ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?

ನಿದ್ರೆ ನಮ್ಮ ದೇಹಕ್ಕೆ ಅತ್ಯಗತ್ಯವಾದ ಅಂಶ. ನಿದ್ರೆ ಸರಿಯಾಗಿ ಆಗದಿದ್ದರೆ ಇಡೀ ದಿನವೇ ಜಡವಾಗಿರುತ್ತದೆ. ಹಾಗೇ, ನಿದ್ರಾಹೀನತೆ ನಮ್ಮ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ. ಬಿಸಿ ಹಾಲು ಕುಡಿದು ಮಲಗಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎಂಬ ನಂಬಿಕೆಯಿದೆ. ಇದು ನಿಜವೇ?

ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?
ಸಾಂದರ್ಭಿಕ ಚಿತ್ರ Image Credit source: iStock
Follow us
|

Updated on: Jan 16, 2024 | 5:31 PM

ರಾತ್ರಿ ಮಲಗುವ ಮುನ್ನ ಬಿಸಿಯಾದ ಹಾಲು ಕುಡಿದು ಮಲಗಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಬಿಸಿಯಾದ ಹಾಲು ನಿದ್ರಾಹೀನತೆಯನ್ನು ತಡೆಯುತ್ತದೆ ಎಂಬ ಭಾವನೆ ಇದೆ. ಆದರೆ, ಬಿಸಿ ಹಾಲು ಕುಡಿಯುವುದರಿಂದ ನಿಜವಾಗಿಯೂ ನಿದ್ರಾಹೀನತೆಗೆ ಪರಿಹಾರ ಸಿಗುತ್ತದಾ? ಈ ಬಗ್ಗೆ ಪೌಷ್ಟಿಕ ತಜ್ಞರು, ವೈದ್ಯರು ಏನು ಹೇಳುತ್ತಾರೆ ಗೊತ್ತಾ?

ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದು ನಿಮಗೆ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ. ಈ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರ ಅಧ್ಯಯನವು 3 ವಾರಗಳ ಅವಧಿಯಲ್ಲಿ ಬಿಸಿ ಹಾಲನ್ನು ಕುಡಿಯುವ ಜನರ ಗುಂಪಿನ ಮೇಲೆ ಸಂಶೋಧನೆ ನಡೆಸಿತು. ಈ ಅಭ್ಯಾಸದಿಂದ ಅವರಿಗೆ ರಾತ್ರಿ ಪದೇಪದೆ ಎಚ್ಚರವಾಗುವ ಸಮಸ್ಯೆ ದೂರವಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ರಾತ್ರಿ ಪದೇ ಪದೆ ನಿದ್ರೆಯಿಂದ ಎಚ್ಚರಗೊಳ್ಳಲು ಕಾರಣವೇನು?

ನೀವು ನಿದ್ರೆಯನ್ನು ಮಾಡಲಾಗದೆ ಒದ್ದಾಡುತ್ತಿದ್ದರೆ ಹಾಲು ಕುಡಿದು ನೋಡಿ. 65 ವರ್ಷಕ್ಕಿಂತ ಮೇಲ್ಪಟ್ಟ ಜನರ ಅಧ್ಯಯನದಲ್ಲಿ ಹೆಚ್ಚು ಹಾಲು ಕುಡಿಯುವವರು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರು ಬೇಗ ಮತ್ತು ಸುಲಭವಾಗಿ ನಿದ್ರಿಸುತ್ತಾರೆ ಎಂದು ತಿಳಿದುಬಂದಿದೆ. ಹಾಲು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವನ್ನು ಒಳಗೊಂಡಿದೆ. ಇದು ನಿದ್ರೆಯನ್ನು ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ. ನಿದ್ರೆಗೆ ಅಗತ್ಯವಾದ ಸಿರೊಟೋನಿನ್ ಮತ್ತು ಮೆಲಟೋನಿನ್ ಉತ್ಪಾದನೆಯಲ್ಲಿ ಟ್ರಿಪ್ಟೊಫಾನ್ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್​ಗೂ ಕಾರಣವಾದೀತು ಎಚ್ಚರ!

ಸಿರೊಟೋನಿನ್ ಒಂದು ನರಪ್ರೇಕ್ಷಕವಾಗಿದ್ದು, ಅದು ಮನಸ್ಥಿತಿ, ಅರಿವಿನ ತಾರ್ಕಿಕತೆ ಮತ್ತು ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ. ಮೆಲಟೋನಿನ್ ನಿಮ್ಮ ದೇಹವು ಕತ್ತಲೆಗೆ ಪ್ರತಿಕ್ರಿಯೆಯಾಗಿ ಬಿಡುಗಡೆ ಮಾಡುವ ಹಾರ್ಮೋನ್ ಆಗಿದೆ. ಇದು ನಿಮಗೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ