Satyanarayan Vrat List 2024: ಸತ್ಯನಾರಾಯಣ ವ್ರತಾಚರಣೆ ಮಾಡಲು ಯಾವ ದಿನ ಶ್ರೇಷ್ಠ? ದಿನಾಂಕ, ಮೂಹೂರ್ತಗಳ ಮಾಹಿತಿ ಇಲ್ಲಿದೆ
ಹುಣ್ಣಿಮೆ ದಿನ ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಅಲ್ಲದೆ ಶಾಸ್ತ್ರಗಳ ಪ್ರಕಾರ, ಹುಣ್ಣಿಮೆಯ ದಿನದಂದು ಮನೆಯಲ್ಲಿ ಸತ್ಯನಾರಾಯಣನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾದರೆ 2024ರಲ್ಲಿ ನಾವು ಯಾವ ಯಾವ ದಿನಗಳಲ್ಲಿ ಸತ್ಯನಾರಾಯಣ ವ್ರತ ಅಥವಾ ಪೂಜೆ ಮಾಡಬಹುದು? ದಿನಾಂಕ ಮತ್ತು ಸಮಯದ ಬಗೆಗಿನ ಮಾಹಿತಿ ಇಲ್ಲಿದೆ
ಹಿಂದೂ ಧರ್ಮದಲ್ಲಿ ಸತ್ಯನಾರಾಯಣ ವ್ರತಕ್ಕೆ ಅಪಾರ ಮಹತ್ವವಿದೆ. ಈ ದಿನವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ. ಈ ಶುಭ ದಿನದಂದು, ವಿಷ್ಣುವಿನ ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಭಗವಾನ್ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸತ್ಯನಾರಾಯಣ ವ್ರತವನ್ನು ಪ್ರತಿ ತಿಂಗಳು ಪೂರ್ಣಿಮಾ ಹುಣ್ಣಿಮೆ ಅಥವಾ ಹುಣ್ಣಿಮೆ ತಿಥಿಯಂದು ಆಚರಿಸಲಾಗುತ್ತದೆ. ಏಕೆಂದರೆ ಹುಣ್ಣಿಮೆ ದಿನ ಮನೆಯಲ್ಲಿ ಸತ್ಯನಾರಾಯಣ ಕತೆ ಮಾಡಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಅಲ್ಲದೆ ಶಾಸ್ತ್ರಗಳ ಪ್ರಕಾರ, ಹುಣ್ಣಿಮೆಯ ದಿನದಂದು ಮನೆಯಲ್ಲಿ ಸತ್ಯನಾರಾಯಣನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾದರೆ 2024ರಲ್ಲಿ ನಾವು ಯಾವ ಯಾವ ದಿನಗಳಲ್ಲಿ ಸತ್ಯನಾರಾಯಣ ವ್ರತ ಅಥವಾ ಪೂಜೆ ಮಾಡಬಹುದು? ದಿನಾಂಕ ಮತ್ತು ಸಮಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
2024ರ ಸತ್ಯನಾರಾಯಣ ವ್ರತ ಪಟ್ಟಿ: ದಿನಾಂಕ ಮತ್ತು ಸಮಯದ ಬಗೆಗಿನ ಮಾಹಿತಿ ಇಲ್ಲಿದೆ
ಜನವರಿ 25 ರಂದು ಪುಷ್ಯ ಪೂರ್ಣಿಮಾ ಅಥವಾ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಜ. 24ರ ಮಧ್ಯಾಹ್ನ 09:49 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಜ. 25ರ ರಾತ್ರಿ 11:23 ಕ್ಕೆ
ಫೆಬ್ರವರಿ 24 ರಂದು ಮಾಘ ಹುಣ್ಣಿಮೆ ಪೂರ್ಣಿಮಾ ತಿಥಿ ಪ್ರಾರಂಭವಾಗುವುದು ಫೆ. 23ರ ಮಧ್ಯಾಹ್ನ 03:33 ಕ್ಕೆ ಪೂರ್ಣಿಮಾ ತಿಥಿ ಕೊನೆಗೊಳ್ಳುವುದು ಫೆ 24ರ ಸಂಜೆ 05:59 ಕ್ಕೆ
ಮಾರ್ಚ್ 24 ರಂದು ಫಾಲ್ಗುಣ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಮಾ. 24ರ ಬೆಳಿಗ್ಗೆ 09:54 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಮಾ. 25ರ ಮಧ್ಯಾಹ್ನ 12:29 ಕ್ಕೆ
ಎಪ್ರಿಲ್ 23 ರಂದು ಚೈತ್ರ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಎ. 23ರ ಬೆಳಿಗ್ಗೆ 03:25 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಎ. 24ರ ಬೆಳಿಗ್ಗೆ 05:18 ಕ್ಕೆ
ಮೇ 23 ರಂದು ವೈಶಾಖ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಮೇ 22ರ ಬೆಳಿಗ್ಗೆ 06:47 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಮೇ 23ರ ಸಂಜೆ 07:22 ಕ್ಕೆ
ಜೂನ್ 21 ರಂದು ಜ್ಯೇಷ್ಠ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಜೂ. 21ರ ಬೆಳಿಗ್ಗೆ 07:31 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಜೂ. 22ರ ಬೆಳಿಗ್ಗೆ 06:37 ಕ್ಕೆ
ಜುಲೈ 21 ರಂದು ಆಷಾಢ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಜು. 20ರ ಸಂಜೆ 05:59 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಜು. 21ರ ಮಧ್ಯಾಹ್ನ 03:46 ಕ್ಕೆ
ಆಗಸ್ಟ್ 19 ರಂದು ಶ್ರಾವಣ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಆ. 19ರ ಬೆಳಿಗ್ಗೆ 03:04 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಆ. 19ರ ರಾತ್ರಿ 11:55 ಕ್ಕೆ
ಸೆಪ್ಟೆಂಬರ್ 17 ರಂದು ಭಾದ್ರಪದ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಸೆ. 17ರ ಬೆಳಿಗ್ಗೆ 11:44 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಸೆ. 18ರ ಬೆಳಿಗ್ಗೆ 08:04 ಕ್ಕೆ
ಇದನ್ನೂ ಓದಿ: ಯಾಕಾಗಿ ಸತ್ಯನಾರಾಯಣ ಪೂಜೆ ಮಾಡಬೇಕು? ಪೂಜಾ ವಿಧಾನ ಹೇಗಿರಬೇಕು?
ಅಕ್ಟೋಬರ್ 17 ರಂದು ಅಶ್ವಿನಿ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಅ. 16ರ ರಾತ್ರಿ 08:40 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಅ. 17ರ ಸಂಜೆ 04:55 ಕ್ಕೆ
ನವೆಂಬರ್ 15 ರಂದು ಕಾರ್ತಿಕ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ನ.15ರ ಬೆಳಿಗ್ಗೆ 06:19 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ನ.16ರ ಮಧ್ಯಾಹ್ನ 02:58 ಕ್ಕೆ
ಡಿಸೆಂಬರ್ 15 ರಂದು ಮಾರ್ಗಶಿರ ಹುಣ್ಣಿಮೆ ಹುಣ್ಣಿಮೆ ತಿಥಿ ಪ್ರಾರಂಭವಾಗುವುದು ಡಿ.14ರ ಸಂಜೆ 04:58 ಕ್ಕೆ ಹುಣ್ಣಿಮೆ ತಿಥಿ ಕೊನೆಗೊಳ್ಳುವುದು ಡಿ.15ರ ಮಧ್ಯಾಹ್ನ 02:31 ಕ್ಕೆ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ