ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!

ಇತ್ತೀಚಿನ ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲೂ ವೇಗವಾಗಿ ಹೆಚ್ಚುತ್ತಿರುವುದನ್ನು ಗಮನಿಸಿರಬಹುದು. ಹಿಂದೆ ಹೃದಯಾಘಾತ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು ಆದರೆ ಈಗ ಹಾಗಲ್ಲ. ಈ ರೀತಿಯ ಸಮಸ್ಯೆ ಎಲ್ಲರಲ್ಲಿಯೂ ಕಂಡುಬರುತ್ತಿದೆ. ಅದರಲ್ಲಿಯೂ ಯುವಜನತೆ ಈ ಸಮಸ್ಯೆಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಹಾಗಾದರೆ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತ ವಾಗುತ್ತಿರುವುದಕ್ಕೆ ಕಾರಣವೇನು, ಹೃದಯಾಘಾತವಾಗುವ ಮುನ್ನ ಕಂಡುಬರುವ ಲಕ್ಷಣಗಳು ಹೇಗಿರುತ್ತವೆ ಅದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!
Prevention Tips to Protect Your Heart at a Young Age
Image Credit source: Getty Images

Updated on: Mar 30, 2026 | 9:18 PM

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ (Heart Attack) ವಯಸ್ಸಾದವರಲ್ಲಿ ಮಾತ್ರವಲ್ಲ ಸಣ್ಣ ವಯಸ್ಸಿನವರಲ್ಲಿಯೂ ಕಂಡುಬರುತ್ತಿರುವುದನ್ನು ನೀವು ಕಂಡಿರಬಹುದು. ಜೊತೆಗೆ ಹೃದಯ ಸಂಬಂಧಿತ ಸಮಸ್ಯೆಗಳು, ಹೈ ಬ್ಲಡ್ ಪ್ರೆಶರ್, ಕೊಲೆಸ್ಟ್ರಾಲ್ ಹೆಚ್ಚಾಗುವುದು, ಬ್ಲಾಕೇಜ್ ಮತ್ತು ಹೃದಯ ಬಡಿತದಲ್ಲಿ ಏರುಪೇರಾಗುತ್ತಿರುವ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಜೀವನಶೈಲಿಯ ಬದಲಾವಣೆ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಹೆಚ್ಚುತ್ತಿರುವ ಒತ್ತಡ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಪ್ರಮುಖ ಕಾರಣಗಳಾಗಿವೆ. ಅದರಲ್ಲಿಯೂ ದೀರ್ಘಕಾಲ ಕುಳಿತು ಕೆಲಸ ಮಾಡುವವರು, ಸದಾ ಒತ್ತಡದಲ್ಲಿ ಇರುವವರು ಅಥವಾ ಕುಟುಂಬದಲ್ಲಿ ಹೃದಯ ರೋಗ ಸಂಬಂಧಿ ಸಮಸ್ಯೆ ಇರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಯುವಕರಲ್ಲಿ ಹೆಚ್ಚುತ್ತಿರುವ ಈ ಸಮಸ್ಯೆ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಬಾರದು. ಅದರ ಬದಲು ಈ ರೀತಿಯಾಗುವುದಕ್ಕೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಂಡು ಈ ರೀತಿಯ ಸಮಸ್ಯೆ ಹೆಚ್ಚಾಗದಂತೆ ತಡೆಯಬೇಕು.

ಸಣ್ಣ ವಯಸ್ಸಿನಲ್ಲಿ ಹೃದಯಾಘಾತವಾಗುವುದಕ್ಕೆ ಕಾರಣ:

  • ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ವ್ಯಾಯಾಮ ಮಾಡದಿರುವುದು
  • ಜಂಕ್ ಫುಡ್ ಮತ್ತು ಹೆಚ್ಚು ಎಣ್ಣೆಯ ಆಹಾರ ಸೇವನೆ
  • ನಿದ್ರೆಯ ಕೊರತೆ ಮತ್ತು ರಾತ್ರಿ ತಡವಾಗಿ ಮಲಗುವುದು
  • ನಿರಂತರ ಒತ್ತಡ, ಕೋಪ ಮತ್ತು ಮಾನಸಿಕ ಒತ್ತಡ
  • ಧೂಮಪಾನ ಮತ್ತು ಮದ್ಯಪಾನ ಮಾಡುವುದು

ಹೃದಯಾಘಾತವಾಗುವ ಮುನ್ನ ಕಂಡುಬರುವ ಲಕ್ಷಣಗಳು:

  • ಎದೆಯಲ್ಲಿ ನೋವು ಅಥವಾ ಒತ್ತಡ
  • ಕೈ, ಕತ್ತು ಅಥವಾ ಬೆನ್ನಿನ ಭಾಗದಲ್ಲಿ ನೋವು
  • ಉಸಿರಾಟದ ತೊಂದರೆ
  • ಅಚಾನಕ್ ಆಗಿ ಹೆಚ್ಚು ಬೆವರು ಬರುವುದು
  • ತಲೆಸುತ್ತು ಮತ್ತು ದುರ್ಬಲತೆ
  • ವಾಂತಿ

ಇದನ್ನೂ ಓದಿ: ಹಠಾತ್ ಆಗಿ ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

  • ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ
  • ಪ್ರತಿದಿನ ವ್ಯಾಯಾಮ ಅಥವಾ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ
  • ಸಮತೋಲನ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಬೇಕು
  • ಜಂಕ್ ಫುಡ್ ನಿಂದ ಆದಷ್ಟು ದೂರವಿರಿ
  • ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡಿರಿ
  • ಚೆನ್ನಾಗಿ ನಿದ್ರೆ ಮಾಡಿ
  • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us