AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pitru Paksha 2025: ಪಿತೃಪಕ್ಷದ ಮಹತ್ವ ಮತ್ತು ವಿಧಿವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ

ಹಿಂದೂ ಧರ್ಮದಲ್ಲಿ ಪಿತೃಪಕ್ಷವು ಅತ್ಯಂತ ಪವಿತ್ರವಾದ ಸಮಯ. ಈ ವರ್ಷ ಸೆಪ್ಟೆಂಬರ್ 7 ರಿಂದ ಆರಂಭವಾಗುವ ಈ ಪಕ್ಷದಲ್ಲಿ, ಪೂರ್ವಜರ ಆತ್ಮಗಳಿಗೆ ಶ್ರಾದ್ಧ, ತರ್ಪಣ, ಪಿಂಡೋದಾನ ಮುಂತಾದ ಕ್ರಿಯೆಗಳನ್ನು ಮಾಡಲಾಗುತ್ತದೆ. ದಾನ, ಸತ್ಯಸಂಧತೆ ಮತ್ತು ಪ್ರಾಣಿಗಳಿಗೆ ಆಹಾರ ನೀಡುವುದು ಇದರಲ್ಲಿ ಮುಖ್ಯ. ಈ ಕ್ರಿಯೆಗಳಿಂದ ಪೂರ್ವಜರ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ.

Pitru Paksha 2025: ಪಿತೃಪಕ್ಷದ ಮಹತ್ವ ಮತ್ತು ವಿಧಿವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ
ಪಿತೃ ಪಕ್ಷ
ಅಕ್ಷತಾ ವರ್ಕಾಡಿ
|

Updated on:Aug 20, 2025 | 2:58 PM

Share

ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ, ಪೂರ್ವಜರ ಶ್ರಾದ್ಧವನ್ನು ಮಾಡಲಾಗುತ್ತದೆ. ಶ್ರಾದ್ಧವನ್ನು ಮಾಡುವುದರಿಂದ, ಅವರ ಆಶೀರ್ವಾದ ಕುಟುಂಬದ ಮೇಲೆ ಸದಾ ಇರುತ್ತದೆ ಎಂದು ನಂಬಲಾಗಿದೆ. ಪಿತೃ ಪಕ್ಷಕ್ಕೆ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಈ ನಿಯಮಗಳನ್ನು ಪಾಲಿಸುವುದರಿಂದ ಪೂರ್ವಜರನ್ನು ಗೌರವಿಸಿದಂತಾಗುತ್ತದೆ ಎಂದು ನಂಬಲಾಗಿದೆ.

ತಮ್ಮಿಂದಾಗುವಷ್ಟು ಏನನ್ನಾದರೂ ದಾನ ನೀಡಿ:

ಪಿತೃಪಕ್ಷದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ, ಪ್ರತಿಯೊಬ್ಬರೂ ತಮ್ಮಿಂದಾಗುವಷ್ಟು ಏನನ್ನಾದರೂ ದಾನ ಮಾಡಬೇಕು. ಪಿತೃಪಕ್ಷದ ಸಮಯದಲ್ಲಿ, ಮಾಂಸಾಹಾರ, ಮದ್ಯ ಸೇವಿಸಬಾರದು. ಈ ಅವಧಿಯಲ್ಲಿ, ಪೂರ್ವಜರು 15 ದಿನಗಳವರೆಗೆ ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ.

ಬ್ರಾಹ್ಮಣರಿಗೆ ಊಟ ನೀಡಿ:

ಪಿತೃ ಪಕ್ಷದ ಸಮಯದಲ್ಲಿ, ಬ್ರಾಹ್ಮಣರಿಗೆ ಊಟ ನೀಡುವುದು ಅವಶ್ಯಕ. ಈ ಸಮಯದಲ್ಲಿ, ಬ್ರಾಹ್ಮಣರನ್ನು ನಿಮ್ಮ ಮನೆಗೆ ಪೂರ್ಣ ಗೌರವದಿಂದ ಆಹ್ವಾನಿಸಿ, ಅವರಿಗೆ ಊಟ ಏರ್ಪಡಿಸಿ ದಕ್ಷಿಣೆ ನೀಡಿ.

ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ

ತರ್ಪಣ ಮತ್ತು ಪಿಂಡಾದಾನ:

ಪಿತೃ ಪಕ್ಷದ ಸಮಯದಲ್ಲಿ, ಶ್ರಾದ್ಧ, ತರ್ಪಣ ಮತ್ತು ಪಿಂಡಾದಾನವನ್ನು ಮಾಡಲಾಗುತ್ತದೆ. ಈ ಕಾರ್ಯಗಳನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಅವರ ಆರ್ಶೀವಾದ ಸದಾ ಕುಟುಂಬದ ಮೇಲಿರುತ್ತದೆ ಎಂದು ನಂಬಲಾಗಿದೆ.

ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ:

ಪಿತೃ ಪಕ್ಷದ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು. ಈ ಕೆಲಸಗಳನ್ನು ಮಾಡುವುದು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ವಿಶೇಷವಾಗಿ ಹಸುಗಳು ಮತ್ತು ಕಾಗೆಗಳಿಗೆ ಆಹಾರವನ್ನು ನೀಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Wed, 20 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ