ಗೋಡಂಬಿಯ (Cashew Nut) ರುಚಿಯನ್ನು ಒಮ್ಮೆ ನಾಲಿಗೆ ತೋರಿಸಿದರೆ ಮತ್ತೆ ಮತ್ತೆ ಬೇಕೇನಿಸುವುದು ಸಹಜ. ದಿನನಿತ್ಯ ಆಹಾರ ಕ್ರಮದಲ್ಲಿ ಗೋಡಂಬಿಯನ್ನು ಸೇರಿಸಿಕೊಂಡರೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಇದರಲ್ಲಿ ಒಮೆಗಾ 3 ,ಆಹಾರದ ಫೈಬರ್ ಅಂಶ, ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶಗಳು ಹೇರಳವಾಗಿದ್ದು, ಚರ್ಮ, ಕೂದಲು, ಹೃದಯದ ಆರೋಗ್ಯ, ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.
ಗೋಡಂಬಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳು
- ಗೋಡಂಬಿಯಲ್ಲಿ ವಿಟಮಿನ್ ಇ ಅಂಶವು ಹೇರಳವಾಗಿದ್ದು ಚರ್ಮದ ಆರೋಗ್ಯವನ್ನು ಕಾಪಾಡಿ ಸೌಂದರ್ಯವನ್ನು ಹೆಚ್ಚಿಸುತ್ತದೆ.
- ಗೋಡಂಬಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಪ್ರತಿದಿನ ಇದನ್ನು ಸೇವಿಸುತ್ತ ಬಂದರೆ ಮೂಳೆಗಳು ಬಲಗೊಳ್ಳುತ್ತವೆ.
- ಮೆದುಳಿನ ಆರೋಗ್ಯಕ್ಕೂ ಈ ಗೋಡಂಬಿಯು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು ಮೆದುಳಿನ ಕಾರ್ಯವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ.
- ಗೋಡಂಬಿಯಲ್ಲಿ ಫೈಬರ್ ಅಂಶವು ಹೇರಳವಾಗಿದ್ದು, ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ಕಡಿಮೆಗೊಳಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಗೋಡಂಬಿಯಲ್ಲಿ ಫೈಬರ್ ಅಂಶ ಮತ್ತು ಪ್ರೊಟೀನ್ ಗಳು ಅಧಿಕವಾಗಿದ್ದು, ಹೊಟ್ಟೆಯು ತುಂಬಿಸುವುದಲ್ಲದೆ, ತೂಕ ಇಳಿಕೆಗೂ ಕಾರಣವಾಗಿದೆ.
- ಗೋಡಂಬಿಯಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಉತ್ಕರ್ಷಣ ನಿರೋಧಕಗಳು ಕಣ್ಣಿನ ಸಮಸ್ಯೆಗಳನ್ನು ನಿವಾರಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ