ್ಸರ್ 2019ರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅತಿ ಹೆಚ್ಚು ಪತ್ತೆಯಾದ ಕ್ಯಾನ್ಸರ್ ಆಗಿದೆ. ಆದರೆ ಶ್ವಾಸನಾಳದ (ನಾಸೊಫಾರ್ನೆಕ್ಸ್) ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ 1990ರಿಂದ ವೇಗವಾಗಿ ಏರಿಕೆಯಾಗಿದೆ. ಹಾಗೇ, ಯಕೃತ್ತಿನ ಕ್ಯಾನ್ಸರ್ ಪ್ರಮಾಣ ಶೇ. 2.88ರಷ್ಟು ಕುಸಿದಿದೆ.

ಇದನ್ನೂ ಓದಿ: Bladder Cancer: ಮೂತ್ರಕೋಶದ ಕ್ಯಾನ್ಸರ್​ ಲಕ್ಷಣಗಳೇನು? ಕಾರಣ ಮತ್ತು ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ

ಹೆಪಟೈಟಿಸ್ ಬಿ ವ್ಯಾಕ್ಸಿನೇಷನ್ ಯಕೃತ್ತಿನ ಕ್ಯಾನ್ಸರ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಡಾಂತ ಇನ್‌ಸ್ಟಿಟ್ಯೂಟ್ ಆಫ್ ಡೈಜೆಸ್ಟಿವ್ ಮತ್ತು ಹೆಪಟೊಬಿಲಿಯರಿ ಸೈನ್ಸ್‌ನ ಅಧ್ಯಕ್ಷ ಡಾ. ರಣಧೀರ್ ಸೂದ್ ಹೇಳಿದ್ದಾರೆ. ಹೊಸ ಆರಂಭಿಕ ಕ್ಯಾನ್ಸರ್ ಪ್ರಕರಣಗಳ ಜಾಗತಿಕ ಸಂಖ್ಯೆಯು 2030ರ ವೇಳೆಗೆ ಶೇ. 31ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದಕ್ಕೆ ಸಂಬಂಧಿತ ಸಾವುಗಳ ಪ್ರಮಾಣ ಶೇ. 21ರಷ್ಟು ಹೆಚ್ಚಾಗಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಇದನ್ನೂ ಓದಿ: Viral Video: ಕ್ಯಾನ್ಸರ್​; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ

ಸಾಮಾನ್ಯವಾಗಿ ಆನುವಂಶಿಕ ಅಂಶಗಳ ಹೊರತಾಗಿ, ಕ್ಯಾನ್ಸರ್​ ರೋಗವನ್ನು ಹೆಚ್ಚಿಸುವ ಆಹಾರ ಪದ್ಧತಿಗಳನ್ನು ಸಂಶೋಧಕರು ಉಲ್ಲೇಖಿಸಿದ್ದಾರೆ. ಕೆಂಪು ಮಾಂಸ ಮತ್ತು ಉಪ್ಪನ್ನು ಹೊಂದಿರುವ ಆಹಾರಗಳು, ಕಡಿಮೆ ಪ್ರಮಾಣದ ಹಣ್ಣು ಮತ್ತು ಹಾಲು ಸೇವಿಸುವುದು, ಆಲ್ಕೋಹಾಲ್ ಸೇವನೆ ಮತ್ತು ತಂಬಾಕು ಸೇವನೆಯು 50 ವರ್ಷದೊಳಗಿನವರ ಸಾಮಾನ್ಯ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾದ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ