AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುವುದಿಲ್ಲವಂತೆ! ಪುರಾಣ ಕಥೆಗಳು ಹೇಳುವುದೇನು?

ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯ ಬಳಿ ಹರಿಯುವ ಸರಯೂ ನದಿಯನ್ನು ಶಾಪಗ್ರಸ್ತ ನದಿ ಎಂದು ಪರಿಗಣಿಸಲಾಗಿದೆ. ಈ ನದಿಗೆ ಯಾಕೆ ಶಾಪವಿದೆ? ಇದಕ್ಕೆ ಪುರಾಣ ಕಥೆಗಳಲ್ಲಿರುವ ಕಾರಣ ಏನು? ಇಲ್ಲಿದೆ ವಿವರ

ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುವುದಿಲ್ಲವಂತೆ! ಪುರಾಣ ಕಥೆಗಳು ಹೇಳುವುದೇನು?
ಅಯೋಧ್ಯೆಯ ಸರಯೂ ನದಿ
ಗಣಪತಿ ಶರ್ಮಾ
|

Updated on:Jan 06, 2024 | 4:30 PM

Share

ಅಯೋಧ್ಯೆಯ (Ayodhya) ಸರಯೂ ನದಿಯ (Sarayu River) ಬಗ್ಗೆ ಮಾಹಿತಿ ಇಲ್ಲದವರು ವಿರಳ. ಉತ್ತರ ಪ್ರದೇಶದ ಅಯೋಧ್ಯೆಯ ಮೂಲಕ ಸರಯೂ ನದಿ ಹರಿಯುತ್ತದೆ. ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ. ಅಯೋಧ್ಯೆಯ ಭೂಮಿಯನ್ನು ಫಲವತ್ತಾಗಿಸುವಲ್ಲಿ ಸರಯೂ ನದಿಯ ಕೊಡುಗೆ ವಿಶೇಷವಾದದ್ದಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ (Ayodhya Ram Mandir) ದಿನಗಣನೆ ಆರಂಭವಾಗಿದ್ದು, ವರ್ತಮಾನ ಕಾಲದಲ್ಲಿ ಅಯೋಧ್ಯೆ ಹಾಗೂ ಸರಯೂ ನದಿ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿವೆ ಮತ್ತು ಪವಿತ್ರ ಭೂಮಿ ಎಂದು ಗುರುತಿಸಲ್ಪಟ್ಟಿದೆ. ಈ ನದಿಯು ಹಿಮಾಲಯದಿಂದ ಹುಟ್ಟಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮೂಲಕ ಹರಿಯುತ್ತದೆ. ಆದರೆ ಉಳಿದೆಲ್ಲ ತೀರ್ಥಕ್ಷೇತ್ರಗಳ ನದಿಗಳಲ್ಲಿ ಮಿಂದಂತೆ ಈ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ದೊರೆಯುವುದಿಲ್ಲವಂತೆ! ಆದರೆ ಪಾಪಗಳೆಲ್ಲ ವಿಮೋಚನೆಯಾಗುತ್ತವೆ. ಇದಕ್ಕೆ ಪುರಾಣ ಕಥೆಗಳಲ್ಲಿರುವ ಕಾರಣ ‘ಶಾಪ’.

ಸರಯೂ ನದಿಯು ಶಾಪಗ್ರಸ್ತವಾಗಿದೆ ಮತ್ತು ಇಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ನಾಶವಾಗುತ್ತವೆ. ಆದರೆ ಅವರಿಗೆ ಯಾವುದೇ ಪುಣ್ಯವೂ ಸಿಗುವುದಿಲ್ಲ ಎನ್ನುತ್ತವೆ ಪುರಾಣ ಕಥೆಗಳು.

ಸರಯೂ ನದಿಗೆ ಇರುವ ಶಾಪ ಏನು ಮತ್ತು ಯಾಕೆ?

ಪುರಾಣಗಳ ಪ್ರಕಾರ, ಭಗವಾನ್ ಶ್ರೀರಾಮನು ಸರಯೂ ನದಿಯಲ್ಲಿ ನಿರ್ಯಾಣ ಹೊಂದುವ ಮೂಲಕ ಜೀವನವನ್ನು ಕೊನೆಗೊಳಿಸಿದನು. ಇದರಿಂದ ರಾಮ ಇಲ್ಲವಾಗಲು ಕಾರಣವಾದ ಸರಯೂ ನದಿಯ ಮೇಲೆ ಭಗವಾನ್ ಭೋಲೆನಾಥರು ಬಹಳ ಕೋಪಗೊಂಡರು. ಸರಯೂ ನದಿಯ ನೀರನ್ನು ದೇವಾಲಯದಲ್ಲಿ ನೈವೇದ್ಯಕ್ಕೆ ಬಳಸಬಾರದು ಮತ್ತು ಅದರ ನೀರನ್ನು ಪೂಜೆಗೆ ಬಳಸಬಾರದು ಎಂದು ಶಪಿಸಿದರು.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 5 ಕೆಟ್ಟ ಅಭ್ಯಾಸಗಳನ್ನು ಎಂದಿಗೂ ಮಾಡಬೇಡಿ

ಇದಾದ ನಂತರ ತಾಯಿ ಸರಯೂ, ಭಗವಾನ್ ಭೋಲೆನಾಥರ ಪಾದಕ್ಕೆ ಬಿದ್ದು, ‘ಸ್ವಾಮಿ, ರಾಮ ನಿರ್ಯಾಣದಲ್ಲಿ ನನ್ನ ತಪ್ಪೇನು? ಅದು ಈ ಹಿಂದೆಯೇ ನಿರ್ಧರಿಸಿದಂತೆ ನಡೆದಿತ್ತು. ಇದರಲ್ಲಿ ನನ್ನ ತಪ್ಪೇನು ಎಂದು ಶಾಪ ವಿಮೋಚನೆಗೆ ಪರಿಪರಿಯಾಗಿ ಬೇಡಿಕೊಂಡರು. ಆಗ, ಭಗವಾನ್ ಭೋಲೆನಾಥತು, ‘ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಸರಯೂ ನೀರಿನಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ತೊಳೆದುಹೋಗಲಿ. ಆದರೆ ಅದರ ನೀರನ್ನು ಪೂಜೆ ಮತ್ತು ದೇವಾಲಯಗಳಲ್ಲಿ ಬಳಸಲಾಗದು. ಹಾಗೆ ಮಾಡಿದರೂ ಯಾರಿಗೂ ಯಾವುದೇ ಪ್ರತಿಫಲ ಸಿಗದು’ ಎಂದರಂತೆ.

ಸದ್ಯ ಅಯೋಧ್ಯೆಯಲ್ಲಿ ಏನೇ ಪುಣ್ಯ ಕಾರ್ಯ ನಡೆಸುವುದಿದ್ದರೂ ಅದಕ್ಕೆ ಏಳು ನದಿಗಳ ನೀರನ್ನು ತರಲಾಗುತ್ತದೆ. ನೀರು ತರುವ ಏಳು ನದಿಗಳಲ್ಲಿ ಸರಯೂ ಮಾತ್ರ ಸೇರಿಲ್ಲ. ಶಾಪಗ್ರಸ್ತವಾಗಿರುವುದರಿಂದ ಸರಯೂ ನದಿಯ ದಡದಲ್ಲಿ ಕುಂಭ ಅಥವಾ ಅರ್ಧಕುಂಭದಂತಹ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ.

(ಮಾಹಿತಿ ಟಿವಿ9 ಭಾರತ್​ವರ್ಷ್)

ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Sat, 6 January 24

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ