Satyanarayan Vrat: ಯಾಕಾಗಿ ಸತ್ಯನಾರಾಯಣ ಪೂಜೆ ಮಾಡಬೇಕು? ಪೂಜಾ ವಿಧಾನ ಹೇಗಿರಬೇಕು?

ಭಗವಾನ್ ವಿಷ್ಣುವನ್ನು ಮೆಚ್ಚಿಸಲು ಜನರು ಸತ್ಯನಾರಾಯಣ ವ್ರತವನ್ನು ಮಾಡುತ್ತಾರೆ. ಈ ವ್ರತಾಚರಣೆ ಅಥವಾ ಸತ್ಯನಾರಾಯಣ ಕತೆ ಮಾಡಿಸುವವರಿಗೆ, ಭಗವಾನ್ ಶ್ರೀ ಹರಿಯು ಭಕ್ತರಿಗೆ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಅವರ ಅಪೇಕ್ಷಿತ ಬಯಕೆಗಳನ್ನು ಪೂರೈಸುತ್ತಾನೆ. ಹಾಗಾದರೆ ಸತ್ಯನಾರಾಯಣ ವ್ರತ ಪೂಜಾ ವಿಧಾನ ಹೇಗಿರಬೇಕು? ಆ ದಿನ ಯಾವ ಮಂತ್ರ ಪಠಣ ಮಾಡಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ.

Satyanarayan Vrat: ಯಾಕಾಗಿ ಸತ್ಯನಾರಾಯಣ ಪೂಜೆ ಮಾಡಬೇಕು? ಪೂಜಾ ವಿಧಾನ ಹೇಗಿರಬೇಕು?
Satyanarayan Vrat
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Jan 16, 2024 | 6:52 PM

ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸಬೇಕು ಎಂದುಕೊಳ್ಳುತ್ತಿರುವವರಿಗೆ ಯಾವ ದಿನ ಮಾಡಿಸಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಸಾಮಾನ್ಯವಾಗಿ ಪೂರ್ಣಿಮೆಯ ದಿನವು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನವಾಗಿದ್ದು ಸತ್ಯ ನಾರಾಯಣನೂ ಕೂಡ ಶ್ರೀ ಹರಿಯ ಇನ್ನೊಂದು ರೂಪವಾದ್ದರಿಂದ ಹುಣ್ಣಿಮೆ ದಿನ ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಮುಖ್ಯವಾಗಿ ಸತ್ಯನಾರಾಯಣ ಪೂಜೆಯನ್ನು ಯಾವುದೇ ತಿಂಗಳ ಶುಕ್ಲಪಕ್ಷದ ಶುಭ ಸಮಯದಲ್ಲಿ ಮಾಡಬಹುದಾಗಿದ್ದರೂ ಕೂಡ ಹುಣ್ಣಿಮೆ ಅತ್ಯಂತ ಪ್ರಶಸ್ಥ ಎಂದು ಪುರಾಣಗಳು ಹೇಳುತ್ತವೆ. ಅಲ್ಲದೆ ಶಾಸ್ತ್ರಗಳ ಪ್ರಕಾರ, ಹುಣ್ಣಿಮೆಯ ದಿನದಂದು ಸತ್ಯನಾರಾಯಣನನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

ಸತ್ಯನಾರಾಯಣ ವ್ರತವು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ. ಈ ಶುಭ ದಿನದಂದು, ವಿಷ್ಣುವಿನ ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಭಗವಾನ್ ವಿಷ್ಣುವಿನ ಪ್ರಾರ್ಥನೆ ಮಾಡುತ್ತಾರೆ. ಇನ್ನು ಪ್ರತಿ ಹುಣ್ಣಿಮೆಯು ತನ್ನದೇ ಆದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ಚಂದ್ರನು ಭೂಮಿಗೆ ಹತ್ತಿರ ಬಂದು ತನ್ನ ದೈವಿಕ ಕಿರಣಗಳಿಂದ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ ಹಾಗಾಗಿ, ಈ ದಿನ ಸತ್ಯನಾರಾಯಣ ಪೂಜೆ ಮಾಡುವುದು ಮನೆಗೆ ಮತ್ತು ಮನೆಯವರಿಗೆ ಒಳ್ಳೆಯದು ಎಂಬ ನಂಬಿಕೆ ಇದೆ. ಇನ್ನು ಕೆಲವು ಕಡೆಗಳಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಜನರು ಈ ದಿನ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಗವಾನ್ ವಿಷ್ಣುವನ್ನು ಮೆಚ್ಚಿಸಲು ಜನರು ಸತ್ಯನಾರಾಯಣ ವ್ರತವನ್ನು ಮಾಡುತ್ತಾರೆ. ಈ ವ್ರತಾಚರಣೆ ಅಥವಾ ಸತ್ಯನಾರಾಯಣ ಕತೆ ಮಾಡಿಸುವವರಿಗೆ, ಭಗವಾನ್ ಶ್ರೀ ಹರಿಯು ಭಕ್ತರಿಗೆ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಅವರ ಅಪೇಕ್ಷಿತ ಬಯಕೆಗಳನ್ನು ಪೂರೈಸುತ್ತಾನೆ. ಹಾಗಾದರೆ ಸತ್ಯನಾರಾಯಣ ವ್ರತ ಪೂಜಾ ವಿಧಾನ ಹೇಗಿರಬೇಕು? ಆ ದಿನ ಯಾವ ಮಂತ್ರ ಪಠಣ ಮಾಡಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನು ಓದಿ: ಲಕ್ಷ್ಮೀ ಮಂತ್ರ ಪಠಿಣ ಮಾಡುವುದರಿಂದ ಯಾವ ರೀತಿಯ ಭೋಗ – ಭಾಗ್ಯಗಳು ಪ್ರಾಪ್ತಿಯಾಗುತ್ತೆ?

ಸತ್ಯನಾರಾಯಣ ವ್ರತ ಪೂಜಾ ವಿಧಾನ ಹೇಗಿರಬೇಕು?

ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ಸತ್ಯನಾರಾಯಣ ಪೂಜೆ ಮಾಡುವ ಜಾಗವನ್ನು ವಿಶೇಷವಾಗಿ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ. ಮರದ ಹಲಗೆಯ ಮೇಲೆ ಭಗವಾನ್ ಸತ್ಯನಾರಾಯಣ ಚಿತ್ರ ಅಥವಾ ವಿಗ್ರಹವನ್ನು ಇರಿಸಿ. ಈ ಪೂಜೆಯನ್ನು ನಿಮ್ಮ ಪುರೋಹಿತರು ನಡೆಸಿಕೊಡುತ್ತಾರೆ. ಸತ್ಯನಾರಾಯಣ ಪೂಜೆಯನ್ನು ಮಾಡಲು ಯಾವುದೇ ನಿಗದಿತ ಸಮಯವಿಲ್ಲ. ಇದನ್ನು ಯಾವಾಗ ಬೇಕಾದರೂ ಮಾಡಬಹುದು. ವಿಗ್ರಹದ ಮುಂದೆ ದೀಪವನ್ನು ಬೆಳಗಿಸಿ, ನೀರಿನಿಂದ ತುಂಬಿದ ಕಲಶವನ್ನು ಇರಿಸಿ, ವಿಗ್ರಹಗಳನ್ನು ಹೂವುಗಳಿಂದ ಅಲಂಕರಿಸಿ ಮತ್ತು ಪಂಚಾಮೃತ ಮತ್ತು ಕತೆ ಪ್ರಸಾದವನ್ನು ವಿಶೇಷ ನೈವೇದ್ಯವಾಗಿ ಅರ್ಪಿಸಿ. ದೇವರಿಗೆ ತುಳಸಿ ಅರ್ಪಿಸಬೇಕು. ಇಲ್ಲವಾದಲ್ಲಿ ಪೂಜೆ ಅಪೂರ್ಣವಾಗುತ್ತದೆ. ಆದರೆ ಹುಣ್ಣಿಮೆಯ ದಿನದಂದು ತುಳಸಿ ಕೀಳಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಈ ದಿನ ಯಾವ ಮಂತ್ರವನ್ನು ಪರಿಸಬೇಕು?

  •  ಓಂ ನಮೋ ಭಗವತೇ ವಾಸುದೇವಾಯ
  • ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ್ ನಾರಾಯಣ್ ವಾಸುದೇವ
  • ಹರೇ ರಾಮ ಹರೇ ರಾಮೇ ರಾಮ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​