ಮಗುವಿನ ಬೆಳವಣಿಗೆಗೆ ನಿದ್ರೆ ಅತ್ಯಂತ ಮುಖ್ಯವಾಗಿದೆ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಹೆಚ್ಚಿನ ಸಂಖ್ಯೆಯ ಮಕ್ಕಳು ನಿದ್ರೆ ಮಾಡಲು ಒದ್ದಾಡುತ್ತಾರೆ. ಮಕ್ಕಳನ್ನು ಮಲಗಿಸುವುದೆಂದರೆ ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿಬಿಡುತ್ತದೆ. ಎಲ್ಲ ಮಕ್ಕಳೂ ನಿದ್ರೆ ಮಾಡಲು ಹೀಗೇ ಹಠ ಮಾಡುತ್ತಾರೆಂದು ನೀವು ನಿರ್ಲಕ್ಷ್ಯ ಮಾಡುವಂತಿಲ್ಲ. ಇದು ನಿಮ್ಮ ಮಗುವಿನ ಕೆಲವು ಆರೋಗ್ಯದ ತೊಂದರೆಯ ಸೂಚನೆಯೂ ಆಗಿರಬಹುದು.
ಈ ಬಗ್ಗೆ ಎಸ್‌ಎಲ್ ರಹೇಜಾ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಸ್ಮಿತಾ ಮಹಾಜನ್ ನೀಡಿರುವ ಮಾಹಿತಿಗಳು ಹೀಗಿವೆ. ಮಕ್ಕಳಲ್ಲಿ ನಿದ್ರಿಸಲು ಸಮಸ್ಯೆಯಾದರೆ, ಮಕ್ಕಳು ರಾತ್ರಿ ಆಗಾಗ ಎಚ್ಚರಗೊಳ್ಳುತ್ತಿದ್ದರೆ, ಹಗಲಿನ ವೇಳೆ ಅತಿಯಾದ ನಿದ್ರೆ ಮಾಡುತ್ತಿದ್ದರೆ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಗಳು ಉಂಟಾದರೆ ಅದನ್ನು ಪೋಷಕರು ನಿರ್ಲಕ್ಷಿಸಬಾರದು. ಹಾಗೇ, ಮಗುವಿನಲ್ಲಿ ತಲೆನೋವು, ಹೊಟ್ಟೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕೂಡ ನಿದ್ರೆಗೆ ತೊಂದರೆ ಉಂಟುಮಾಡಬಹುದು.
ಇದನ್ನೂ ಓದಿ: ಉತ್ತಮ ನಿದ್ರೆ ಬೇಕೆಂದರೆ ಯಾವಾಗ ನಿಮ್ಮ ಹಾಸಿಗೆಯನ್ನು ಬದಲಾಯಿಸಬೇಕು?
ಮಕ್ಕಳ ನಿದ್ರೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?:
– ಮಕ್ಕಳನ್ನು ಒಂದೇ ಸಮಯದಲ್ಲಿ ಮಲಗಿಸುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಆ ಮಕ್ಕಳಿಗೆ ಇದು ಮಲಗುವ ಸಮಯ ಎಂದು ಅರ್ಥವಾಗುತ್ತದೆ. ಮಕ್ಕಳ ದೇಹ ಕೂಡ ಈ ಸೈಕಲ್ಗೆ ಹೊಂದಿಕೊಳ್ಳುತ್ತದೆ.
– ತಂಪಾದ, ಗಾಢವಾದ ಮತ್ತು ಶಾಂತ ವಾತಾವರಣವನ್ನು ಕಾಪಾಡಿಕೊಳ್ಳುವ ಮೂಲಕ ಮಕ್ಕಳನ್ನು ಮಲಗಿಸುವ ರೂಮ್ ಅವರ ನಿದ್ರೆಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಆರಾಮದಾಯಕವಾದ ಹಾಸಿಗೆ ಮತ್ತು ಮೆತ್ತನೆಯ ತಲೆದಿಂಬುಗಳನ್ನು ಇಡಿ.
ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?
– ಮಕ್ಕಳು ಮಲಗುವ ಮುನ್ನ ಅವರಿಗೆ ಮೊಬೈಲ್ ಸ್ಕ್ರೀನ್ ತೋರಿಸಬೇಡಿ. ಅವುಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಆಗಿರುವ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ.
– ಇನ್ನೂ ನಿದ್ರೆಯ ಸಮಸ್ಯೆಗಳು ಮುಂದುವರಿದರೆ, ಮಕ್ಕಳ ವೈದ್ಯರನ್ನು ಸಂಪರ್ಕಿಸಿ. ಅವರು ಮಗುವಿನ ನಿದ್ರೆಗೆ ಏನು ತೊಡಕನ್ನು ಉಂಟುಮಾಡುತ್ತಿದೆ ಎಂದು ತಿಳಿಸುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ