ಕೆಲಸ ಮಾಡವ ಜಾಗದಲ್ಲಿ ಅನ್ಯಾಯವಾಗ್ತಿದೆ ಎಂದು ಮೊಬೈಟ್ ಟವರ್ ಏರಿದ ವ್ಯಕ್ತಿ, ಕೆಳಗಿಳಿಸಲು ಹರಸಾಹಸ
ಹಾಸನದ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಸಿದ್ದೇಗೌಡ(45) ಕೆಲಸ ಮಾಡವ ಜಾಗದಲ್ಲಿ ತನಗೆ ಅನ್ಯಾಯವಾಗ್ತಿದೆ ಎಂದು ಆರೋಪಿಸಿ ಮೊಬೈಟ್ ಟವರ್ ಏರಿದ್ದಾನೆ. ನನಗೆ ನ್ಯಾಯ ಕೊಡಿಸಿ ಅಲ್ಲಿಯ ವರೆಗೆ ಮೊಬೈಲ್ ಟವರ್ನಿಂದ ಇಳಿಯಲ್ಲ ಎಂದು ಪಟ್ಟುಹಿಡಿದಿದ್ದಾನೆ.
ಮೈಸೂರು, ಜ.18: ಕೆಲಸ ಮಾಡವ ಜಾಗದಲ್ಲಿ ಅನ್ಯಾಯವಾಗ್ತಿದೆ ಎಂದು ವ್ಯಕ್ತಿಯೋರ್ವ ಟವರ್ ಏರಿದ ಘಟನೆ ಮೈಸೂರು ಜಿಲ್ಲೆಯ ವರುಣದಲ್ಲಿ ನಡೆದಿದೆ. ಹಾಸನದ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಸಿದ್ದೇಗೌಡ(45) ಕೆಲಸ ಮಾಡವ ಜಾಗದಲ್ಲಿ ತನಗೆ ಅನ್ಯಾಯವಾಗ್ತಿದೆ ಎಂದು ಆರೋಪಿಸಿ ಮೊಬೈಟ್ ಟವರ್ ಏರಿದ್ದಾನೆ. ನನಗೆ ನ್ಯಾಯ ಕೊಡಿಸಿ ಅಲ್ಲಿಯ ವರೆಗೆ ಮೊಬೈಲ್ ಟವರ್ನಿಂದ ಇಳಿಯಲ್ಲ ಎಂದು ಪಟ್ಟುಹಿಡಿದಿದ್ದಾನೆ. ಸಧ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಸಿದ್ದೇಗೌಡನನ್ನು ಕೆಳಗಿಳಿಸಲು ಹರಸಾಹಸಪಡುತ್ತಿದ್ದಾರೆ.
ವಿದ್ಯುತ್ ತಂತಿ ತಗುಲಿ ವ್ಯಕ್ತಿ ಗಂಭೀರ ಗಾಯ
ಮೈಸೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಘವೇಂದ್ರ ನಗರದಲ್ಲಿ ಕಟ್ಟಡವೊಂದಕ್ಕೆ ಬಣ್ಣ ಬಳಿಯುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸಿದ್ದರಾಜು ಹಾಗೂ ಮನು ಎಂಬುವರು ಗಾಯಗೊಂಡಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಸಿದ್ದರಾಜು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ