ಚಳಿಗಾಲದಲ್ಲಿ ವಿವಿಧ ವಿನ್ಯಾಸದ ಉಡುಗೆಗಳನ್ನು ಧರಿಸಿ ಮೈ ಬೆಚ್ಚಗೆ ಇರಿಸಿಕೊಳ್ಳಿ

ಚಳಿಗಾಲವನ್ನು ಇಷ್ಟ ಪಡುವ ಬದಲು ಯಾಕಾದರೂ ಚಳಿಗಾಲ ಬರುತ್ತದೆ ಎನ್ನುವವರೇ ಹೆಚ್ಚು. ಈ ಸಮಯದಲ್ಲಿ ಬಹುತೇಕರು ಬೆಳಗ್ಗಿನ ಸಮಯದಲ್ಲಿ ಬೆಚ್ಚಗೆ ಹೊಂದ್ದು ಕೊಂಡು ಮಲಗಿ ಬಿಡುವ ಎಂದುಕೊಳ್ಳುವವರು ಇದ್ದಾರೆ. ಇದೆಲ್ಲದರ ನಡುವೆ ಹವಾಮಾನ ಬದಲಾವಣೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು, ಚರ್ಮ ಹಾಗೂ ಆರೋಗ್ಯದ ಕಾಳಜಿ ಮಾಡುವ ಬಗ್ಗೆ ಯೋಚನೆ, ಹೀಗೆ ಒಂದೆರಡರಲ್ಲ. ಇಷ್ಟೆಲ್ಲ ಟೆನ್ಶನ್​​​​​ಗಳ ನಡುವೆ ಬೇಸಿಗೆಗಾಲ ಹಾಗೂ ಮಳೆಗಾಲದಲ್ಲಿ ಧರಿಸುವ ಉಡುಗೆಗಳು ಈ ಸಮಯದಲ್ಲಿ ಉಪಯೋಗಕ್ಕೆ ಬರದು. ಚಳಿಗಾಲಕ್ಕೆ ಹೊಂದುವ ಔಟ್ ಫಿಟ್ ಗಳನ್ನು ಧರಿಸಿ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಬೇಕು. ಅದಕ್ಕೆ ಹೊಂದುವ ವಿವಿಧ ವಿನ್ಯಾಸದ ಸ್ವೆಟರ್, ಜಾಕೆಟ್ಸ್ ಗಳಂತಹ ಖರೀದಿ ಮಾಡಿ ಮೈಯನ್ನು ಬೆಚ್ಚಗೆ ಇರಿಸಿಕೊಳ್ಳಬಹುದು.

ಚಳಿಗಾಲದಲ್ಲಿ ವಿವಿಧ ವಿನ್ಯಾಸದ ಉಡುಗೆಗಳನ್ನು ಧರಿಸಿ ಮೈ ಬೆಚ್ಚಗೆ ಇರಿಸಿಕೊಳ್ಳಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 6:06 PM

ಚುಮು ಚುಮು ಚಳಿಯ ದೇಹವನ್ನು ಬೆಚ್ಚಗೆ ಇರಿಸುವುದು ಮುಖ್ಯ. ಈ ಸಮಯದಲ್ಲಿ ಬಿಸಿ ಬಿಸಿ ಆಹಾರ ಪದಾರ್ಥಗಳು, ಆರೋಗ್ಯ, ಚರ್ಮ ರಕ್ಷಣೆಯ ಜೊತೆಗೆ ಬೆಚ್ಚಗೆ ಇರಿಸುವ ಉಡುಪುಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಉಡುಪುಗಳ ಆಯ್ಕೆಯ ಬಗೆಗೆ ತೀರಾ ಯೋಚಿಸಬೇಡಿ. ಈಗಾಗಲೇ ಮಾರುಕಟ್ಟೆಯಲ್ಲಿ ಚಳಿಗಾಲಕ್ಕೆಂದೆ ವಿವಿಧ ವಿನ್ಯಾಸದ ಉಡುಪುಗಳು ಲಭ್ಯವಿದ್ದು, ನಿಮಗೆ ಕಂಫರ್ಟ್ ಫೀಲ್ ನೀಡುವ ಉಡುಪುಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು.

ಚಳಿಗಾಲದಲ್ಲಿ ಈ ಉಡುಪುಗಳನ್ನು ಆಯ್ದುಕೊಳ್ಳಿ:

ಚಳಿಗಾಲದಲ್ಲಿ ಉಡುಪುಗಳ ಆಯ್ಕೆಯ ವಿಚಾರದಲ್ಲಿ ಹೆಚ್ಚು ಗಮನ ನೀಡಬೇಕು. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಧಿರಿಸುಗಳು ಲಭ್ಯವಿದ್ದರೂ, ನಿಮಗೆ ಆರಾಮದಾಯಕ ಎನಿಸುವ ಉಡುಗೆಗಳನ್ನು ಆಯ್ದುಕೊಂಡರೆ ಉತ್ತಮ.

* ಸ್ವೆಟರ್ : ಚಳಿಗಾಲದಲ್ಲಿ ಮೈ ಬೆಚ್ಚಗೆ ಇರಿಸುವ ಉಡುಗೆಯಲ್ಲಿ ಸ್ವೆಟರ್ ಬೆಸ್ಟ್ ಎನ್ನಬಹುದು. ಒಳಗೆ ಟೀ ಶರ್ಟ್ ಹಾಕಿ, ಅದರ ಮೇಲೆ ಸ್ವೆಟರ್ ಹಾಕಿಕೊಂಡರೆ, ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಮಾರುಕಟ್ಟೆಯಲ್ಲಿ ತೆಳುವಾದ ಸ್ವೆಟರ್, ಬಟನ್ ಸ್ವೆಟರ್ ಹಾಗೂ ಚೆಕ್ಸ್ ಸ್ವೆಟರ್ ಹೀಗೆ ನಾನಾ ರೀತಿಯ ಸ್ವೆಟರ್ ಗಳು ಲಭ್ಯವಿದ್ದು, ನಿಮಗೆ ಇಷ್ಟವಾಗುವ ಉಡುಗೆಯನ್ನು ಆಯ್ಕೆ ಮಾಡಿ ಧರಿಸಬಹುದು.

* ಟ್ರಿಂಚ್ ಕೋಟ್ಸ್ : ಟ್ರೆಂಟ್ ಕೋಟ್ಸ್ ಗಳು ಚಳಿಗಾಲಕ್ಕೆ ಬೆಸ್ಟ್ ಆಯ್ಕೆಯಲ್ಲಿ ಒಂದು. ಡಾರ್ಕ್ ಕಲರ್ ಟ್ರಿಂಚ್ ಕೋಟ್ಸ್ ಉಡುಪುವಿಗೆ ಹೊಂದುವಂತೆ ಧರಿಸಿದರೆ ನಿಮ್ಮ ಸೌಂದರ್ಯವನ್ನು ಮತ್ತಷ್ಟು ದ್ವಿಗುಣಗೊಳಿಸುತ್ತವೆ.

* ಪೆನ್ಸಿಲ್ ಸ್ಕರ್ಟ್ : ಪೆನ್ಸಿಲ್ ಸ್ಕರ್ಟ್ ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ಉಣ್ಣೆದಾರದಿಂದ ತಯಾರಿಸಲಾಗಿದ್ದು, ಬೆಚ್ಚನೆಯ ಅನುಭವ ನೀಡುತ್ತದೆ. ಈ ಉಡುಗೆಯು ತೆಳ್ಳಗೆ ಇರುವವರಿಗೆ ಉತ್ತಮ ಆಯ್ಕೆಯಲ್ಲಿ ಒಂದಾಗಿದೆ.

* ಪ್ರಿಂಟೆಡ್ ಉಡುಗೆಗಳು: ಈ ಪ್ರಿಂಟೆಂಡ್ ಉಡುಗೆಗಳು ಚಳಿಗಾಲಕ್ಕೆ ಹೊಂದಿಕೆಯಾಗುತ್ತದೆ. ಆದರೆ ಈ ಸಮಯದಲ್ಲಿ ಬಣ್ಣಗಳ ಆಯ್ಕೆಯ ಮೇಲೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು ಸ್ಕಿನ್ ಟೋನ್ ಗೆ ಹೊಂದಿಕೆಯಾಗುವ ಬಣ್ಣಗಳ ಧಿರಿಸನ್ನು ಆಯ್ದುಕೊಳ್ಳಿ.

ಇದನ್ನೂ ಓದಿ:ನೀವು ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುತ್ತಿದ್ದೀರಾ? ಅದರ ಪರಿಣಾಮ ಇಲ್ಲಿದೆ  

* ಜಾಕೆಟ್ಸ್ : ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಪಾರ್ಕಸ್, ಏನಾರಕ್ಸ್, ಮಿಲಿಟರಿ ಸ್ಟೈಲ್, ಪಫರ್, ಬಾಂಬರ್ ಜಾಕೆಟ್ಸ್ ಗಳು ಹೀಗೆ ಹಲವಾರು ಜಾಕೆಟ್ಸ್ ಗಳು ಲಭ್ಯವಿದೆ. ಈ ಜಾಕೆಟ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಉಡುಗೆಗೆ ಹೊಂದಿಕೆಯಾಗುವ ಜಾಕೆಟ್ಸ್ ಗಳತ್ತ ಗಮನ ಹರಿಸಿ.

* ಸಾಕ್ಸ್, ಬೂಟುಗಳು ಮತ್ತು ಟೋಪಿಗಳು : ನಿಮ್ಮ ಉಡುಗೆಗೆ ಮ್ಯಾಚ್ ಆಗುವ ಸಾಕ್ಸ್, ಬೂಟುಗಳು ಮತ್ತು ಟೋಪಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಈ ಉಡುಗೆಯು ನಿಮ್ಮನ್ನು ಮತ್ತಷ್ಟು ಆಕರ್ಷಕವನ್ನಾಗಿ ಕಾಣುವಂತೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?