Madras Eye: ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಳ, ಲಕ್ಷಣಗಳು, ತಡೆಗಟ್ಟುವ ಮಾರ್ಗ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ

|

Updated on: Jul 24, 2023 | 1:12 PM

Conjunctivitis: ಮುಂಗಾರು ಆರಂಭವಾಗುತ್ತಿದ್ದಂತೆ ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಾಗಿವೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ.

Madras Eye: ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಳ, ಲಕ್ಷಣಗಳು, ತಡೆಗಟ್ಟುವ ಮಾರ್ಗ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ
ಮದ್ರಾಸ್ ಐ
Follow us on

ಮುಂಗಾರು ಆರಂಭವಾಗುತ್ತಿದ್ದಂತೆ ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ(Madras Eye) ಪ್ರಕರಣಗಳು ಹೆಚ್ಚಾಗಿವೆ. ಉತ್ತರ ಭಾರತದ ಹಲವು ಭಾಗಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಯಮುನಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಹೆಚ್ಚಿದೆ. ಇಷ್ಟು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಕಾಯಿಲೆಗಳು ಕೂಡ ಹೆಚ್ಚಾಗಿವೆ.

ಮದ್ರಾಸ್ ಐ ಎಂಬುದು ಮಾರಣಾಂತಿಕ ಸೋಂಕಲ್ಲ ಆದರೂ ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕು, ಈ ಸೋಂಕು 5-6 ದಿನಗಳ ಕಾಲ ಇರುತ್ತದೆ.

ಈ ಸೋಂಕು ಗಾಳಿಯ ಮೂಲಕವಾಗಲಿ, ಕಣ್ಣನ್ನು ನೋಡುವುದರಿಂದಾಗಲಿ ಹರಡುವುದಿಲ್ಲ, ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಬಳಸಿದಾಗ ಕಣ್ಣಿನ ನೀರು ತಾಕಿದಾಗ ಹರಡುತ್ತದೆ.

ಮತ್ತಷ್ಟು ಓದಿ: Madras Eye: ಏನಿದು ಮದ್ರಾಸ್ ಐ, ಲಕ್ಷಣಗಳು ಹಾಗೂ ಚಿಕಿತ್ಸೆಗಳೇನು? ಇಲ್ಲಿದೆ ಮಾಹಿತಿ

ಮದ್ರಾಸ್ ಐ ಲಕ್ಷಣಗಳೇನು?
ಮದ್ರಾಸ್ ಐ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯ ಕಣ್ಣುಗಳ ಬಿಳಿ ಭಾಗವು ಕೆಂಪಾಗುತ್ತದೆ. ಕಣ್ಣುಗಳಲ್ಲಿ ತುರಿಕೆ ಮತ್ತು ನೋವು ಇರುತ್ತದೆ, ಕಣ್ಣಿಂದ ನೀರು ನಿರಂತರವಾಗಿ ಹೊರಬರುತ್ತಿರುತ್ತದೆ. ಕೆಲವೊಮ್ಮೆ ದೃಷ್ಟಿ ಮಸುಕಾಗುತ್ತದೆ. ಕಣ್ಣುಗಳು ಊದಿಕೊಳ್ಳುತ್ತವೆ. ಈ ಆರೋಗ್ಯ ಸಮಸ್ಯೆಯು ದೃಷ್ಟಿಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ, ದೃಷ್ಟಿ ಸ್ವಲ್ಪ ಸಮಯದವರೆಗೆ ಮಸುಕಾಗಿ ಕಾಣಬಹುದು.

ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
-ಶುಚಿತ್ವವನ್ನು ಕಾಪಾಡಿಕೊಳ್ಳಿ
-ಆಗಾಗ ಕೈಗಳನ್ನು ತೊಳೆಯಿರಿ
-ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ
-ನಿಮ್ಮ ಟವೆಲ್, ಹಾಸಿಗೆ ಅಥವಾ ಕರವಸ್ತ್ರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
-ಕ್ಯಾಂಟಾಕ್ಟ್​ ಲೆನ್ಸ್​ ಹಾಕುವುದನ್ನು ತಪ್ಪಿಸಿ
-ನಿಮ್ಮ ಸ್ವಂತ ಇಚ್ಛೆಯಿಂದ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ
-ಸಾರ್ವಜನಿಕ ಈಜುಕೊಳಕ್ಕೆ ಹೋಗುವುದನ್ನು ತಪ್ಪಿಸಿ
-ಸೋಂಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ
-ಸೋಂಕಿತ ವ್ಯಕ್ತಿ ಬಳಸಿದ ಯಾವುದನ್ನೂ ನೀವು ಬಳಸಬೇಡಿ

ಈ ರೋಗದ ಸಮಯದಲ್ಲಿ, ಸೋಂಕಿತ ವ್ಯಕ್ತಿಗೆ ಕಣ್ಣುಗಳಲ್ಲಿ ತುರಿಕೆ, ಮಸುಕಾದ ದೃಷ್ಟಿ ಮುಂತಾದ ಸಮಸ್ಯೆಗಳಿವೆ. ವೈದ್ಯರ ಪ್ರಕಾರ, ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಇದನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳನ್ನು ಸೇವಿಸುವುದು, ಉತ್ತಮ ನಿದ್ರೆ ಇತ್ಯಾದಿಗಳನ್ನು ಸಹ ಈ ರೋಗವನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ಸೌತೆಕಾಯಿ ಮೊದಲಾದ ತಣ್ಣನೆಯ ವಸ್ತುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ಕೂಡ ಈ ಋತುವಿನಲ್ಲಿ ತಾಜಾತನದ ಅನುಭವ ನೀಡುತ್ತದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ