‘ಯಾಕೆ ಬಿಗ್ ಬಾಸ್?’; ಕಣ್ಣೀರು ಹಾಕುತ್ತಲೇ ಮನೆಯಿಂದ ಹೊರ ಹೋದ ತನಿಷಾ
‘ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯಿಂದ ಹೊರ ಹೋಗಬೇಕು’ ಎನ್ನುವ ಆದೇಶ ಬಂತು. ಈ ವೇಳೆ ತನಿಷಾ ಹೆಸರನ್ನು ಬಿಗ್ ಬಾಸ್ ಸೂಚಿಸಿದರು. ಅವರು ವಾರದ ಮಧ್ಯವೇ ಎಲಿಮಿನೇಟ್ ಆದರು.
ಬಿಗ್ ಬಾಸ್ ಮನೆಯಲ್ಲಿ ಮಧ್ಯ ವಾರದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದಾರೆ. ಎಲ್ಲರನ್ನೂ ಗಾರ್ಡನ್ ಏರಿಯಾಗೆ ಕರೆತರಲಾಯಿತು. ‘ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯಿಂದ ಹೊರ ಹೋಗಬೇಕು’ ಎನ್ನುವ ಆದೇಶ ಬಂತು. ಈ ವೇಳೆ ತನಿಷಾ ಹೆಸರನ್ನು ಬಿಗ್ ಬಾಸ್ ಸೂಚಿಸಿದರು. ತನಿಷಾಗೆ (Tanisha Kuppanda) ಇದು ಶಾಕಿಂಗ್ ಆಗಿತ್ತು. ‘ಏಕೆ ಬಿಗ್ ಬಾಸ್? ನಾನು ಹೊರಹೋಗಬೇಕು ಎಂಬುದು ನಿಮ್ಮೆಲ್ಲರ ಕೋರಿಕೆ ಆಗಿತ್ತಲ್ಲವೇ? ನೋಡಿ ಹೊರ ಹೋಗುತ್ತಿದ್ದೇನೆ’ ಎಂದು ತನಿಷಾ ಕಣ್ಣೀರು ಹಾಕಿದರು. ಮನೆಯವರಿಗೂ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ ಲೈವ್ ಕೂಡ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡ
Published on: Jan 18, 2024 08:25 AM
Latest Videos