ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ, ಅನನ್ಯ ಭಟ್ ನನ್ನ ಮಗಳು, ನಾನೇ ಹೆತ್ತಿದ್ದು: ಸುಜಾತ ಭಟ್
ಸಮೀರ್ ಯಾರು ಅಂತ ತನಗೆ ಗೊತ್ತಿಲ್ಲ ಎಂದು ಹೇಳುವ ಸುಜಾತ ಭಟ್, ತನ್ನ ಮಗಳ ಅಸ್ಥಿಯನ್ನು ಮಾತ್ರ ಎಸ್ಐಟಿ ಬಳಿ ಕೇಳಿದ್ದು, ಡಿಎನ್ಎ ಟೆಸ್ಟ್ ಮಾಡಿಸಿ ಅಸ್ಥಿಯನ್ನು ಕೊಡಿ ಎಂದು ಅವರನ್ನು ಕೇಳಿದ್ದೇನೆ ಎನ್ನುತ್ತಾರೆ. ಸುಜಾತ ಭಟ್ ಮಾತಾಡುವಾಗ ಕೆಲವು ಸಲ ಸಿಟ್ಟಿಗೇಳುತ್ತಾರೆ ಮತ್ತೊಂದು ಸಲ ಎರಡೂ ಕೈಗಳನ್ನು ಮುಗಿಯುತ್ತಾರೆ. ತಾನು ಸತ್ತೇ ಹೋಗಿದ್ದೇನೆ ಎಂದು ಪ್ರಚಾರ ಮಾಡಲಾಗಿತ್ತು, ಬದುಕಿರೋದು ಹೇಗೆ ಅಂತ ಅವರು ಮಾಧ್ಯಮದವರನ್ನು ಪ್ರಶ್ನಿಸುತ್ತಾರೆ.
ಬೆಂಗಳೂರು, ಆಗಸ್ಟ್ 21: ಮಾಧ್ಯಮಗಳೊಂದಿಗೆ ಮಾತಾಡಿರುವ ಸುಜಾತಾ ಭಟ್ (Sujatha Bhat) ಅವರು ಅನನ್ಯ ಭಟ್ ತನ್ನ ಮಗಳು, ಅದನ್ನು ಪ್ರೂವ್ ಮಾಡಲು ಮಾಧ್ಯಮದವರಿಗೆ ಯಾವ ದಾಖಲೆಯನ್ನೂ ಕೊಡಲಾರೆ, ದಾಖಲಾತಿಗಳನ್ನು ಸುಟ್ಟುಹಾಕಿದ್ದಾರೆ, ಅಕೆಯೊಂದಿಗಿದ್ದ ತನ್ನ ಫೋಟೊಗಳನ್ನು ಸಹ ಸುಡಲಾಗಿದೆ ಎಂದು ಹೇಳುತ್ತಾರೆ. ಅನನ್ಯ ಭಟ್ ತನ್ನ ಮಗಳೇ ಎಂದು ಅವರು ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತಾರೆ. ಮಹೇಶ್ ತಿಮರೋಡಿ ಮನೆಯಲ್ಲಿ ತಾನು 4 ದಿನ ಇದ್ದಿದ್ದು ನಿಜ, ಅವರು ತನ್ನ ಬ್ರೇನ್ ವಾಶ್ ಮಾಡಿಲ್ಲ, ಊಟ ಹಾಕಿದ್ದಾರೆ ಅಷ್ಟೇ ಎಂದು ಅವರು ಹೇಳುತ್ತಾರೆ. ತಿಮ್ಮರೋಡಿ ಮನೆಯಿಂದ ಹೊರಬಂದ ಬಳಿಕ ತನ್ನ ಸ್ನೇಹಿತರ ಮನೆಯಲ್ಲಿದ್ದೆ, ಅವರ ಹೆಸರುಗಳನ್ನು ಬಹಿರಂಗ ಪಡಿಸಲ್ಲ, ಎಂದು ಹೇಳುವ ಅವರು ತಾನು ಯಾರ ಸಂಸಾರದಲ್ಲೂ ಹುಳಿ ಹಿಂಡುವ ಕೆಲಸ ಮಾಡಿಲ್ಲ ಎನ್ನುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಅನನ್ಯಾ ಭಟ್ ನಾಪತ್ತೆ ಅಸಲಿಯತ್ತೇನು? ರಿಪ್ಪನ್ ಪೇಟೆಗೆ ತೆರಳಿ ಮಾಹಿತಿ ಕಲೆ ಹಾಕಿದ ಎಸ್ಐಟಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

