AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನ ಬೆಲೆಯೇರಿಕೆಯಿಂದ ಕಾಫಿ/ ಚಹಾ ದರವೂ ಹೈಕ್, ಮೈಸೂರಲ್ಲಿ ಟೀ/ಕಾಫಿ ಪ್ರಿಯರು ಕಂಗಾಲು!

ಹಾಲಿನ ಬೆಲೆಯೇರಿಕೆಯಿಂದ ಕಾಫಿ/ ಚಹಾ ದರವೂ ಹೈಕ್, ಮೈಸೂರಲ್ಲಿ ಟೀ/ಕಾಫಿ ಪ್ರಿಯರು ಕಂಗಾಲು!

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 02, 2023 | 1:10 PM

Share

ಇಲ್ಲಿಗೆ ಟೀ ಕುಡಿಯಲು ಬರುವವರು ಸಹ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದೇವೆ, ಮೊದಲಿಂತೆ ಗುಂಪಾಗಿ ಬಂದು ಚಹಾ ಕುಡಿಯಲು ಸಾಧ್ಯವಿಲ್ಲ, ಒಬ್ಬೊಬ್ಬರೇ ಬರಬೇಕು ಎನ್ನುತ್ತಾರೆ.

ಮೈಸೂರು: ನಿನ್ನೆಯಿಂದ ನಂದಿನಿ ಹಾಲಿನ (Nandini milk) ದರ ಪ್ರತಿಲೀಟರ್ ಗೆ ರೂ. ಜಾಸ್ತಿಯಾಗಿದೆ. ಸಹಜವಾಗೇ ಟೀ ಮತ್ತು ಕಾಫಿ ಸ್ಟಾಲ್ ನಡೆಸುವವರು ಬೆಲೆ ಹೆಚ್ಚಿಸಿದ್ದಾರೆ. ಇದು ಮೈಸೂರಿನ ಪ್ರತಿಷ್ಠಿತ ಟೀ ಸ್ಟಾಲ್ ಗಳಲ್ಲಿ ಒಂದಾದ ದೇವರಾಜ ಮೊಹಲ್ಲಾದಲ್ಲಿರುವ ಶಂಕರ್ ಟೀ ಸ್ಟಾಲ್ (Shankar tea stall). ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಇದೇ ಸ್ಟಾಲ್ ನಲ್ಲಿ ಚಹಾ ಕುಡಿಯುತ್ತಿದ್ದರೆಂದು ಟಿವಿ9 ಕನ್ನಡ ವಾಹಿನಿ ಮೈಸೂರು ವರದಿಗಾರ ರಾಮ್ ಹೇಳುತ್ತಾರೆ. ಹೋಟೆಲ್ ಮಾಲೀಕ ಶಂಕರ್ ಕಳೆದ 8 ವರ್ಷಗಳಿಂದ ಅರ್ಧ ಟೀಯನ್ನು 12ರೂ. ಗಳಿಗೆ ಮಾರುತ್ತಿದ್ದರು. ಆದರೆ ನಿನ್ನೆಯಿಂದ ಅರ್ಧ ಕಪ್ ಟೀ ಮತ್ತು ಕಾಫಿ ಬೆಲೆಯನ್ನು 3 ರೂ. ಹೆಚ್ಚಿಸಿದ್ದಾರೆ. ಫುಲ್ ಟೀ/ ಕಾಫಿ ಬೇಕಾದರೆ ರೂ. 25 ತೆರಬೇಕು. ಶಂಕರ್, ಈ ಸ್ಟಾಲ್ ಆರಂಭಿಸಿದಾಗ ಟೀ ಪೌಡರ್ ಬೆಲೆ ರೂ. 380 ಇದ್ದಿದ್ದು ಈಗ ರೂ. 560 ಆಗಿದೆಯಂತೆ. ಇಲ್ಲಿಗೆ ಟೀ ಕುಡಿಯಲು ಬರುವವರು ಸಹ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದೇವೆ ಎನ್ನುತ್ತಾರೆ. ಮೊದಲೆಲ್ಲ 4-5 ಜನ ಸ್ನೇಹಿತರು ಒಟ್ಟಿಗೆ ಬಂದು ಟೀ ಕುಡಿಯುತ್ತಿದ್ದವರು ಈಗ ಒಬ್ಬೊಬ್ಬರೇ ಬಂದು ಕುಡಿಯುತ್ತಿದ್ದಾರಂತೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 02, 2023 01:07 PM