Dhanteras 2023: ಧನತ್ರಯೋದಶಿಯ ಈ ಶುಭ ಮುಹೂರ್ತದಲ್ಲಿ ಚಿನ್ನ, ಬೆಳ್ಳಿ ಅಥವಾ ಯಾವುದೇ ಗೃಹೋಪಯೋಗಿ ವಸ್ತು ಖರೀದಿಸುವುದು ಮಂಗಳಕರ

ಸನಾತನ ಧರ್ಮದಲ್ಲಿ, ಧನತ್ರಯೋದಶಿ ದಿನದಂದು ಚಿನ್ನ ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ದಿನ ಪಾತ್ರೆಗಳು ಅಥವಾ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ಲಾಭದಾಯಕವಾಗಿದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಖರೀದಿ ಮಾಡುವುದರಿಂದ ಸಂಪತ್ತು ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ವಸ್ತು ಖರೀದಿಗೆ ಮತ್ತು ಪೂಜೆಗೆ ಮಂಗಳಕರ ಸಮಯ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Dhanteras 2023: ಧನತ್ರಯೋದಶಿಯ ಈ ಶುಭ ಮುಹೂರ್ತದಲ್ಲಿ ಚಿನ್ನ, ಬೆಳ್ಳಿ ಅಥವಾ ಯಾವುದೇ ಗೃಹೋಪಯೋಗಿ ವಸ್ತು ಖರೀದಿಸುವುದು ಮಂಗಳಕರ
Dhanteras 2023
Follow us
ಅಕ್ಷತಾ ವರ್ಕಾಡಿ
|

Updated on: Nov 04, 2023 | 6:22 PM

ಧನತ್ರಯೋದಶಿ, ಇದನ್ನು ಧನ್‌ತೇರಸ್ ಎಂದೂ ಕರೆಯುತ್ತಾರೆ. ಐದು ದಿನಗಳ ದೀಪಾವಳಿ ಹಬ್ಬವು ಧನತೇರಸ್‌ ಅಥವಾ ಧನತ್ರಯೋದಶಿಯೊಂದಿಗೆ ಪ್ರಾರಂಭವಾಗುತ್ತದೆ. ಅಂದರೆ ಐದು ದಿನಗಳ ದೀಪಾವಳಿ ಹಬ್ಬಗಳ ಆರಂಭವನ್ನು ಸೂಚಿಸುತ್ತದೆ.ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನತ್ರಯೋದಶಿ ಆಚರಿಸಲಾಗುತ್ತದೆ. ಈ ವರ್ಷ ಈ ವಿಶೇಷ ಹಬ್ಬ ನವೆಂಬರ್ 10 ಶುಕ್ರವಾರದಂದು ಬಂದಿದೆ. ಈ ದಿನ ಭಗವಾನ್ ಧನ್ವಂತರಿ, ಕುಬೇರ ಮತ್ತು ಯಮದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಏನನ್ನಾದರೂ ಖರೀದಿಸುವ ಸಂಪ್ರದಾಯವೂ ಇದೆ. ವಿಶೇಷವಾಗಿ ಜನರು ಈ ದಿನ ಚಿನ್ನ ಅಥವಾ ಬೆಳ್ಳಿ ವಸ್ತುಗಳನ್ನು ಖರೀದಿಸುತ್ತಾರೆ. ಸನಾತನ ಧರ್ಮದಲ್ಲಿ, ಧನತ್ರಯೋದಶಿ ದಿನದಂದು ಚಿನ್ನ ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ದಿನ ಪಾತ್ರೆಗಳು ಅಥವಾ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ಲಾಭದಾಯಕವಾಗಿದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಖರೀದಿ ಮಾಡುವುದರಿಂದ ಸಂಪತ್ತು ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ವಸ್ತು ಖರೀದಿಗೆ ಮತ್ತು ಪೂಜೆಗೆ ಮಂಗಳಕರ ಸಮಯ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಧನತ್ರಯೋದಶಿಗೆ ಯಾವ ಸಮಯದಲ್ಲಿ ವಸ್ತು ಖರೀದಿಸುವುದು ಮಂಗಳಕರ?

ನೀವು ಚಿನ್ನ, ಬೆಳ್ಳಿ, ಪಾತ್ರೆ ಅಥವಾ ಯಾವುದೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಬಯಸಿದರೆ, ನವೆಂಬರ್ 10 ರಂದು ಮಧ್ಯಾಹ್ನ 2:35 ರಿಂದ 6:40 ರ ಒಳಗಡೆ ಖರೀದಿಸಬಹುದು. ಈ ದಿನದಂದು ನೀವು ಖರೀದಿಸಲು ಸಾಧ್ಯವಾಗದಿದ್ದರೆ, ನೀವು ನವೆಂಬರ್ 11 ರಂದು ಮಧ್ಯಾಹ್ನ 1:57 ರ ಒಳಗೆ ಖರೀದಿಸಬಹುದು. ಇದಾದ ನಂತರ ತ್ರಯೋದಶಿ ತಿಥಿ ಮುಗಿಯುತ್ತದೆ.

ಇದನ್ನೂ ಓದಿ: ಈ ಬಾರಿ ನರಕ ಚತುರ್ದಶಿ ಯಾವಾಗ? ದೀಪಾವಳಿಯಲ್ಲಿ ಯಮ ದೀಪದ ವೈಶಿಷ್ಟ್ಯ ಏನೆಂದರೆ…

ಧನತ್ರಯೋದಶಿಗೆ ಪೂಜೆಗೆ ಶುಭ ಸಮಯ ಯಾವುದು?

ಈ ದಿನದಂದು, ಪ್ರದೋಷ ಕಾಲ ಅಂದರೆ ಸಂಜೆ ಭಗವಾನ್ ಧನ್ವಂತರಿ , ಕುಬೇರ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲು ಮಂಗಳಕರ ಸಮಯ. ಪಂಚಾಂಗದ ಪ್ರಕಾರ, ಪ್ರದೋಷ ಕಾಲವು ನವೆಂಬರ್ 10 ರಂದು ಸಂಜೆ 06:02 ರಿಂದ ರಾತ್ರಿ 08:34 ರವರೆಗೆ ಇರುತ್ತದೆ. ಈ ಸಮಯದಲ್ಲಿ ಪೂಜಿಸುವುದು ಅತ್ಯಂತ ಪ್ರಯೋಜನಕಾರಿ ಎಂದು ನಂಬಲಾಗಿದೆ. ಚಿನ್ನ, ಬೆಳ್ಳಿ, ಪಾತ್ರೆಗಳು, ಆಸ್ತಿ, ವಾಹನಗಳು, ಖಾತೆಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ದಿನದಂದು ಖರೀದಿಸಿದ ವಸ್ತುಗಳು ದೀರ್ಘಾವಧಿಯ ಸಮೃದ್ಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?