ಏಲಕ್ಕಿಯಿಂದ ನಿಮ್ಮ ಆರೋಗ್ಯಕ್ಕೆ ವೈದ್ಯಕೀಯ ವಿಜ್ಞಾನ ದೃಢೀಕರಿಸಿರುವ 10 ಪ್ರಯೋಜನಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2022 | 8:00 AM

ಉರಿಯೂತದ ವಿರುದ್ಧ ಹೋರಾಡುವ ಕಂಪೌಂಡ್ ಗಳು ಏಲಕ್ಕಿಯಲ್ಲಿ ಇರಬಹುದಾದ ಸಾಧ್ಯತೆಯಿದೆ. ಹಾಗೆ ನೋಡಿದರೆ ಏಲಕ್ಕಿ ಸೇವನೆ ಮಾನವರಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಅನ್ನೋದಿಕ್ಕೆ ಸಾಕಷ್ಟು ಪುರಾವೆಗಳಿಲ್ಲ ಮತ್ತು ಅಧ್ಯಯನಗಳು ಈ ಅಂಶವನ್ನು ದೃಢಪಡಿಸಿಲ್ಲ.

ಏಲಕ್ಕಿಯಿಂದ ನಿಮ್ಮ ಆರೋಗ್ಯಕ್ಕೆ ವೈದ್ಯಕೀಯ ವಿಜ್ಞಾನ ದೃಢೀಕರಿಸಿರುವ 10 ಪ್ರಯೋಜನಗಳು
ಬಹು ಪ್ರಯೋಜನಕಾರಿ ಏಲಕ್ಕಿ
Follow us on

ನಾವು ಸೇವಿಸುವ ಆಹಾರಗಳಲ್ಲಿ ಬಳಸಲ್ಪಡುವ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿಗೆ ಅಗ್ರಸ್ಥಾನ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಸುವಾಸನೆಯುಕ್ತ ಮತ್ತು ರುಚಿಯಲ್ಲಿ ಸ್ವಲ್ಪ ಸಿಹಿಯಾಗಿರುವ ಏಲಕ್ಕಿಯನ್ನು ಜನ ಮಿಂಟ್ ಗೆ ಹೋಲಿಸುತ್ತಾರೆ. ಭಾರತೀಯ ಮೂಲದ ಏಲಕ್ಕಿ ಈಗ ವಿಶ್ವದಾದ್ಯಂತ ಸಿಹಿ ಮತ್ತು ಖಾರದ ಅಡುಗೆ ಪದಾರ್ಥಗಳಲ್ಲಿ ಹೇರಳವಾಗಿ ಉಪಯೋಗಿಸಲ್ಪಡುವ ಮಸಾಲೆ ಪದಾರ್ಥ. ಇದು ಹಲವಾರು ಔಷಧೀಯ ಗುಣಗಳನ್ನೂ ಹೊಂದಿದ್ದು ಸಾಂಪ್ರದಾಯಿಕ ಔಷಧಿ ತಯಾರಿಕೆಯಲ್ಲೂ ಏಲಕ್ಕಿಯನ್ನು ಬಳಸಲಾಗಿದೆ.
ಏಲಕ್ಕಿಯ 10 ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ

-ಆ್ಯಂಟಿ ಆಕ್ಸಿಡಂಟ್ ಮತ್ತು ಮೂತ್ರವರ್ಧಕ ಗುಣಧರ್ಮ ಹೊಂದಿರುವ ಏಲಕ್ಕಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಏಲಕ್ಕಿ ಬಹಳ ಪ್ರಯೋಜನಕಾರಿ.
ಏಲಕ್ಕಿಯು ಌಂಟಿ ಆಕ್ಸಿಡಂಟ್ ಮತ್ತು ಮೂತ್ರವರ್ಧಕ ಗುಣಧರ್ಮ ಹೊಂದಿರುವುದರಿಂದ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಏಲಕ್ಕಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳಿರಬಹುದು
ಏಲಕ್ಕಿಯಲ್ಲಿರುವ ಕೆಲ ಕಣಗಳ ಸಂಯೋಜನೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತವೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿ ಬಳಸಿದ ಹಲವಾರು ಅಧ್ಯಯನಗಳಿಂದ ಸಕಾರಾತ್ಮಕ ಫಲಿತಾಂಶಗಳು ದೊರೆತಿವೆ. ಆದರೆ ಸದರಿ ಅಧ್ಯಯನಗಳನ್ನು ಕೇವಲ ಇಲಿಗಳ ಮೇಲೆ ಮತ್ತು ಟೆಸ್ಟ್ ಟ್ಯೂಬ್ ಗಳಲ್ಲಿ ನಡೆಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿ ಪ್ರಯೋಜಕಾರಿ ಅನ್ನೋದು ಮಾನವರ ಮೇಲೆ ಪ್ರಯೋಗಗಳನ್ನು ನಡೆಸಿದ ಬಳಿಕವೇ ಖಚಿತವಾಗುತ್ತದೆ.

-ಏಲಕ್ಕಿಯಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣ ಇರುವುದರಿಂದ ಅದು ದೀರ್ಘಕಾಲಿಕ ಕಾಯಿಲೆಗಳಿಂದ ಕಾಪಾಡಬಹುದು

ಉರಿಯೂತದ ವಿರುದ್ಧ ಹೋರಾಡುವ ಕಂಪೌಂಡ್ ಗಳು ಏಲಕ್ಕಿಯಲ್ಲಿ ಇರಬಹುದಾದ ಸಾಧ್ಯತೆಯಿದೆ. ಹಾಗೆ ನೋಡಿದರೆ ಏಲಕ್ಕಿ ಸೇವನೆ ಮಾನವರಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಅನ್ನೋದಿಕ್ಕೆ ಸಾಕಷ್ಟು ಪುರಾವೆಗಳಿಲ್ಲ ಮತ್ತು ಅಧ್ಯಯನಗಳು ಈ ಅಂಶವನ್ನು ದೃಢಪಡಿಸಿಲ್ಲ. ಆದರೆ, ಏಲಕ್ಕಿಯುಕ್ತ ಉತ್ಪಾದನೆಗಳು ಌಂಟಿ ಆಕ್ಸಿಡಂಟ್ ಪ್ರಮಾಣವನ್ನು ಶೇಕಡಾ 90ರಷ್ಟು ಹೆಚ್ಚಿಸಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ.

ಏಲಕ್ಕಿಯಲ್ಲಿರುವ ಌಂಟಿ ಆಕ್ಸಿಡೆಂಟ್ ಕಂಪೌಂಡ್ಗಳು ಇರುವುದರಿಂದ ಅದು ಜೀವಕಣಗಳನ್ನು ನಾಶವಾಗದಂತೆ ತಡೆಗಟ್ಟಿ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಬಹುದು.

-ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಲ್ಲದು.

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಏಲಕ್ಕಿ ಶತಮಾನಗಳಿಂದ ಉಪಯೋಗಿಸಲ್ಪಡುತ್ತಿದೆ. ಉದರದ ಹುಣ್ಣು (ಅಲ್ಸರ್) ಗಳಿಗೆ ಸಂಬಂಧಿಸಿದಂತೆ ಇಲಿಗಳ ಮೇಲೆ ನಡೆಸಿದ ಸಂಶೋಧನೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

ಆದರೆ ಮಾನವರ ಮೇಲೆ ಇನ್ನೂ ಪ್ರಯೋಗಗಳನ್ನು ನಡೆಸಿಲ್ಲ. ಇಲಿಗಳಲ್ಲಿ ಗ್ಯಾಸ್ಟ್ರಿಕ್ ಅಲ್ಸರನ್ನು ಏಲಕ್ಕಿ ಶೇಕಡ 50 ರಷ್ಟು ಕಡಿಮೆ ಮಾಡಿದೆ. ಸಂಶೋಧಕರ ಪ್ರಕಾರ ಮಾನವರನ್ನು ಕಾಡುವ ಅಲ್ಸರ್ ಗಳ ಚಿಕಿತ್ಸೆಯಲ್ಲೂ ಏಲಕ್ಕಿ ಪ್ರಯೋಜನಕಾರಿಯಾಗಬಹುದು.

-ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ ಹಲ್ಲುಗಳಿಗೆ ಕುಳಿ ಬೀಳುವುದನ್ನು ತಡೆಯುತ್ತದೆ.

ದಂತಗಳ ಅರೋಗ್ಯಕ್ಕಾಗಿ ಏಲಕ್ಕಿಯನ್ನು ಪ್ರಾಚೀನಕಾಲದಿಂದ ಉಪಯೋಗಿಸಲಾಗುತ್ತಿದೆ. ಊಟದ ನಂತರ ಏಲಕ್ಕಿಯನ್ನು ಅದರ ತೊಗಟೆಯ ಜೊತೆ ತಿಂದರೆ ಬಾಯಿಂದ ದುರ್ವಾಸನೆ ಬರೋದು ಕಡಿಮೆಯಾಗುತ್ತದೆ. ವಿಶ್ವಾವಿಖ್ಯಾತ ರಿಗ್ಲೀ ಚ್ಯೂಯಿಂಗ್ ಗಮ್ ನಿಮಗೆ ಗೊತ್ತಲ್ಲ? ಕಂಪನಿಯು ಅದರ ತಯಾರಿಕೆಯಲ್ಲಿ ಏಲಕ್ಕಿ ಪೌಡರ್ ಬಳಸುತ್ತದೆ.

-ಏಲಕ್ಕಿಯಲ್ಲಿ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ ಇರಬಹುದು ಮತ್ತು ಅದು ಸೋಂಕುಗಳನ್ನು ನಿವಾರಿಸಬಲ್ಲದು.

ಏಲಕ್ಕಿ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ ಇದೆ ಮತ್ತು ಅದು ಸೋಂಕುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲದು ಅಂತ ಹೇಳಲಾಗಿದೆ. ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ನಡೆಸಿರುವ ಸಂಶೋದನೆಗಳ ಪ್ರಕಾರ ಏಲಕ್ಕಿ ಕೆಲವಷ್ಟೇ ಬ್ಯಾಕ್ಟೀರಿಯಗಳ ವಿರುದ್ಧ ಪರಿಣಾಮಕಾರಿ ಎನಿಸಿದೆ. ಹಾಗಾಗಿ ವೈದ್ಯಕೀಯ ವಿಜ್ಞಾನ ಈ ಅಂಶವನ್ನು ಖಚಿತವಾಗಿ ದೃಢಪಡಿಸುತ್ತಿಲ್ಲ.

ಏಲಕ್ಕಿ ಎಣ್ಣೆ ಮತ್ತು ಏಲಕ್ಕಿಯ ಸಾರಗಳು ಫಂಗಸ್ ಸೋಂಕು, ಅಜೀರ್ಣ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುವ ವಿವಿಧ ಬ್ಯಾಕ್ಟೀರಿಯಾದ ತಳಿಗಳ ವಿರುದ್ಧ ಪರಿಣಾಮಕಾರಿಯಾಗಬಹುದು ಅಂತ ಸಂಶೋಧಕರು ಹೇಳುತ್ತಾರೆ.

-ಏಲಕ್ಕಿ ಉಸಿರಾಟ ಪ್ರಕ್ರಿಯೆ ಆಮ್ಲಜನಕದ ಬಳಕೆಯನ್ನು ಉತ್ತಮಪಡಿಸಬಲ್ಲದು.

ಏಲಕ್ಕಿಯಲ್ಲಿರುವ ಕಂಪೌಂಡ್ಗಳು ಶ್ವಾಸಕೋಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯನ್ನು ಒದಗಿಸಬಲ್ಲವು. ಅರೋಮ ಥೆರಪಿಯಲ್ಲಿ ಏಲಕ್ಕಿಯನ್ನು ಬಳಸಿದಾಗ ವ್ಯಾಯಾಮ ಮಾಡುವ ವ್ಯಕ್ತಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

-ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು

ಏಲಕ್ಕಿಯನ್ನು ಪುಡಿ ರೂಪದಲ್ಲಿ ಸೇವಿಸಿದರೆ ಅದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುಬಹುದು ಅಂತ ಸಂಶೋಧಕರು ಹೇಳಿದ್ದಾರೆ. ಇಲಿಗಳ ಮೇಲೆ ನಡೆಸಿರುವ ಸಂಶೋಧನೆಯಲ್ಲಿ ಏಲಕ್ಕಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿದೆಯಾದರೂ ಮಾನವರ ಮೇಲೂ ಅದೇ ಪರಿಣಾಮ ಬೀರಬಲ್ಲದು ಅನ್ನೋದಿಕ್ಕೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ.

-ಏಲಕ್ಕಿ ಸೇವನೆಯ ಇತರ ಆರೋಗ್ಯ ಪ್ರಯೋಜನಗಳು

ಏಲಕ್ಕಿ ಯಕೃತ್ತಿನ ಆರೋಗ್ಯಕ್ಕೆ ಸಹಕಾರಿ. ಯಕೃತ್ತು ದೊಡ್ಡದಾಗುವುದನ್ನು ಇದು ತಡೆಯುತ್ತದೆ. ಆತಂಕ ಮತ್ತು ಒತ್ತಡಗಳಿಂದ ಬಳಲುವವರು ಏಲಕ್ಕಿ ಸೇವಿಸುವುದನ್ನು ಆರಂಭಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಏಲಕ್ಕಿ ತೂಕ ಕಡಿಮೆ ಮಾಡಿಕೊಳ್ಳಲು ಸಹ ನೆರವಾಗುತ್ತದೆ.

-ಏಲಕ್ಕಿ ಹತ್ತನೇ ಪ್ರಯೋಜನವೆಂದರೆ ಇದು ಬಹಳಷ್ಟು ಜನರಲ್ಲಿ ಸುರಕ್ಷಿತ ಮತ್ತು ಸುಲಭವಾಗಿ ಲಭ್ಯವಾಗುತ್ತದೆ.

ಇದನ್ನು ಆಹಾರದಲ್ಲಿ ಉಪಯೋಗಿಸಿದರೆ ಒಳ್ಳೆಯದು ಅಂತ ಹೇಳಲಾಗಿದೆ. ಬೇಕರಿ ಪದಾರ್ಥಗಳಲ್ಲಿ ಇದರ ಉಪಯೋಗ ಜಾಸ್ತಿ.

ಕೊನೆಯದಾಗಿ, ಏಲಕ್ಕಿಯನ್ನು ಅದರಲ್ಲಿರುವ ಔಷಧೀಯ ಗುಣಗಳಿಗಾಗಿ ಉಪಯೋಗಿಸಲಾಗುತ್ತಿರುವುದರಿಂದ ಸುರಕ್ಷಿತ ಎನ್ನಲಡ್ಡಿಯಿಲ್ಲ. ಯಾವುದಕ್ಕೂ ಏಲಕ್ಕಿ ಉತ್ಪಾದನೆಗಳ ಸೇವನೆ ಆರಂಭಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳಿತು.