ಕ್ಯಾನ್ಸರ್ (Cancer) ಅನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ, ಕ್ಯಾನ್ಸರ್ನ ಕೊನೆಯ ಹಂತದವರೆಗೆ ಹೋಗುವವರೆಗೂ ಕೆಲವೊಮ್ಮೆ ತಿಳಿಯುವುದೇ ಇಲ್ಲ. ಲಕ್ಷಣಗಳು ಸೌಮ್ಯವಾಗಿಯೇ ಇರುತ್ತದೆ. ಈ ರೋಗದಲ್ಲಿ, ದೇಹದೊಳಗಿನ ಜೀವಕೋಶಗಳು ಯಾವುದೇ ನಿಯಂತ್ರಣವಿಲ್ಲದೆ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಅದರ ಚಿಕಿತ್ಸೆಯು ವಿಳಂಬವಾದರೆ ಅಥವಾ ಮಾಡದಿದ್ದರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಆರಂಭಿಕ ಹಂತಗಳಲ್ಲಿ ಕಂಡುಬರುವ ಕ್ಯಾನ್ಸರ್ನ ಹಲವು ಲಕ್ಷಣಗಳಿವೆ. ಈ ರೋಗಲಕ್ಷಣಗಳಿಗೆ ಶೀಘ್ರವಾಗಿ ಚಿಕಿತ್ಸೆ ನೀಡದಿದ್ದರೆ, ತೊಂದರೆಯು ಹೆಚ್ಚು ತೀವ್ರವಾಗಿರುತ್ತದೆ. ಕ್ಯಾನ್ಸರ್ ಪೀಡಿತರು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಪಾಲ್ ಲೂಯಿಸ್ ಕರುಳಿನ ಕ್ಯಾನ್ಸರ್ನ ನಾಲ್ಕನೇ ಹಂತದಲ್ಲಿರುವಾಗ ಅವರಿಗೆ ಕ್ಯಾನ್ಸರ್ ಇದ್ದಿದ್ದು ಗೊತ್ತಾಗಿತ್ತು. ಅವರ ಆರಂಭಿಕ ಲಕ್ಷಣಗಳು ಗುದನಾಳದ ರಕ್ತಸ್ರಾವ, ತೀವ್ರ ಆಯಾಸ ಮತ್ತು ಕರುಳಿನಲ್ಲಿ ಆಗಿರುವ ಕೆಲವು ಆಂತರಿಕ ಬದಲಾವಣೆಗಳು ಗೋಚರವಾಗಿದ್ದವು.
ಕೆಲವು ಲಕ್ಷಣಗಳು ಹಂತ ಹಂತವಾಗಿ ಕಾಣಿಸಿಕೊಂಡಿದ್ದವು. ಹೀಗಾಗಿ ಕ್ಯಾನ್ಸರ್ನ ಲಕ್ಷಣಗಳು ಹಂತ ಹಂತವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವ ನಿರ್ಣಯಕ್ಕೆ ಬರಬಹುದು.
ಮತ್ತಷ್ಟು ಓದಿ: Cancer Drug: ಬೆಂಗಳೂರು ವೈದ್ಯರು ರೂಪಿಸಿರುವ ಕ್ಯಾನ್ಸರ್ ಔಷಧಕ್ಕೆ ಭಾರತ ಸರ್ಕಾರದ ಅನುಮೋದನೆ
ತೂಕ ಹೆಚ್ಚಳ
ಇನ್ನೊಬ್ಬ ಕ್ಯಾನ್ಸರ್ ರೋಗಿಯಾದ ಮೆಲಿಸ್ಸಾ ನಿವ್, ಕ್ಯಾನ್ಸರ್ ಗರ್ಭಕಂಠ, ಅಂಡಾಶಯ, ಅಂಡಾಶಯ, ದುಗ್ಧರಸ ಗ್ರಂಥಿಗಳು ಮತ್ತು ದುಗ್ಧರಸ ನಾಳೀಯ ವ್ಯವಸ್ಥೆಗೆ ಹರಡಿದಾಗ ಮೂರನೇ ಹಂತದಲ್ಲಿ ರೋಗವನ್ನು ಗುರುತಿಸಲಾಯಿತು ಎಂದು ಹೇಳಿದರು.
ಅತ್ಯಂತ ಸ್ಪಷ್ಟವಾದ ಲಕ್ಷಣವೆಂದರೆ ತ್ವರಿತ ತೂಕ ಹೆಚ್ಚಾಗುವುದು. ಅನಿಯಂತ್ರಿತ ರಕ್ತಸ್ರಾವವು ಮೊದಲ ಚಿಹ್ನೆ ಎಂದು ಮೆಲಿಸ್ಸಾ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಯಾವುದೇ ರೋಗ ಲಕ್ಷಣಗಳಿರಲಿಲ್ಲ
ಕ್ಲೆಮೆನ್ಸಿಯಾ ನಾರ್ಜೊ ಅವರು ನಾಲ್ಕನೇ ಹಂತದ ಅಪರೂಪದ ಶ್ವಾಸಕೋಶದ ಕ್ಯಾನ್ಸರ್ ಹೊಂದಿದ್ದಾರೆ.
ಡಯಾಗ್ರೋಸ್‌ಗೆ ಒಂದು ವಾರದ ಮೊದಲು ಒಣ ಕೆಮ್ಮಿತ್ತು ಮತ್ತು ವ್ಯಾಯಾಮ ಮಾಡುವಾಗ ಸ್ವಲ್ಪ ಉಸಿರಾಟದ ತೊಂದರೆ ಅನುಭವಿಸುತ್ತಿದ್ದೆ ಎಂದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ