ಪ್ರಭು ಶ್ರೀ ರಾಮಚಂದ್ರ ಭೇಟಿ ನೀಡಿದ ಕರ್ನಾಟಕದ ಪ್ರಸಿದ್ಧ ಸ್ಥಳಗಳು
ಪ್ರಭು ಶ್ರೀ ರಾಮಚಂದ್ರ ದೇವರು ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ಕೊಟ್ಟಿದ್ದರು ಎಂಬ ಐತಿಹ್ಯವಿದೆ. ಇದು ನಮಗೆಲ್ಲಾ ಖುಷಿ ಜೊತೆಗೆ ಹೆಮ್ಮೆಯ ವಿಷಯ. ಶ್ರೀ ರಾಮ ದೇವರ ಪಾದ ಸ್ಪರ್ಶವಾದ ಜಾಗದಲ್ಲಿ ನಾವು ವಾಸ ಮಾಡುತ್ತಿದ್ದೇವೆ ಎಂಬುದೇ ದೊಡ್ಡ ಹರ್ಷದ ಸಂಗತಿ. ಹಾಗಾಗಿ ನಾವು ಅವುಗಳಲ್ಲಿ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ತಿಳಿಸಲಾಗಿದ್ದು. ಇದರ ಹೊರತಾಗಿಯೂ ಕೆಲವು ಜಾಗಗಳು ಇರಬಹುದು. ಸಾಕ್ಷ್ಯಾಧಾರ ಗಳ ಮೂಲಕ ತಿಳಿದಿರುವಂತ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜ. 22ರಂದು ನಡೆಯಲಿದೆ. ಇದು ನಮಗೆಲ್ಲರಿಗೂ ಖುಷಿ ಕೊಡುವ ವಿಷಯವಾಗಿದೆ. ಅದರಲ್ಲಿಯೂ ಪ್ರಭು ಶ್ರೀ ರಾಮಚಂದ್ರ ದೇವರು ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ಕೊಟ್ಟಿದ್ದರು ಎಂಬ ಐತಿಹ್ಯವಿದೆ. ಇದು ನಮಗೆಲ್ಲಾ ಖುಷಿ ಜೊತೆಗೆ ಹೆಮ್ಮೆಯ ವಿಷಯ. ಶ್ರೀ ರಾಮ ದೇವರ ಪಾದ ಸ್ಪರ್ಶವಾದ ಜಾಗದಲ್ಲಿ ನಾವು ವಾಸ ಮಾಡುತ್ತಿದ್ದೇವೆ ಎಂಬುದೇ ದೊಡ್ಡ ಹರ್ಷದ ಸಂಗತಿ. ಹಾಗಾಗಿ ನಾವು ಅವುಗಳಲ್ಲಿ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ತಿಳಿಸಲಾಗಿದ್ದು. ಇದರ ಹೊರತಾಗಿಯೂ ಕೆಲವು ಜಾಗಗಳು ಇರಬಹುದು. ಸಾಕ್ಷ್ಯಾಧಾರ ಗಳ ಮೂಲಕ ತಿಳಿದಿರುವಂತ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಅಂಬುತೀರ್ಥ: ಶ್ರೀ ರಾಮನ ಶರದಿಂದ ಹುಟ್ಟಿದ ತೀರ್ಥ ಈ ಕ್ಷೇತ್ರಕ್ಕೆ ಅಂಬುತೀರ್ಥ ಎಂಬ ಹೆಸರು ಬಂದಿರುವುದರ ಹಿಂದೆ ಒಂದು ಪೌರಾಣಿಕ ಕಥೆ ಕೂಡ ಇದೆ. ರಾಮಾಯಣ ಕಾಲದಲ್ಲಿ ಅರಣ್ಯ ವಾಸದಲ್ಲಿ ಇರುವಾಗ ಶ್ರೀರಾಮಚಂದ್ರನು ಈ ಪ್ರದೇಶಕ್ಕೆ ಬಂದು ನೆಲೆಸಿದಾಗ ದಿನ ನಿತ್ಯದ ಕಾರ್ಯಗಳಿಗೆ ನೀರಿನ ಅಭಾವ ವಾದಾಗ ಆ ಸಮಯದಲ್ಲಿ ಶ್ರೀರಾಮನು ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥ ಉದ್ಭವ ಆಯಿತು. ಹೀಗೆ ಉದ್ಭವ ಆದ ತೀರ್ಥವನ್ನು ಅಂಬುತೀರ್ಥ ಎಂದು ಹೇಳಲಾಗುತ್ತದೆ. ಅಂಬು ಎಂದರೆ ಸಂಸ್ಕೃತದಲ್ಲಿ ಬಾಣ ಎಂದರ್ಥ. ಇದು ಶ್ರೀರಾಮನ ಶೀರದಿಂದ ಹುಟ್ಟಿದ್ದರಿಂದ ಹಾಗೂ ಮುಂದೆ ಈ ನೀರು ನದಿಯಾಗಿ ಹರಿಯುವುದರಿಂದ ಈ ನದಿಗೆ ಶರಾವತಿ ಎಂದು ಹೇಳಲಾಗುತ್ತದೆ.
ದೇವರಾಯನ ದುರ್ಗ: ಶ್ರೀ ರಾಮನು ಲಂಕೆಗೆ ಹೋಗುವಾಗ ನೆಲೆ ನಿಂತ ಸ್ಥಳ ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ದೇವರಾಯನದುರ್ಗ ಬಹಳ ಪ್ರಖ್ಯಾತ. ಮಲ್ಲಪಟ್ಟಣ ಎಂದೂ ಕರೆಸಿಕೊಂಡಿದ್ದ ದೇವರಾಯನ ದುರ್ಗದಲ್ಲಿ ಕಂಠೀರವ ನರಸರಾಜ ಒಡೆಯರು ದುರ್ಗಾನರಸಿಂಹ ದೇವಾಲಯ ಕಟ್ಟಿಸಿದ್ದಾರೆ. ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯ ಪಳೆಯುಳಿಕೆಗಳು ಗೋಚರಿಸುತ್ತವೆ. ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಊರಿನ ಈಶಾನ್ಯ ದಿಕ್ಕಿನಲ್ಲಿ ಕುಂಬಿ ಬೆಟ್ಟವಿದೆ. ಬೆಟ್ಟದ ಬಲಕ್ಕೆ ತಿರುಗಿದರೆ ಸೀತಾದೇವಿ ಕೊಳ ಹಾಗೂ ರಾಮಲಕ್ಷ್ಮಣರು ತಪವನ್ನಾಚರಿಸಿದ ಗುಹೆ ಇದೆ. ಈ ಗುಹೆಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ. ಶ್ರೀ ರಾಮನು ಇಲ್ಲಿ ಲಂಕೆಗೆ ಹೋಗುವಾಗ ನೆಲೆ ನಿಂತಿದ್ದ ಎನ್ನಲಾಗುತ್ತದೆ.
ಚುಂಚನಕಟ್ಟೆ: ವನವಾಸ ಕಾಲದಲ್ಲಿ ಶ್ರೀರಾಮನು ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದನೆಂಬ ಐತಿಹ್ಯವಿದೆ ಚುಂಚನಕಟ್ಟೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿರುವ ಒಂದು ಪ್ರವಾಸಿ ತಾಣ. ಚುಂಚನಕಟ್ಟೆಯು ಕೃಷ್ಣರಾಜನಗರದಿಂದ 15 ಕಿ.ಮಿ ದೂರದಲ್ಲಿ ಇದೆ. ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ತನ್ನ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದನೆಂಬ ಐತಿಹ್ಯವಿದೆ. ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ದಿ ಪಡೆದಿದೆ. ಇಲ್ಲಿಯ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ.
ಶಬರಿ ಕೊಳ್ಳ : ಶ್ರೀ ರಾಮನಿಗಾಗಿ ಶಬರಿ ಕಾಯುತ್ತಿದ್ದ ಸ್ಥಳ ರಾಮನ ಭಕ್ತ ಶಬರಿಗೆ ಸಮರ್ಪಿತವಾದ ಕೆಲವೇ ದೇವಾಲಯಗಳಲ್ಲಿ ಇದು ಒಂದಾಗಿದೆ. ಈ ದೇವಾಲಯವು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಪಟ್ಟಣದ ಬಳಿ ಇರುವ ಬೆಟ್ಟದ ಸೀಳಿನಲ್ಲಿದೆ. ಶಬರಿ ಕೊಳ್ಳದಲ್ಲಿ ವರ್ಷದ ಕೆಲವು ದಿನಗಳಲ್ಲಿ ಅಂದರೆ ಅಮಾವಾಸ್ಯೆ ಮತ್ತು ಕೆಲವು ಹಬ್ಬಗಳಲ್ಲಿ ಮಾತ್ರ ಜನಸಂದಣಿ ಇರುತ್ತದೆ. ಸಹಜವಾಗಿ ವಾರ್ಷಿಕ ಜಾತ್ರೆಯ ಸಮಯದಲ್ಲಿ ಈ ಸ್ಥಳವು ಭಕ್ತರು ಮತ್ತು ವ್ಯಾಪಾರಿಗಳಿಂದ ತುಂಬಿರುತ್ತದೆ.
ಬ್ರಹ್ಮಗಿರಿ ಬೆಟ್ಟ: ಲಕ್ಷ್ಮಣನು ತನ್ನ ಅಣ್ಣ ರಾಮನ ಬಾಯಾರಿಕೆ ನೀಗಲು ಬಾಣ ಬಿಟ್ಟ ಸ್ಥಳ (ಲಕ್ಷ್ಮಣ ತೀರ್ಥ) ವನವಾಸದ ಸಂದರ್ಭದಲ್ಲಿ ಲಕ್ಷ್ಮಣನು ತನ್ನ ಅಣ್ಣ ರಾಮನ ಬಾಯಾರಿಕೆ ನೀಗಲು, ಮುನಿಕಾಡಿನ ಬ್ರಹ್ಮಗಿರಿ ಎಂಬ ಬೆಟ್ಟಕ್ಕೆ ತನ್ನ ಬಾಣದಿಂದ ಹೊಡೆದಾಗ ಹುಟ್ಟಿ ಬರುವ ನದಿಯೇ ಲಕ್ಷ್ಮಣತೀರ್ಥ. ಇದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉಗಮಿಸಿ ಪೂರ್ವಾಭಿಮುಖವಾಗಿ ಹರಿದು ಮುಂದೆ ಕೊಡಗು ಜಿಲ್ಲೆಯ ವಿರಾಜಪೇಟೆ, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೃಷ್ಣರಾಜನಗರ ತಾಲೂಕಿನಲ್ಲಿ ಹರಿದು ಕೃಷ್ಣರಾಜ ಸಾಗರದ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ. ಈ ನದಿಯು ಒಟ್ಟು ಉದ್ದ 180 ಕಿ.ಮೀ.
ಹಂಪಿ: ಸೀತಾ ಮಾತೆಯನ್ನು ಹುಡುಕುತ್ತಾ ಶ್ರೀ ರಾಮನು ಹನುಮನ ಭೇಟಿ ಮಾಡಿದ ಸ್ಥಳ (ಕಿಷ್ಕಿಂದೆ) ಕೊಪ್ಪಳ ಜಿಲ್ಲೆ ಕಿಷ್ಕಿಂದೆ ಹನುಮ ಹುಟ್ಟಿದ ಸ್ಥಳ ಎಂದು ಹೆಸರುವಾಸಿಯಾದ ಪ್ರದೇಶ. ಕಿಷ್ಕಿಂದೆ ಎಂದರೆ ಸಂಸ್ಕೃತದಲ್ಲಿ ಇಕ್ಕಟ್ಟಿನ ಪ್ರದೇಶ ಎಂದರ್ಥ. ಹನುಮ ಹುಟ್ಟಿದ ಕೊಪ್ಪಳ ಜಿಲ್ಲೆ ಅಂಜನಾದ್ರಿ ಕೂಡಾ ಇಕ್ಕಟ್ಟಿನ ಪ್ರದೇಶವಾಗಿದೆ. ಇಲ್ಲಿ ಸುಮಾರು 576 ಮೆಟ್ಟಿಲನ್ನು ಹತ್ತಿ ಹನುಮನ ದರ್ಶನ ಪಡೆಯಬೇಕು. ಸೀತಾ ಮಾತೆಯನ್ನು ಹುಡುಕುತ್ತಾ ಶ್ರೀ ರಾಮನು ಹನುಮನ ಭೇಟಿ ಮಾಡಿದ ಸ್ಥಳವೂ ಇದಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಈಗಲೇ ಏಕೆ? ಕಾರಣ ಕೊಟ್ಟ ಪೇಜಾವರ ಶ್ರೀ
ಧರ್ಮಸ್ಥಳದ ಶ್ರೀ ರಾಮಕ್ಷೇತ್ರ: ಶ್ರೀ ರಾಮಚಂದ್ರ ದೇವರು ಸೀತಾನ್ವೇಷಣೆಯ ಸಂದರ್ಭದಲ್ಲಿ ಬಂದು, ಒಂದು ದಿವಸ ತಂಗಿದ್ದ ಸ್ಥಳ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಸೀತಾ- ರಾಮ ಪರಿವಾರವನ್ನು ಪೂಜಿಸಲಾಗುತ್ತದೆ. ಈ ಪುಣ್ಯ ಭೂಮಿಗೆ ಪ್ರಭು ಶ್ರೀ ರಾಮಚಂದ್ರ ದೇವರು ಸೀತಾನ್ವೇಷಣೆಯ ಸಂದರ್ಭದಲ್ಲಿ ಬಂದು, ಒಂದು ದಿವಸ ತಂಗಿ, ಋಷಿ ಮುನಿಗಳೊಂದಿಗಿದ್ದು ತನ್ನ ಅನುಷ್ಠಾನವನ್ನು ಮಾಡಿದ್ದರು ಎಂಬುದು ಇಲ್ಲಿಯ ಇತಿಹಾಸ. ಆ ಕಾರಣದಿಂದಲೇ ಶ್ರೀರಾಮ ಕ್ಷೇತ್ರಕ್ಕೆ ದಕ್ಷಿಣದ ಅಯೋಧ್ಯೆ ಎಂಬ ಹೆಸರು ಬಂದಿತು ಎನ್ನಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ