ಅಯೋಧ್ಯೆ: ಸರಯೂ ನದಿತಟದಲ್ಲಿ ಭಕ್ತರ ದಂಡು, ಊರಿಗೆ ಕೊಂಡೊಯ್ಯಲು ಬಾಟಲಿಗಳಲ್ಲಿ ಪವಿತ್ರ ನೀರಿನ ಸಂಗ್ರಹ

ಅಯೋಧ್ಯೆ: ಸರಯೂ ನದಿತಟದಲ್ಲಿ ಭಕ್ತರ ದಂಡು, ಊರಿಗೆ ಕೊಂಡೊಯ್ಯಲು ಬಾಟಲಿಗಳಲ್ಲಿ ಪವಿತ್ರ ನೀರಿನ ಸಂಗ್ರಹ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2024 | 10:52 AM

ರಾಮನ ಕತೆಯಲ್ಲಿ ಈ ನದಿಗೆ ಬಹಳ ಪ್ರಾಮುಖ್ಯತೆ ಇದೆ ಯಾಕೆಂದರೆ, ಶ್ರೀರಾಮ ತನ್ನ ಅವತಾರವನ್ನು ತ್ಯಜಿಸಿದ್ದು ಇದೇ ನದಿಯಲ್ಲಿ ಮತ್ತು ರಾಮನ ಹುಟ್ಟೂರು ಅಯೋಧ್ಯೆ ಆಗಿರುವುದರಿಂದ ನದಿಯಲ್ಲಿ ಮಿಂದಿದ್ದಾನೆ ಮತ್ತು ತಟದಲ್ಲಿ ಓಡಾಡಿದ್ದಾನೆ ಎಂದು ವರದಿಗಾರ ಹೇಳುತ್ತಾರೆ.

ಅಯೋಧ್ಯೆ: ಭವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರಕ್ಕೆ (Ram Mandir) ತೀರ ಹತ್ತಿರದಲ್ಲಿ ಸರಯೂ ನದಿ (Saryu River) ಹರಿಯುತ್ತದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ ಮತ್ತು ಕೆಮೆರಾಮನ್ ಇಂದು ಬೆಳಗ್ಗೆ ಸರಯೂ ನದಿ ತಟಕ್ಕೆ ತೆರಳಿ ಅಲ್ಲಿನ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ರಾಮನ ಕತೆಯಲ್ಲಿ ಈ ನದಿಗೆ ಬಹಳ ಪ್ರಾಮುಖ್ಯತೆ ಇದೆ ಯಾಕೆಂದರೆ, ಶ್ರೀರಾಮ (Sriram) ತನ್ನ ಅವತಾರವನ್ನು ತ್ಯಜಿಸಿದ್ದು ಇದೇ ನದಿಯಲ್ಲಿ ಮತ್ತು ರಾಮನ ಹುಟ್ಟೂರು ಅಯೋಧ್ಯೆ ಆಗಿರುವುದರಿಂದ ನದಿಯಲ್ಲಿ ಮಿಂದಿದ್ದಾನೆ ಮತ್ತು ತಟದಲ್ಲಿ ಓಡಾಡಿದ್ದಾನೆ ಎಂದು ವರದಿಗಾರ ಹೇಳುತ್ತಾರೆ. ದೇಶದ ಮೂಲೆಮೂಲೆಗಳಿಂದ ಅಯೋಧ್ಯೆಗೆ ಆಗಮಿಸಿರುವ ಭಕ್ತರು ಬೆಳಗಿನಿಂದಲೇ ಸರಯೂ ನದಿ ತಟಕ್ಕೆ ಬಂದ ನೀರನ್ನು ಸಂಗ್ರಹಿಸುತ್ತಿದ್ದಾರೆ. ಕೆಲವರು ನದಿನೀರನ್ನು ತಮ್ಮ ಊರುಗಳಿಗೆ ಕೊಂಡೊಯ್ಯುತ್ತಿದ್ದರೆ ಕೆಲವರು ಬಾಟಲಿಗಳಲ್ಲಿ ತುಂಬಿಕೊಂಡು ಬಂದು ರಾಮಮಂದಿರ ಟ್ರಸ್ಟ್ ಗೆ ಸಮರ್ಪಿಸುತ್ತಿದ್ದಾರೆ. ಈ ಪ್ರದೇಶದ ಮತ್ತೊಂದು ಭಾಗದಲ್ಲಿ ಕಲಶ ಮತ್ತು ರಾಮನ ವಿಗ್ರಹಗಳ ಮೆರವಣಿಗೆ ನಡೆಯುತ್ತಿದೆ ಮತ್ತು ಭಕ್ತರು ಭಾವಪರವಶರಾಗಿ ಕುಣಿಯುತ್ತಿದ್ದಾರೆ. ಸಾಧು ಸಂತರು ಜನರಿಗೆ ಪ್ರಸಾದ ಹಂಚುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ