AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sandwich Bag: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?

ಐಷಾರಾಮಿ ಫ್ಯಾಷನ್ ಕಂಪನಿ ಲೂಯಿಸ್​​​​ ವಿಟಾನ್ ತಯಾರಿಸಿದ ಈ ಬ್ಯಾಗ್ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಆದ್ದರಿಂದ ಈ ಸಿಂಪಲ್​​ ಬ್ಯಾಗ್​​​​ ಯಾಕಿಷ್ಟು ದುಬಾರಿ? ಇದರ ವಿಶೇಷತೆ ಏನು? ಇಲ್ಲಿ ತಿಳಿದುಕೊಳ್ಳಿ.

Sandwich Bag: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?
Sandwich BagImage Credit source: instagram
ಅಕ್ಷತಾ ವರ್ಕಾಡಿ
|

Updated on:Jan 16, 2024 | 6:26 PM

Share

ಈ ಕೆಳಗಿನ ಚಿತ್ರದಲ್ಲಿ ಕಾಣುವ ಬ್ಯಾಗ್​​​ ನೋಡಲು ಸಿಂಪಲ್​ ಆಗಿದ್ದರೂ ಅದರ ಬೆಲೆ ಕೇಳಿದರೆ ನೀವು ಶಾಕ್​ ಆಗುವುದಂತೂ ಖಂಡಿತಾ. ಸಾಮಾನ್ಯವಾಗಿ ಪುಡ್​​ ಆರ್ಡರ್​​ ಮಾಡಿದಂತಹ ಸಂದರ್ಭದಲ್ಲಿ ಇದೇ ವಿನ್ಯಾಸದ ಪೇಪರ್​​ ಬ್ಯಾಗ್​​​ಗಳಲ್ಲಿ ಪ್ಯಾಕ್​​ ಮಾಡಿ ಕೊಡುವುದನ್ನು ನೀವು ನೋಡಿರುತ್ತೀರಿ. ಆದರೆ ಇದು ಆ ಕಾಗದದ ಬ್ಯಾಗ್​​ ಅಲ್ಲ. ಈ ಬ್ಯಾಗ್​​​​ ಬೆಲೆ 2,80,000 ರೂ. ಹೌದು ಈ ಚೀಲದ ಬೆಲೆ ಸುಮಾರು ರೂ. 3 ಲಕ್ಷ. ಐಷಾರಾಮಿ ಫ್ಯಾಷನ್ ಕಂಪನಿ ಲೂಯಿಸ್​​ ವಿಟಾನ್ ತಯಾರಿಸಿದ ಈ ಬ್ಯಾಗ್ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಆದ್ದರಿಂದ ಈ ಸಿಂಪಲ್​​ ಬ್ಯಾಗ್​​​​ ಯಾಕಿಷ್ಟು ದುಬಾರಿ? ಇದರ ವಿಶೇಷತೆ ಏನು? ಇಲ್ಲಿ ತಿಳಿದುಕೊಳ್ಳಿ.

ಈ ಸಿಂಪಲ್​​ ಬ್ಯಾಗ್​​​​ ಯಾಕಿಷ್ಟು ದುಬಾರಿ?

ಜನವರಿ 4 ರಂದು ಐಕಾನಿಕ್ ಫ್ರೆಂಚ್ ಬ್ರ್ಯಾಂಡ್ ಲೂಯಿಸ್ ವಿಟಾನ್ ಹಸುವಿನ ಚರ್ಮ(Cowhide leather) ದಿಂದ ರಚಿಸಲಾದ ಈ ಬ್ಯಾಗ್​​​ ಅನ್ನು ಬಿಡುಗಡೆ ಮಾಡಿದೆ. ಇದನ್ನು “ಸ್ಯಾಂಡ್‌ವಿಚ್ ಬ್ಯಾಗ್” ಎಂದು ಹೆಸರಿಸಲಾಗಿದೆ. ಲೂಯಿ ವಿಟಾನ್‌ನ ಪುರುಷರ ಕ್ರಿಯೇಟಿವ್​​​​ ನಿರ್ದೇಶಕರಾದ ಫಾರೆಲ್ ವಿಲಿಯಮ್ಸ್ ಈ ಸ್ಯಾಂಡ್‌ವಿಚ್ ಬ್ಯಾಗ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಚೀಲದ ಉದ್ದ ಕೇವಲ 30 ಸೆಂ.ಮೀ, ಎತ್ತರ 27 ಸೆಂ.ಮೀ ಮತ್ತು ಅಗಲ 17 ಸೆಂ.ಮೀ ಇದೆ. ಬ್ಯಾಗ್​​ ಒಳಗೆ ಜಿಪ್ ಮಾಡಿದ ಪಾಕೆಟ್ ಮತ್ತು ಡಬಲ್ ಫ್ಲಾಟ್ ಪಾಕೆಟ್ ಅನ್ನು ಒದಗಿಸಲಾಗಿದೆ.

ಇದನ್ನೂ ಓದಿ: ವರ್ಷದಲ್ಲಿ ಕೇವಲ 8 ತಿಂಗಳು ಕೆಲಸ ಮಾಡಿ 84 ಲಕ್ಷ ರೂಪಾಯಿ ಸಂಬಳ ಗಳಿಸುತ್ತಾಳೆ ಈ ಯುವತಿ

ಸದ್ಯ ಈ ಬ್ಯಾಗ್‌ನ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದ್ದು, ಸಾಕಷ್ಟು ನೆಟ್ಟಿಗರು ಬಗೆಬಗೆಯ ಕಾಮೆಂಟ್​​ ಮಾಡಿದ್ದಾರೆ. ಇನ್ನು ಕೆಲವಷ್ಟು ನೆಟ್ಟಿಗರು ಹಾಸ್ಯಸ್ಪದವಾಗಿ 30, 40ರೂಪಾಯಿಗೆ ಬ್ಯಾಗ್​​​​ಗೆ ಲಕ್ಷ ಲಕ್ಷ ಏಕೆ ಖರ್ಚು ಮಾಡಬೇಕು ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:06 pm, Tue, 16 January 24

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್