ಖಾನಾಪುರದಲ್ಲಿ ಸಭೆ ನಡೆಸಿ ಪಕ್ಷದ ಕಾರ್ಯಕರ್ತರಿಂದ ತರಾಟೆಗೊಳಗಾದ ಸಂಸದ ಅನಂತಕುಮಾರ ಹೆಗಡೆ

ಖಾನಾಪುರದಲ್ಲಿ ಸಭೆ ನಡೆಸಿ ಪಕ್ಷದ ಕಾರ್ಯಕರ್ತರಿಂದ ತರಾಟೆಗೊಳಗಾದ ಸಂಸದ ಅನಂತಕುಮಾರ ಹೆಗಡೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2024 | 12:31 PM

ಅನಂತಕುಮಾರ ಹೆಗಡೆ ಸ್ವಲ್ಪ ದಿನಗಳ ಕಾಲ ಅಸ್ವಸ್ಥರಾಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಇಲ್ಲಿನ ಕಾರ್ಯಕರ್ತರು ಸಂಸದರಿಗೆ ನೀಡುತ್ತಿರುವ ದೂರುಗಳನ್ನು ಗಮನಿಸಿ. ಎಲ್ಲರೂ ಮರಾಠಿ ಭಾಷೆಯಲ್ಲಿ ಮಾತಾಡಿರುವುದರಿಂದ ಏನು ಹೇಳುತ್ತಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಾಗಲಾರದು. ಆದರೆ ಅವರ ಮಾತಿನ ಧಾಟಿಯಿಂದ ಅಕ್ಷೇಪಣೆಗಳನ್ನು ಅರ್ಥಮಾಡಿಕೊಳ್ಳಬಹುದು.

ಬೆಳಗಾವಿ: ಉತ್ತರ ಕನ್ನಡ (Uttara Kannada) ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ (Anantkumar Hegde) ತಮ್ಮ ಕ್ಷೇತ್ರದ ಕಾರ್ಯಕರ್ತರಿಂದ ಅವಕೃಪೆಗೊಳಗಾಗುವ ಪ್ರಸಂಗ ಜಿಲ್ಲೆಯ ಖಾನಾಪುರದಲ್ಲಿ (Khanapur) ನಡೆಯಿತು. ಖಾನಾಪುರ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಂಸದರಿಗೆ ತಮ್ಮವರಿಂದ ತರಾಟೆಗೊಳಗಾಗುವ ನಿರೀಕ್ಷೆ ಇರಲಿಲ್ಲ. ಅನಂತಕುಮಾರ ಹೆಗಡೆ ಸ್ವಲ್ಪ ದಿನಗಳ ಕಾಲ ಅಸ್ವಸ್ಥರಾಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಇಲ್ಲಿನ ಕಾರ್ಯಕರ್ತರು ಸಂಸದರಿಗೆ ನೀಡುತ್ತಿರುವ ದೂರುಗಳನ್ನು ಗಮನಿಸಿ. ಎಲ್ಲರೂ ಮರಾಠಿ ಭಾಷೆಯಲ್ಲಿ ಮಾತಾಡಿರುವುದರಿಂದ ಏನು ಹೇಳುತ್ತಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಾಗಲಾರದು. ಆದರೆ ಅವರ ಮಾತಿನ ಧಾಟಿಯಿಂದ ಅಕ್ಷೇಪಣೆಗಳನ್ನು ಅರ್ಥಮಾಡಿಕೊಳ್ಳಬಹುದು. ಒಬ್ಬ ಕಾರ್ಯಕರ್ತ ಹಿಂದಿ-ಕನ್ನಡ-ಇಂಗ್ಲಿಷ್ ಮೂರೂ ಭಾಷೆಗಳಲ್ಲಿ ಮಾತಾಡಿರುವುದರಿಂದ ಅಲ್ಪಸ್ವಲ್ಪ ಅರ್ಥವಾಗುತ್ತದೆ. ಕಳೆದ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ ನೀವು ಈಗ ಚುನಾವಣೆ ಹತ್ತಿರ ಬಂದಿರುವ ಕಾರಣ ಪುನಃ ನಮ್ಮಲ್ಲಿಗೆ ಬಂದಿರುವಿರಿ. ನಮ್ಮ ಕರೆಗಳಿಗೆ ನಿಮ್ಮ ಆಪ್ತರು ಸ್ಪಂದಿಸುವುದಿಲ್ಲ. ನಮ್ಮ ಊರಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದೇ ಇಲ್ಲ, ನೀವು ಸಾರ್ವಜನಿಕ ಏನು ಮಾತಾಡುತ್ತೀರಿ ಅದು ನಮಗೆ ಬೇಕಿಲ್ಲ, ಹಿಂದೂತ್ವ ನಿಮ್ಮ ಅಜೆಂಡಾ ಆಗಿದ್ದರೆ ನಮ್ಮ ಅಭ್ಯಂತರವಿಲ್ಲ, ಆದರೆ ನೀವು ನಮ್ಮ ಕಷ್ಟಗಳನ್ನು ಕೇಳಲು ಬಾರದಿದ್ದರೆ ಹೇಗೆ ಸರ್ ಅಂತ ಕಾರ್ಯಕರ್ತ ಕೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ