ಯುಕೆ ಕ್ಯಾನ್ಸರ್ ರಿಸರ್ಚ್ನ ಅಧ್ಯಯನಯೊಂದರ ಪ್ರಕಾರ ಅಲೋವೆರಾ ಎಲೆಗಳ ಸಾರವು ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡಬಹುದು ಎಂದು ಬಹಿರಂಗ ಪಡಿಸಿದೆ. ಸಾಮಾನ್ಯವಾಗಿ ಅಲೋವೆರಾವನ್ನು ಆರೋಗ್ಯಕರ ಮತ್ತು ಮೊಡವೆ ಮುಕ್ತ ಚರ್ಮಕ್ಕಾಗಿ ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಟಗೊಳಿಸಿರುವ ವರದಿಯೊಂದರ ಪ್ರಕಾರ ಅನೇಕ ತಂಪು ಪಾನೀಯಗಳಲ್ಲಿ ಕಂಡುಬರುವ ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕ ಕ್ಯಾನ್ಸರ್ ಕಾರಕ ಎಂದು ಘೋಷಿಸಿದೆ. ಅಲೋವೆರಾ ಸಸ್ಯದ ಸಾರಗಳು ಆಸ್ಪರ್ಟೇಮ್ನ ಒಂದೇ ವರ್ಗವಾಗಿದೆ.
ಶತಮಾನಗಳಿಂದಲೂ, ಅಲೋವೆರಾವನ್ನು ಅದರ ಔಷಧೀಯ ಗುಣಲಕ್ಷಣದಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಚರ್ಮದ ಆರೋಗ್ಯದ ಹೊರತಾಗಿ, ಬಲವಾದ ರೋಗನಿರೋಧಕ ಶಕ್ತಿ, ಉತ್ತಮ ಚಯಾಪಚಯ ಮತ್ತು ಜೀರ್ಣಕಾರಿ ಆರೋಗ್ಯಕ್ಕೆ ಇದು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಇಡೀ ದಿನ ನಿದ್ದೆ ಮಾಡಬೇಕು ಅನಿಸುತ್ತಿದೆಯೇ? ಈ ಮಳೆಗಾಲದಲ್ಲಿ ನೀವು ಸೇವಿಸುತ್ತಿರುವ ಚಹಾ ಅಥವಾ ಕಾಫಿ ಇದಕ್ಕೆ ಕಾರಣವಾಗಿರಬಹುದು!
ಅಲೋವೆರಾ ಎಲೆಯು ಅಲೋಯಿನ್ ಅಂಶವನ್ನು ಹೊಂದಿರುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಂಯುಕ್ತವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನಗಳು ಸೂಚಿಸಿವೆ.
ಮತ್ತಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: