ಉಡುಪಿ ಪುತ್ತಿಗೆ ಮಠದ ಪರ್ಯಾಯ ಮೆರವಣಿಗೆಯಲ್ಲಿ ಅಷ್ಟ ಮಠಾಧೀಶರು ಗೈರು; ಶೋಭಾ ಕರಂದ್ಲಾಜೆ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿ

ಉಡುಪಿ ಪುತ್ತಿಗೆ ಮಠದ ಪರ್ಯಾಯ ಮೆರವಣಿಗೆಯಲ್ಲಿ ಅಷ್ಟ ಮಠಾಧೀಶರು ಗೈರು; ಶೋಭಾ ಕರಂದ್ಲಾಜೆ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2024 | 11:43 AM

ಉಡುಪಿಯ ಪುತ್ತಿಗೆ ಮಠದಲ್ಲಿ ಸುಗುಣೇಂದ್ರ ತೀರ್ಥರೊಂದಿಗೆ ಅಂತರ ಕಾಯ್ದುಕೊಂಡಿರುವ ಅಷ್ಟ ಮಠಾಧೀಶರು ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಂಡಿಲ್ಲ. ಸುಗುಣೇಂದ್ರ ತೀರ್ಥರು, ಧರ್ಮಪ್ರಚಾರಕ್ಕಾಗಿ ವಿದೇಶ ಪ್ರವಾಸ ಮಾಡಿದ್ದರಿಂದ 8 ಮಠಗಳ ಶ್ರೀಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿ: ನಿಸ್ಸಂದೇಹವಾಗಿ ಇವರು ಕನ್ನಡನಾಡಿನ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಇಬ್ಬರು-ಶೋಭಾ ಕರಂದ್ಲಾಜೆ (Shobha Karandlaje) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar). ಒಬ್ಬರು ಕೇಂದ್ರ ಸಚಿವೆಯಾದರೆ ಮತ್ತೊಬ್ಬರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆ. ಗಣ್ಯರು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ (Sri Sugunendra Teertha) ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಶೋಭಾ ಸ್ಥಳೀಯ ಸಂಸದೆಯಾಗಿದ್ದಾರೆ ಮತ್ತು ಲಕ್ಷ್ಮಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾರೆ. ಮೆರವಣಿಗೆಯಲ್ಲಿ ಮೊದಲು ಲಕ್ಷ್ಮಿ ಕಾಣಿಸಿಕೊಳ್ಳುತ್ತಾರೆ. ಅವರಿದ್ದಲ್ಲಿ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಸಹ ಕಾಣಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿಧಾನ ಪರಿಷತ್ ಸದಸ್ಯನಾಗಿರುವ ಚನ್ನರಾಜ್ ಅವರಿಗೆ ಅಕ್ಕನ ಜೊತೆ ತಿರುಗುವುದು ಬಿಟ್ಟರೆ ಬೇರೆ ಕೆಲಸ ಇರಲ್ಲವೇ ಅಂತ ಕನ್ನಡಿಗರಿಗೆ ಅನಿಸುತ್ತಿದ್ದರೆ ಆಶ್ಚರ್ಯವಿಲ್ಲ ಮಾರಾಯ್ರೇ. ಓಕೆ, ಅದು ಬಿಡಿ, ಗಮನಿಸಬೇಕಾದ ಸಂಗತಿಯೆಂದರೆ ಶೋಭಾ ಮತ್ತು ಲಕ್ಷ್ಮಿ ನಡುವೆ ನಡೆದ ಮುಕ್ತ ಮಾತುಕತೆ. ಅಕ್ಕಪಕ್ಕದ ಕುರ್ಚಿಗಳಲ್ಲಿ ಕುಳಿತ ಅವರ ನಡುವೆ ಮೊದಲು ಬಿಗುಮಾನ, ಪ್ರತಿಷ್ಠೆ ಕಾಣೋದು ನಿಜವಾದರೂ ಸ್ವಲ್ಪ ಸಮಯದ ಬಳಿಕ ಅದು ತಿಳಿಯಾಗಿ ಇಬ್ಬರೂ ನಿಸ್ಸಂಕೋಚವಾಗಿ ಮಾತಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ