ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್: ಸುಜಾತಾ ಭಟ್ಗೆ ಮಕ್ಕಳೇ ಇರಲಿಲ್ಲ!
ಧರ್ಮಸ್ಥಳದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ನಿವಾಸಿ ಸುಜಾತಾ ಭಟ್ (Sujata Bhat) ಎಂಬವರ ಪುತ್ರಿ ಅನನ್ಯಾ ಭಟ್ (Ananya Bhat) ಎಂಬವರ ಕೊಲೆಯಾಗಿದೆ ಎಂಬ ಆರೋಪ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಇದೀಗ ಎಸ್ಐಟಿ ಅಧಿಕಾರಿಗಳು ಅನನ್ಯ ಭಟ್ ಪ್ರಕರಣದ ಹಿಂದೆ ಬೆನ್ನುಬಿದ್ದಿದ್ದು, ಈ ವೇಳೆ ಕೆಲ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ.

ಶಿವಮೊಗ್ಗ, (ಆಗಸ್ಟ್ 18): ಧರ್ಮಸ್ಥಳದಲ್ಲಿ ಕಾಣೆಯಾಗಿರುವ ಅನನ್ಯ ಭಟ್ ನಾಪತ್ತೆ ಕೇಸ್ ಗೆ (Ananya Bhat missing Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾಯಿ ಸುಜಾತಾ ಭಟ್ ಗೂ (Sujata Bhatt) ಶಿವಮೊಗ್ಗದ ರಿಪ್ಪನಪೇಟೆಗೂ ಲಿಂಕ್ ಆಗಿದೆ. ಸುಜಾತಾ ಭಟ್ ನೀಡಿದ ದೂರಿನ ಮೇರೆಗೆ ಎಸ್ಐಟಿ ಅಧಿಕಾರಿಗಳು ಅನನ್ಯ ಭಟ್ ಕೇಸಿನ ಹಿಂದೆ ಬದ್ದಿದ್ದು, ಕೆಲವೊಂದಿಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಇನ್ನು ಸುಜಾತಾ ಭಟ್ ಮದುವೆಯಾಗದೇ ಪ್ರಭಾಕರ್ ಬಾಳಿಗ ಎನ್ನುವರ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಆದ್ರೆ ಇಬ್ಬರಿಗೆ ಯಾವುದೇ ಮಗು ಸಹ ಆಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಅನನ್ನ ಭಟ್ ಇದ್ದಳೋ ಇಲ್ವೋ ಎನ್ನುವುದೇ ನಿಗೂಢವಾಗಿದೆ.
ಧರ್ಮಸ್ಥಳದಲ್ಲಿ ಸುಜಾತಾ ಭಟ್ ಮಗಳು ಅನನ್ಯ ಭಟ್ ಮಿಸ್ಸಿಂಗ್ ಕೇಸ್ ದೂರು ದಾಖಲಿಸಿದ್ದರು. ಅದರ ತನಿಖೆ ಪೊಲೀಸರು ಮಾಡಲಿಲ್ಲ ಎನ್ನುವ ಆರೋಪ ಸುಜತಾ ಮಾಡಿದ್ದರು. ಈ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಕುರಿತು ಅನಾಮಿಕ ವ್ಯಕ್ತಿಯು ದೂರು ನೀಡಿದ್ದ. ಈ ನಡುವೆ ತನಿಖೆಯನ್ನು ಎಸ್ ಐಟಿ ಆರಂಭಿಸಿದೆ. ಈ ನಡುವೆ ಸುಜತಾ ಭಟ್ ತನ್ನ ಮಗಳ ಮಿಸ್ಸಿಂಗ್ ಪ್ರಕರಣವನ್ನು ಮುನ್ನಲೆಗೆ ತಂದಿದ್ದು, ಈ ಸಂಬಂಧ ಎಸ್ ಐಟಿ ಮುಂದೆ ಮಗಳ ಅನನ್ಯ ಭಟ್ ಮಿಸ್ಸಿಂಗ್ ಕೇಸ್ ಕುರಿತು ಮತ್ತೆ ದೂರು ನೀಡಿದ್ದಾರೆ. ನನ್ಯ ಭಟ್ ಧರ್ಮಸ್ಥಳದಲ್ಲಿ ಮಿಸ್ಸಿಂಗ್ ಬಳಿಕ ಏನಾದಳು ಎನ್ನುವುದು ನಿಗೂಢವಾಗಿತ್ತು. ಎಲ್ಲರಿಗೂ ಅನನ್ಯ ಭಟ್ ಮೆಡಿಕಲ್ ಓದಲು ಹೋಗಿ ವಾಪಸ್ ಜೀವಂತ ಬರಲಿಲ್ಲ ಎನ್ನುವಂತಾಗಿತ್ತು. ಈ ನಡುವೆ ಎಸ್ ಐಟಿ ಅಧಿಕಾರಿಗಳು ತನಿಖೆಯ ಚುರುಕುಗೊಳಿಸಿದ್ದು, ಸುಜತಾ ಭಟ್ ನೀಡಿರುವ ದೂರು ಮತ್ತು ಆಕೆಯ ಹಿನ್ನಲೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಅನನ್ಯಾ ಭಟ್ ನಾಪತ್ತೆ ಅಸಲಿಯತ್ತೇನು? ರಿಪ್ಪನ್ ಪೇಟೆಗೆ ತೆರಳಿ ಮಾಹಿತಿ ಕಲೆ ಹಾಕಿದ ಎಸ್ಐಟಿ
ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಸುಜಾತಾ ಭಟ್
ಸುಜಾತಾ ಭಟ್ ಲಿಂಕ್ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನಪೇಟೆಗೆ ನಂಟು ಇರುವುದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಎಸ್ ಐಟಿ ತಂಡವು ರಿಪ್ಪನಪೇಟೆಗೆ ಬಂದು ವಿಚಾರಣೆ ಮಾಡಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಸ್ ಐಟಿ ತಂಡದ ಅಧಿಕಾರಿಗಳು ಸುಜಾತ ಭಟ್ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿದ್ದಾರೆ. 1999 ರಿಂದ 2007 ರ ವರೆಗೆ ಸುಜಾತಾ ಭಟ್ ರಿಪ್ಪನಪೇಟೆಯಲ್ಲಿ ವಾಸವಾಗಿದ್ದಳು. ರಿಪ್ಪನಪೇಟೆಯ ಹೊಸನಗರ ರಸ್ತೆ ಬಳಿ ಪ್ರಭಾಕರ್ ಬಾಳಿಗ ಜೊತೆ ಮದುವೆಯಿಲ್ಲದೇ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಆದರೆ, ಪ್ರಭಾಕರ್ ಮತ್ತು ಸುಜಾತಾ ಇಬ್ಬರು ದಂಪತಿಗಳೆಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಈಗ ಅವರಿಬ್ಬರು ಮದ್ವೆಯಾಗದೇ ರಿಲೇಶನ್ ಶಿಪ್ ನಲ್ಲಿದ್ದರು ಎನ್ನುವುದು ಈಗ ಬಹಿರಂಗವಾಗಿದೆ.
ಪ್ರಭಾಕರ್ ಈಗಾಗಲೇ ಮೃತಪಟ್ಟಿದ್ದಾರೆ. ಇನ್ನೂ ಸುಜಾತಾ ಭಟ್ ರಿಪ್ಪನಪೇಟೆಯಲ್ಲಿ ಪ್ರಕಾರ್ ಜೊತೆ ಸಂಸಾರ ಮಾಡುವ ಸಂದರ್ಭದಲ್ಲಿ ಮಕ್ಕಳು ಇರುವ ಯಾವುದೇ ಸುಳಿವಿಲ್ಲ. ಎರಡು ನಾಯಿಗಳನ್ನೇ ತಮ್ಮ ಮಕ್ಕಳು ಎಂದುಕೊಂಡು ಆರೈಕೆ ಮಾಡುತ್ತಿದ್ದರು. ಇವರ ಈ ನಿಸ್ವಾರ್ಥ ಸೇವೆ ನೋಡಿ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗೆ ಸುಜಾತಾ ಭಟ್ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮದುವೆಯಾಗದೇ ಅವರ ಪ್ರಭಾಕರ್ ಹಾಗೂ ಸುಜಾತಾ ಭಟ್ ಪತಿ- ಪತ್ನಿಯಾಗಿದ್ದರು. ಇದಕ್ಕೆ ಪೂರಕವೆಂಬಂತೆ ಸುಜಾತಾ ಭಟ್ ರಿಪ್ಪನಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2004 ರಲ್ಲಿ ತೇಜಸ್ವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯತ್ವ ಪಡೆದಿದ್ದಳು. ರಜಿಸ್ಟರ್ ನಲ್ಲಿ ಸುಜಾತಾ ಬಾಳಿಗ ಹೆಸರಿನಲ್ಲಿ ಹಸ್ತಾಕ್ಷರ ಕಂಡುಬಂದಿದೆ. ಇದರ ನಂತರ 2007 ರ ನಂತರ ಸೊಸೈಟಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರಲಿಲ್ಲ. ಸಂಘದ ಹೆಸರಿನಲ್ಲಿ ಒಂದಿಷ್ಟು ಸಾಲ ಪಡೆದಿದ್ದಳು. ಅದನ್ನು ವಾಪಸ್ ಕಟ್ಟಿರಲಿಲ್ಲ.
ಸುಜಾತಾ ಭಟ್ಗೆ ಮಗಳೇ ಇರಲಿಲ್ಲ
ಇನ್ನು ಪ್ರಭಾಕರ್ ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ಆತನ ಎಲ್ಲ ಹಣಕಾಸಿನ ವ್ಯವಹಾರವನ್ನು ಸುಜಾತಾ ಅವರೇ ನೋಡಿಕೊಳ್ಳುತ್ತಿದ್ದರು. ಎಸ್ ಐಟಿ ಅಧಿಕಾರಿಗಳು ಈಗ ಸುಜಾತ ಈ ಹಿಂದೆ ವಾಸವಿದ್ದ ಮತ್ತು ಅವಳ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ಸುಜಾತ ಭಟ್ ಗೆ ಯಾವುದೇ ಮಕ್ಕಳು ಇರಲಿಲ್ಲ ಎನ್ನುವುದು ಸ್ಥಳೀಯರಿಗೆ ಕಂಡು ಬಂದಿದೆ. ಆದ್ರೆ, ಧರ್ಮಸ್ಥಳದಲ್ಲಿ ಈಗ ಮಗಳಿದ್ದಳು. ಅವಳು ಮಿಸ್ಸಿಂಗ್ ಆಗಿದೆ ಎನ್ನುವ ಹೇಳಿಕೆಗಳು ಬಾರೀ ಚರ್ಚೆಗೆ ಗ್ರಾಸವಾಗಿದೆ.
ಸೌಜನ್ಯ ನಾಪತ್ತೆ ಬಳಿಕ ಈಗ ಅನನ್ಯ ಭಟ್ ನಾಪತ್ತೆ ಕೇಸ್ ಕುರಿತು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಧರ್ಮಸ್ಥದಲ್ಲಿ ನಾಪತ್ತೆ ಆಗಿರುವುದು ನಿಜವೋ ಅಥವಾ ಸುಳ್ಳೋ ಎನ್ನುವುದರ ಹಿಂದೆ ಎಸ್ ಐಟಿ ಅಧಿಕಾರಿಗಳು ಬಿದ್ದಿದ್ದಾರೆ. ರಿಪ್ಪನಪೇಟೆಯಲ್ಲಿ ಸುಜಾತಾ ಭಟ್ ಕುರಿತು ಒಂದಿಷ್ಟು ಮಹತ್ವದ ಸಂಗತಿಗಳು ಪೊಲೀಸರ ಕೈಗೆ ಸಿಕ್ಕಿವೆ. ಅನನ್ಯ ಮಿಸ್ಸಿಂಗ್ ಕೇಸ್ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.



