ಕಾಫಿ, ಟೀ ಸೋಸುವ ಜರಡಿಯನ್ನು ಸ್ವಚ್ಛಗೊಳಿಸಲು ಹೆಣಗಾಡುತ್ತಿದ್ದರೆ ಟೆನ್ಶನ್ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಬೆಳಗ್ಗೆ ಸಂಜೆ ಟೀ ಹಾಗೂ ಕಾಫಿಯನ್ನು ಇಷ್ಟ ಪಟ್ಟು ಕುಡಿದ ಮೇಲೆ ಟೀ ಜರಡಿ (ಸ್ಟ್ರೈನರ್) ಯ ಸ್ವಚ್ಛತೆಯೂ ಸ್ವಲ್ಪ ಕಷ್ಟವೆನಿಸುತ್ತದೆ. ಆದರೆ ಜರಡಿ ಕ್ಲೀನ್ ಮಾಡುವ ವಿಚಾರದಲ್ಲಿ ಈ ಟಿಪ್ಸ್ ಗಳನ್ನು ಪಾಲಿಸಿದರೆ ಸ್ವಚ್ಛತೆಯೂ ಇನ್ನಷ್ಟು ಸುಲಭವಾಗುತ್ತದೆ.
ಭಾರತೀಯರು ಟೀ, ಕಾಫಿ ಪ್ರಿಯರು. ಹೀಗಾಗಿ ಹೆಚ್ಚಿನವರು ಟೀ ಕಾಫಿಗೆ ಅಡಿಕ್ಟ್ ಆಗಿರುತ್ತಾರೆ. ಊಟ ತಿಂಡಿಯನ್ನಾದರೂ ಬಿಟ್ಟರೂ, ಆದರೆ ಟೀ ಕಾಫಿಯನ್ನು ಮಾತ್ರ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಮನೆಯವರಿಗಾಗಿ ಆಹಾರ ಪದಾರ್ಥಗಳನ್ನು ಎಷ್ಟು ಪ್ರೀತಿಯಿಂದ ತಯಾರಿಸುತ್ತೇವೋ, ಅಷ್ಟೇ ಮಡಿವಂತಿಕೆ ಹಾಗೂ ಸ್ವಚ್ಛತೆಯ ಕಡೆಗೂ ಗಮನ ನೀಡುತ್ತೇವೆ. ಅಡುಗೆ ಮನೆಯ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಪ್ರತಿಯೊಂದು ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿದೆ. ಎಲ್ಲರಿಗೂ ತಿಳಿದಿರುವಂತೆ ಟೀ ಹಾಗೂ ಕಾಫಿ ಮಾಡಿದ ಬಳಿಕ ಅದನ್ನು ಸೋಸಲು ಜರಡಿಯೂ ಬಹಳ ಮುಖ್ಯವಾಗುತ್ತದೆ. ಈ ಚಹಾವನ್ನು ಸೋಸುವುದು ಸುಲಭವಾದರೂ, ಹಾಲಿನ ಚಹಾವು ಜರಡಿಯಲ್ಲಿ ಸಿಲುಕಿಕೊಳ್ಳುವ ಕಾರಣ ಸ್ವಚ್ಛಗೊಳಿಸುವುದು ಸ್ವಲ್ಪ ಕಷ್ಟ. ಸರಿಯಾಗಿ ಸ್ವಚ್ಛಗೊಳಿಸಿದೇ ಹೋದರೆ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತವೆ. ಹೀಗಾಗಿ ಮನೆಯಲ್ಲಿ ಟೀ ಸೋಸುವ ಟೀ ಜರಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಮುಖ್ಯ.
ಕಾಫಿ ಟೀ ಸೋಸುವ ಜರಡಿಯ ಸ್ವಚ್ಛತೆಗೆ ಈ ಟಿಪ್ಸ್ ಪಾಲಿಸಿ :
- ಸ್ಟೀಲ್ ಜರಡಿಯನ್ನು ಬಿಸಿನೀರಿನಲ್ಲಿ ನೆನೆಸಿಟ್ಟು ಶುಚಿಗೊಳಿಸಬಹುದು : ಟೀ ಸೋಸುವ ಜರಡಿಯನ್ನು ಐದು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಟ್ಟು, ಆ ಬಳಿಕ ಪಾತ್ರೆ ತೊಳೆಯುವ ಜೆಲ್ ಅನ್ನು ಹಾಕಿ ಸ್ಕ್ರಬ್ಬರ್ ಸಹಾಯದಿಂದ ತೊಳೆಯಿರಿ.
- ಅಡಿಗೆ ಸೋಡಾ ಬಳಸಿ ತೊಳೆಯಬಹುದು : ಪ್ಲಾಸ್ಟಿಕ್ ಅಥವಾ ಸ್ಟೀಲ್ ಜರಡಿಯನ್ನು ನೇರವಾಗಿ ತೊಳೆಯುವ ಬದಲು, ಒಂದು ಚಮಚ ಅಡಿಗೆ ಸೋಡಾವನ್ನು ನಾಲ್ಕೈದು ಚಮಚ ಬೆಚ್ಚಗಿನ ನೀರಿಗೆ ಹಾಕಿ ಮಿಶ್ರಣ ಮಾಡಬೇಕು. ಈ ಮಿಶ್ರಣದಲ್ಲಿ ಒಂದೆರಡು ಗಂಟೆಗಳ ಕಾಲ ಜರಡಿಯನ್ನು ನೆನೆಸಿಡಬೇಕು. ಆ ಬಳಿಕ ಹಳೆಯ ಟೂತ್ ಬ್ರಷ್ ಇದ್ದರೆ ಅದನ್ನು ಬಳಸಿ ಸ್ವಚ್ಛಗೊಳಿಸಿದರೆ, ಜರಡಿಯೂ ಶುಚಿಯಾಗುತ್ತದೆ.
- ಬ್ಲೀಚ್ ದ್ರಾವಣವನ್ನು ಬಳಸಿದರೆ ಉತ್ತಮ : ಒಂದು ಕಪ್ ತಣ್ಣೀರಿಗೆ ಒಂದು ಚಮಚ ಬ್ಲೀಚ್ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ. ಈ ಮಿಶ್ರಣದಲ್ಲಿ ಪ್ಲಾಸ್ಟಿಕ್ ಮತ್ತು ಸ್ಟೀಲ್ ಜರಡಿ ನೆನೆಸಿಟ್ಟು, ಆ ಬಳಿಕ ಟೂತ್ ಬ್ರಷ್ ಸಹಾಯದಿಂದ ತೊಳೆಯಿರಿ.
- ಆಲ್ಕೋಹಾಲ್ ಬಳಸಿ ಸ್ವಚ್ಛಗೊಳಿಸಬಹುದು: ಈ ಎರಡು ಗ್ಲಾಸ್ ತಣ್ಣೀರಿಗೆ ಅರ್ಧ ಗ್ಲಾಸ್ ಆಲ್ಕೋಹಾಲ್ ಅನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಜರಡಿಯನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಮರುದಿನ ಬೆಳಗ್ಗೆ ಜರಡಿಯನ್ನು ನೀರಿನಿಂದ ತೊಳೆದರೆ ಸ್ವಚ್ಛವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:35 pm, Tue, 16 January 24