ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
Welsh Fire vs Southern Brave: ಈ ಗುರಿಯನ್ನು ಬೆನ್ನತ್ತಿದ ವೆಲ್ಷ್ ಫೈರ್ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 100 ಎಸೆತಗಳಲ್ಲಿ ಗಳಿಸಿದ್ದು 125 ರನ್ಗಳು ಮಾತ್ರ. ಪರಿಣಾಮ ಸದರ್ನ್ ಬ್ರೇವ್ ತಂಡವು ಈ ಪಂದ್ಯದಲ್ಲಿ 4 ರನ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸದರ್ನ್ ಬ್ರೇವ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ದಿ ಹಂಡ್ರೆಡ್ ಲೀಗ್ನ 21ನೇ ಪಂದ್ಯದಲ್ಲಿ ಸದರ್ನ್ ಬ್ರೇವ್ ತಂಡ ರೋಚಕ ಜಯ ಸಾಧಿಸಿದೆ. ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸದರ್ನ್ ಬ್ರೇವ್ ಹಾಗೂ ವೆಲ್ಷ್ ಫೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡ 100 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್ಗಳು. ಇದಕ್ಕೆ ಮುಖ್ಯ ಕಾರಣ ಮ್ಯಾಟ್ ಹೆನ್ರಿ.
ಮಿಂಚಿನ ದಾಳಿ ದಾಳಿ ಸಂಘಟಿಸಿದ ಮ್ಯಾಟ್ ಹೆನ್ರಿ 20 ಎಸೆತಗಳಲ್ಲಿ 16 ಡಾಟ್ ಬಾಲ್ ಎಸೆದಿದ್ದರು. ಇನ್ನುಳಿದ 4 ಎಸೆತಗಳಲ್ಲಿ ಕೇವಲ 5 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಪರಿಣಾಮ ಸದರ್ನ್ ಬ್ರೇವ್ ತಂಡವು 100 ಎಸೆತಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ಗಳಿಸಲಷ್ಟೇ ಶಕ್ತರಾದರು.
ಆದರೆ ಈ ಗುರಿಯನ್ನು ಬೆನ್ನತ್ತಿದ ವೆಲ್ಷ್ ಫೈರ್ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 100 ಎಸೆತಗಳಲ್ಲಿ ಗಳಿಸಿದ್ದು 125 ರನ್ಗಳು ಮಾತ್ರ. ಪರಿಣಾಮ ಸದರ್ನ್ ಬ್ರೇವ್ ತಂಡವು ಈ ಪಂದ್ಯದಲ್ಲಿ 4 ರನ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸದರ್ನ್ ಬ್ರೇವ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

