ಒಂದು ಲಕ್ಷ ಕಿಲೋಗ್ರಾಂಗಳಷ್ಟು ಹಿಟ್ಟಿನೊಂದಿಗೆ ನೀವು ಎಷ್ಟು ಇಡ್ಲಿಗಳನ್ನು ತಯಾರಿಸಬಹುದು? ವಿಶ್ವದ ಅತಿದೊಡ್ಡ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಕಾ ಸಂಸ್ಥೆ ಈ ಕುರಿತಂತೆ ಲೆಕ್ಕಾಚಾರಕ್ಕೆ ಮುಂದಾಗಿದೆ. ಈ ಪ್ರಕಾರ ಸುಮಾರು 20 ಲಕ್ಷ ಇಡ್ಲಿಗಳ ತಯಾರಿಸಬಹುದು ಎಂಬ ಅಂದಾಜು ದಾಖಲಾಗಿದೆ. ಬೆಂಗಲೂರು ಮೂಲದ ಐಡಿ ಫ್ರೆಶ್ ಫುಡ್ ಸಂಸ್ಥೆ ಮಾರ್ಚ್ 31ರಂದು ವಿಶ್ವ ಇಡ್ಲಿ ದಿನ ಎಂದು ಕರ್ನಾಟಕದ ಆನೇಕಲ್ನಲ್ಲಿ ಮೊದಲಿಗೆ ಅಚರಣೆ ಪ್ರಾರಂಭಿಸುತ್ತದೆ. ಹೆಚ್ಚಿನ ಜನ ಮನೆಯಲ್ಲೇ ಇರುವುದನ್ನು ಗಮನಿಸಿ ಈ ಕಂಪನಿ ಜನರನ್ನು ಉದ್ಯೋಗಕ್ಕಾಗಿ ಕರೆದು ಸ್ಟಾರ್ಟ್ಅಪ್ ಕಂಪನಿಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ.
ಇತ್ತೀಚೆಗೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊವಿಡ್ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಆರೋಗ್ಯಕರವಾದ ಇಡ್ಲಿ ಮತ್ತು ದೋಸೆಯ ಬೇಡಿಕೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ಸಂಶೋಧನೆ ತೋರಿಸಿದೆ ಎಂದು ಐಡಿ ಫ್ರೆಶ್ ಫುಡ್ ಸಹ ಸಂಸ್ಥಾಪಕ ಮತ್ತು ಸಿಇಒ ಮುಸ್ತಫಾ ಪಿಸಿ ಹೇಳಿದ್ದಾರೆ. ಭಾರತದಲ್ಲಿ ಸಾಂಪ್ರದಾಯಿಕ ಅಡುಗೆ ಮಾಡುವ ವಿಧಾನ ರೂಢಿಯಲ್ಲಿದ್ದು, ಹೆಚ್ಚಿನ ಜನ ಸಾಂಪ್ರದಾಯಿಕ ಅಡುಗೆಯನ್ನೇ ಇಷ್ಟಪಡುತ್ತಾರೆ. ಮನೆಯಲ್ಲಿಯೇ ಸರಳವಾಗಿ ಅಹಾರ ತಯಾರಿಸುವ ಸಾಧ್ಯತೆಗಳಿಗೆ ಜನರು ಈ ಪರಿಸ್ಥಿಗೆ ಮೊರೆ ಹೋಗಿದ್ದಾರೆ ಎಂದು ಅವರು ಹೇಳುತ್ತಾರೆ.
ಕಳೆದ ವರ್ಷ ಈ ಕಂಪನಿ 35 ಕೋಟಿ ಇಡ್ಲಿ ತಯಾರಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. 2003ರಿಂದ ಪ್ರಾರಂಭಗೊಂಡ ಈ ಕಂಪನಿ 300 ಕ್ಕೂ ಹೆಚ್ಚು ಮಳಿಗೆಯನ್ನು ಹೊಂದಿದ್ದು, ಕ್ಯಾಲಿಫೋರ್ನಿಯಾ ಸೇರಿದಂತೆ ಇನ್ನಿತರ ದೇಶಗಳಿಗೂ ಆಹಾರವನ್ನು ರಫ್ತು ಮಾಡುತ್ತಿದೆ. ಚೆನ್ನೈನ ಸುವೈ ಭವನ್ನಲ್ಲಿ ಐದು ಕಿಚನ್ ಸೆಂಟರ್ಗಳಿದ್ದು, ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಜನರಿಗೆ ದೋಸೆಗಳನ್ನು ಪೂರೈಸುತ್ತಿದೆ. ರವೆ ಮತ್ತು ರಾಗಿಯಿಂದ ತಯಾರಿಸಿದ ಆಹಾರವನ್ನೂ ಪೂರೈಸುತ್ತಿದೆ. ಮನೆ ಮನೆಗಳಿಗೂ ಕೂಡಾ ಆಹಾರವನ್ನು ತಲುಪಿಸುವ ಕಾರ್ಯ ಮಾಡುತ್ತಿದೆ.
ಕೊಯಮತ್ತೂರಿನ ಮೂಲದ ಮಹಿಳಾ ಉದ್ಯಮಿ ಕವಿತಾ ಮೋಹನ್, ತುರ್ತು ಪರಿಸ್ಥಿತಿಯಲ್ಲಿ ಆಹಾರ ತಯಾರಿಕೆಗೆ ಮುಂದಾಗುತ್ತಾರೆ. ಕೊವಿಡ್ ಪರಿಸ್ಥಿತಿಯಲ್ಲಿ ಕಳೆದ ವರ್ಷ ಸಣ್ಣ ಕೈಗಾರಿಕಾ ಉದ್ಯೋಗವನ್ನು ಪ್ರಾರಂಭಿಸುತ್ತಾರೆ. ತೃಪ್ತ್ ಎಂಬ ಹೆಸರಿನ ಸಣ್ಣ ಕೈಗಾರಿಕೆಯನ್ನು ಪ್ರಾರಂಭಿಸುತ್ತಾರೆ. ನಾನು ಸ್ಥಳೀಯ ಜನರಿಗೆ ಆಹಾರವನ್ನು ಪೂರೈಸುತ್ತಿದ್ದೇನೆ. ಪ್ರತಿ ನಿತ್ಯ 50 ಕೆಜಿ ಹಿಟ್ಟಿನಿಂದ ಆಹಾರ ತಯಾರಿಸುತ್ತೇನೆ. ಬೇಡಿಕೆ ಹೆಚ್ಚಾದಂತೆ ಅದರ ಪೂರೂಕೆಯನ್ನೂ ಹೆಚ್ಚಿಸುತ್ತೇನೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅನ್ಪುಮತಿ ಜೆಜೆ ಅವರು 2005ರಿಂದ ಫುಡ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷದಿಂದ ಆಹಾರ ತಯಾರಿಕೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇವರ ಫುಡ್ ಸೆಂಟರ್ನಲ್ಲಿ 5 ಜನರು ಕೆಲಸ ಮಾಡುತ್ತಿದ್ದು, ಈ ಐವರ ಸಹಾಯದಿಂದ ಸಾಂಕ್ರಾಮಿಕ ಸಮಯದಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಕೊಚ್ಚಿಯಲ್ಲಿ ಅಮಲ್ ಮುರಲೀಧರನ್ ಅವರು ಅವರ ತಾಯಿಯ ಜೊತೆ ಸೇರಿ ಫುಡ್ ಸೆಂಟರ್ ಪ್ರಾರಂಭಿಸುತ್ತಾರೆ. ಈ ಮೊದಲು 300 ಪ್ರಾಕೆಟ್ನಷ್ಟು ಆಹಾರ ತಯಾರಿಸುತ್ತಿದ್ದು, ಇದೀಗ ಬೇಡಿಕೆಯ ಹೆಚ್ಚಳದ ನಂತರ 700 ಪ್ಯಾಕೆಟ್ನಷ್ಟು ಹೆಚ್ಚಾಗಿದೆ. ನಮ್ಮ ಫುಡ್ ಸೆಂಟರ್ನಲ್ಲಿ ಅಕ್ಕಿ, ಬೇಳೆಗಳಿಂದ ತಯಾರಿಸಿ ಆಹಾರ ಪೂರೈಕೆ ಮಾಡುತ್ತೇವೆ. ಸಣ್ಣ ಅಂಗಡಿಗಳ ಮಾಲೀಕರು ಹೆಚ್ಚಾಗಿ ಖರೀದಿ ಮಾಡುತ್ತಾರೆ ಎಂದು ಅಮಲ್ ಅಭಿಪ್ರಾಯ ಪಟ್ಟಿದ್ದಾರೆ. ಇಡ್ಲಿ ತಯಾರಿಕೆಯಲ್ಲಿ ಬಣ್ಣ, ಹದ, ಗಾತ್ರ ಮತ್ತು ರುಚಿ ಅತಿ ಮುಖ್ಯ. ಈ ನಾಲ್ಕು ಗುಣಗಳನ್ನು ಇಡ್ಲಿ ಹೊಂದಿರುತ್ತದೆ. ಮತ್ತು ತನ್ನ ಸವಿಯನ್ನು ತೋರ್ಪಡಿಸುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸೋನಿ ಮಣಿ ಅಭಿಪ್ರಾಯಪಟ್ಟಿದ್ದಾರೆ.
Published On - 10:54 am, Sun, 2 May 21