ತಮಿಳುನಾಡಿನಲ್ಲಿ ಹೆಚ್ಚಿದ ಮದ್ರಾಸ್ ಐ ಸೋಂಕು ಪ್ರಕರಣ; ಪ್ರತಿ ದಿನ 4500 ಪ್ರಕರಣಗಳು ಪತ್ತೆ

ತಮಿಳುನಾಡಿನಲ್ಲಿ ಸೋಂಕಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಹಿರಂಗಪಡಿಸಿದ ಸಚಿವರು, ಕಳೆದ ಎರಡು ವಾರಗಳಲ್ಲಿ ಸುಮಾರು 1.5 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಯಾರೂ ದೃಷ್ಟಿ ಕಳೆದುಕೊಂಡಿಲ್ಲ ಎಂದು ಹೇಳಿದರು.

ತಮಿಳುನಾಡಿನಲ್ಲಿ ಹೆಚ್ಚಿದ ಮದ್ರಾಸ್ ಐ ಸೋಂಕು ಪ್ರಕರಣ; ಪ್ರತಿ ದಿನ 4500 ಪ್ರಕರಣಗಳು ಪತ್ತೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rashmi Kallakatta

Nov 21, 2022 | 7:57 PM

ವೈರಲ್ ಕಂಜಂಕ್ಟಿವೈಟಿಸ್ (viral conjunctivitis) ಅಥವಾ ಸಾಮಾನ್ಯವಾಗಿ ‘ಮದ್ರಾಸ್ ಐ’ (Madras Eye)ಎಂದು ಕರೆಯಲ್ಪಡುವ ಕಣ್ಣಿನ ಸೋಂಕು ಪ್ರಕರಣಗಳು ತಮಿಳುನಾಡಿನಲ್ಲಿ ಗಣನೀಯ ಏರಿಕೆ ಕಂಡಿವೆ. ಇಲ್ಲಿ ಪ್ರತಿದಿನ 4,000 ರಿಂದ 4,500 ಜನರು ಹೆಚ್ಚು ಸಾಂಕ್ರಾಮಿಕ ಕಾಯಿಲೆಯಿಂದ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ತಮಿಳುನಾಡು (Tamil nadu) ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ. ‘ಈಶಾನ್ಯ ಮಾನ್ಸೂನ್ ಆರಂಭವಾದಾಗಿನಿಂದ, ರಾಜ್ಯದಲ್ಲಿ ಮದ್ರಾಸ್ ಕಣ್ಣಿನ ಹರಡುವಿಕೆ ಕ್ರಮೇಣ ಹೆಚ್ಚುತ್ತಿದೆ’ ಎಂದು ಸೋಮವಾರ ಚೆನ್ನೈನ ಎಗ್ಮೋರ್‌ನಲ್ಲಿರುವ ಕಣ್ಣಿನ ಆಸ್ಪತ್ರೆಯನ್ನು ಪರಿಶೀಲಿಸಿದ ನಂತರ ಸುಬ್ರಮಣಿಯನ್ ಹೇಳಿದರು. ಕಂಜಂಕ್ಟಿವೈಟಿಸ್ ಎನ್ನುವುದು ಸಾಮಾನ್ಯವಾದ ಸೋಂಕು ಆಗಿದ್ದು, ಈ ವೇಳೆ ಕಣ್ಣಿನಲ್ಲಿ ಬರುವ ಸ್ರವಿಸುವಿಕೆಯ ಸಂಪರ್ಕದ ಮೇಲೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಹೆಚ್ಚಾಗಿ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಉಂಟಾಗುತ್ತದೆ.ಚೆನ್ನೈನಲ್ಲಿ ಪ್ರತಿದಿನ ಸುಮಾರು 80 ರಿಂದ 100 ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಅದೇ ರೀತಿ, ಸೇಲಂ, ಮಧುರೈ, ತಿರುಚ್ಚಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕುಗಳು ವರದಿಯಾಗುತ್ತಿವೆ.

ರಾಜ್ಯದಲ್ಲಿ ಸೋಂಕಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಹಿರಂಗಪಡಿಸಿದ ಸಚಿವರು, ಕಳೆದ ಎರಡು ವಾರಗಳಲ್ಲಿ ಸುಮಾರು 1.5 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಯಾರೂ ದೃಷ್ಟಿ ಕಳೆದುಕೊಂಡಿಲ್ಲ ಎಂದು ಹೇಳಿದರು.

ತಮಿಳುನಾಡಿನಾದ್ಯಂತ 90 ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಲವು ಪ್ರಾದೇಶಿಕ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ ಎಂದು ಸುಬ್ರಮಣಿಯನ್ ಹೇಳಿದರು.ಸಾಂಪ್ರದಾಯಿಕ ಔಷಧದಿಂದ ದೂರವಿರಲು ಹೇಳಿದ ಆರೋಗ್ಯ ಸಚಿವರು ನೀವು ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಮದ್ರಾಸ್ ಐಗೆ ಔಷಧಗಳ ಕೊರತೆ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಏತನ್ಮಧ್ಯೆ,ಆರ್ದ್ರತೆ ಮತ್ತು ಶೀತ ಹವಾಮಾನ ಪರಿಸ್ಥಿತಿಗಳಿಂದಾಗಿ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳವಾಗಿದೆ ಎಂದು ನೇತ್ರಶಾಸ್ತ್ರಜ್ಞರು ಹೇಳಿದ್ದಾರೆ.

ಶಾಲೆಗಳು ಮತ್ತು ಕಚೇರಿಗಳಂತಹ ಮುಚ್ಚಿದ ವಾತಾವರಣದಲ್ಲಿ ಕಂಜಂಕ್ಟಿವೈಟಿಸ್ ವೇಗವಾಗಿ ಹರಡುವುದರಿಂದ ಈ ಬಾರಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲಿದೆ. ಸೋಂಕಿತರು ಕಣ್ಣಿನಿಂದ ನೀರು ಸುರಿಯುವುದು ಸಂಪೂರ್ಣವಾಗಿ ನಿಲ್ಲುವವರೆಗೆ ಹೊರಗೆ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada