ವರ್ಷದಲ್ಲಿ ಕೇವಲ 8 ತಿಂಗಳು ಕೆಲಸ ಮಾಡಿ 84 ಲಕ್ಷ ರೂಪಾಯಿ ಸಂಬಳ ಗಳಿಸುತ್ತಾಳೆ ಈ ಯುವತಿ
21 ವರ್ಷದ ಟೇಲಿಯಾ ಜೆನ್ನಿ, ಆಸ್ಟ್ರೇಲಿಯಾ ನಿವಾಸಿಯಾಗಿದ್ದು, ವಾರ್ಷಿಕವಾಗಿ 84 ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗದಲ್ಲಿ 4 ತಿಂಗಳ ರಜೆಯನ್ನು ಪಡೆಯುತ್ತಿದ್ದಾರೆ. ಅಷ್ಟಕ್ಕೂ ಆಕೆ ಮಾಡುವ ಕೆಲಸ ಏನು ಗೊತ್ತಾ?
ಹುಡುಗಿಯ ಹೆಸರು ಟೇಲಿಯಾ ಜೆನ್ನಿ. ಆಕೆಗೆ 21 ವರ್ಷ ವಯಸ್ಸು ಮತ್ತು ಆಸ್ಟ್ರೇಲಿಯಾದ ನಿವಾಸಿ. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಓದುವುದನ್ನು ಮುಂದುವರೆಸುತ್ತಾರೆ. ಆದರೆ ಈ ಹುಡುಗಿ ವಾರ್ಷಿಕವಾಗಿ ಸುಮಾರು 84 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಆಸಕ್ತಿದಾಯಕ ವಿಷಯವೆಂದರೆ ಇದು ಆಕೆಯ ಶಾಶ್ವತ ಕೆಲಸವಲ್ಲ, ಬದಲಾಗಿ ಟ್ರೈನಿಯಾಗಿದ್ದೇ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿಗಳ ಆದಾಯ ಪಡೆಯುತ್ತಿದ್ದಾಳೆ. ಹಾಗಾದರೆ ಆಕೆ ಮಾಡುವ ಕೆಲಸವೇನು ಗೊತ್ತಾ? ಇಲ್ಲಿದೆ ವಿವರ.
ದಿ ಸನ್ ವರದಿಯ ಪ್ರಕಾರ, ಈ ಯುವತಿ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಗಣಿಗೆ ಹೋಗಿ ಯಂತ್ರದ ಟೈರ್ ರಿಪೇರಿ ಮಾಡಿ ಫಿಟ್ ಮಾಡುವುದೊಂದೇ ಆಕೆಯ ಕೆಲಸ. ಆದರೆ ಈ ಕೆಲಸ ಈ ಕಾರ್ಯವು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಅನೇಕ ಬಾರಿ ಗಣಿಗಳಲ್ಲಿ ಗುಹೆಗಳು ಕುಸಿದು ಸಾವನ್ನಪ್ಪುವ ಸಾಧ್ಯತೆಯೂ ಇದೆ. ಅನೇಕ ಬಾರಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
ಇದನ್ನೂ ಓದಿ: ರಷ್ಯಾದ ಹಸುಗಳ ಕಣ್ಣಿಗೆ ವಿಆರ್ ಗ್ಲಾಸ್; ಹಾಲು ನೀಡುವ ಸಾಮರ್ಥ್ಯದಲ್ಲಿ ಶೇ. 40ರಷ್ಟು ಹೆಚ್ಚಳ
ಸತತ 4 ತಿಂಗಳು ರಜೆ ಸಿಗುತ್ತದೆ:
ವರದಿಗಳ ಪ್ರಕಾರ, FiFo (ಫ್ಲೈ ಇನ್, ಫ್ಲೈ ಔಟ್) ಉದ್ಯೋಗಗಳು ಎಂದರೆ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲವು ಸ್ಥಳಕ್ಕೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಮತ್ತು ಆ ಕೆಲಸ ಪೂರ್ಣಗೊಂಡಾಗ ಅವರನ್ನು ಮರಳಿ ಕರೆತರುವುದು. 8 ತಿಂಗಳ ಕಾಲ ನಿರಂತರವಾಗಿ ಕೆಲಸ ಮಾಡಬೇಕಾಗಿರುತ್ತದೆ. ಕಂಪನಿಯು ಉದ್ಯೋಗಿಯನ್ನು ಬೇರೆ ಸ್ಥಳಕ್ಕೆ ಕರೆದೊಯ್ದಾಗ, ಅಲ್ಲಿನ ಉದ್ಯೋಗಿಯ ಎಲ್ಲಾ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ