ಕೊವಿಡ್ ಲಸಿಕೆ, ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ತೆಗೆದುಕೊಂಡವರಲ್ಲಿಯೂ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜನರಲ್ಲಿ ಈ ಲಸಿಕೆಗಳ ಬಗ್ಗೆ ಅನೇಕ ಪ್ರಶ್ನೆ ಎದ್ದಿವೆ. ಬಹಳ ಜನ ಆತಂಕಕ್ಕೂ ಒಳಗಾಗಿದ್ದಾರೆ. ಚಂಡೀಗಡದ ಅಂಗನವಾಡಿಯಲ್ಲಿ ಕೆಲಸ ಮಾಡುವ 45 ವರ್ಷದ ಸೀಮಾ ರಾಣಿ ಕ್ರಮವಾಗಿ ಮಾರ್ಚ್ 10 ಮತ್ತು ಏಪ್ರಿಲ್ 12 ರಂದು ಎರಡು ಕೋವಿಡ್ -19 ಲಸಿಕೆ ಪಡೆದರು. 2 ಡೊಸ್ ಲಸಿಕೆ ಪಡೆದ ಒಂದು ವಾರದ ನಂತರದಲ್ಲಿ ಸೀಮಾ ಕೊವಿಡ್ ಪರೀಕ್ಷೆ ಮಾಡಿಸಿದ್ದು, ಆಗ ಸೀಮಾಗೆ ಕೊರೊನಾ ದೃಢಪಟ್ಟಿತ್ತು. ಅದೃಷ್ಟವಶಾತ್ ಸೀಮಾಗೆ ಸರಿಯಾದ ಸಮಯಕ್ಕೆ ಪಂಜಾಬ್ ಸರ್ಕಾರ ಆಂಟಿವೈರಲ್‌ಗಳು, ಪ್ರತಿಜೀವಕಗಳು ಸೇರಿದಂತೆ ಕೊವಿಡ್ 19 ಗೆ ಸಂಬಂಧಿಸಿದ ಎಲ್ಲಾ ಔಷಧಿಯನ್ನು ನೀಡಿತು. ಅವಳು ಚೇತರಿಸಿಕೊಂಡಳು. ಈ ರೀತಿಯ ಅನೇಕ ಘಟನೆಗಳು ದೇಶದ ವಿವಿಧ ಭಾಗಗಳಿಂದ ಬರುತ್ತಿವೆ.
ಇದೇ ರೀತಿಯ ಘಟನೆ ದೆಹಲಿಯ ಉತ್ತಮ್ ನಗರದಲ್ಲಿ ವಾಸಿಸುವ 68 ವರ್ಷದ ಅಶೋಕ್ ಕುಮಾರ್ ಭೂಷಣ್ ವಿಷಯದಲ್ಲೂ ನಡೆಯಿತು. ಅಶೋಕ್ ಮಾರ್ಚ್ 30 ರಂದು ತಮ್ಮ ಮೊದಲ ಲಸಿಕೆ ಪಡೆದರು. ಎರಡನೇ ಲಸಿಕೆಯನ್ನು ಏಪ್ರಿಲ್ 27 ರಂದು ಪಡೆದರು. ಅದರೆ ಎರಡನೇ ಲಸಿಕೆ ಪಡೆಯುವ ಒಂದು ವಾರದ ಮೊದಲೇ ಅಶೋಕ್ ಕೊರೊನಾ ಪರೀಕ್ಷೆ ಮಾಡಿಸಿದ್ದು, ಕೊವಿಡ್ ದೃಢಪಟ್ಟಿತ್ತು. ಅಶೋಕ್ ಅವರ ಆಮ್ಲಜನಕದ ಮಟ್ಟವು ತೀವ್ರವಾಗಿ ಕುಸಿದಿತ್ತು. ಆದರೆ ಅಶೋಕ್ ಮಗ 45,000 ರೂಪಾಯಿ ಕೊಟ್ಟು ಆಕ್ಸಿಜನ್ಅನ್ನು ಖರೀದಿಸುವಲ್ಲಿ ಯಶಸ್ವಿಯಾದರು. ಇದು ಅವರ ಜೀವವನ್ನು ಉಳಿಸಿತು.
ಚುಚ್ಚುಮದ್ದನ್ನು ಪಡೆದ ಜನರು ಕೂಡ ಕೊರೊನಾ ಸೋಂಕಿಗೆ ತುತ್ತಾಗುವ ಈ ಎಲ್ಲಾ ಘಟನೆಗಳು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚುಚ್ಚುಮದ್ದು ಪಡೆದ ಮೇಲೂ ಜನರು ಏಕೆ ಸೋಂಕಿಗೆ ಒಳಗಾಗುತ್ತಿದ್ದಾರೆ? ಕೊವಿಡ್ ಲಸಿಕೆಯು ನಮಗೆ ವೈರಸ್‌ನಿಂದ ಶೇಕಡಾ 100 ರಷ್ಟು ರಕ್ಷಣೆ ನೀಡುತ್ತದೆಯೇ? ವ್ಯಾಕ್ಸಿನೇಷನ್ ನಂತರ ರೋಗನಿರೋಧಕ ಶಕ್ತಿ ಎಷ್ಟು ಸಮಯದವರೆಗೆ ಇರುತ್ತದೆ?
ಮೇಲಿನ ಪ್ರಶ್ನೆಗಳಿಗೆ ಕೊವಿಡ್ 19 ವ್ಯಾಕ್ಸಿನೇಷನ್ ಮತ್ತು ಚಿಕಿತ್ಸಾ ಕಾರ್ಯಕ್ರಮದ ನೇತೃತ್ವ ವಹಿಸಿರುವ ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅರಿವಳಿಕೆ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಜಿ.ಡಿ.ಪುರಿ ಉತ್ತರ ನೀಡಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸ್
ಡಾ. ಜಿ.ಡಿ. ಪುರಿ ನೀಡಿದ ಮೊದಲ ಸಲಹೆಯೆಂದರೆ, ನೀವು ಎರಡೂ ಲಸಿಕೆಗಳನ್ನು ಪಡೆದಿದ್ದೀರಿ ಅಥವಾ ಮೊದಲನೆ ಲಸಿಕೆ ಪಡೆಯುವ ಯೋಚನೆಯಲ್ಲಿ ಇದ್ದೀರಿ ಎಂದಾದರೂ ಮಾಸ್ಕ್ ಧರಿಸುವುದು ಮುಖ್ಯವಾಗಿದೆ. ಅದನ್ನು ತಪ್ಪಿಸುವಂತಿಲ್ಲ. ಹೆಚ್ಚುವರಿಯಾಗಿ, ಜನದಟ್ಟಣೆಯ ಸ್ಥಳದಲ್ಲಿ ತಿನ್ನುವುದನ್ನು ತಪ್ಪಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ನಿಮ್ಮ ಕೈಗಳನ್ನು ಆಗಾಗ ಸ್ವಚ್ಛವಾಗಿ ಇಟ್ಟುಕೊಳ್ಳಲು ತೊಳೆಯುತ್ತಿರಿ ಎಂದು ಹೇಳಿದ್ದಾರೆ.
ಲಸಿಕೆ ಪಡೆದವರು ಅಥವಾ ಲಸಿಕೆ ಪಡೆಯದ ಜನರು ಇದೇ ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದು, ಮಾಸ್ಕ್ ಧರಿಸಿ. ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸಿ. ಎರಡನೆಯದಾಗಿ ಯಾರಾದರೂ ನಿಮ್ಮ ಸಂಪರ್ಕಕ್ಕೆ ಬಂದಾಗ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ಇದರಿಂದ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆ ಇರುತ್ತದೆ. ಮೂರನೆಯದಾಗಿ, ಕೈಗಳನ್ನು ಸ್ವಚ್ಛವಾಗಿಡಲು ಮರೆಯಬೇಡಿ ಎಂದು ಡಾ. ಜಿ.ಡಿ. ಪುರಿ ಹೇಳಿದ್ದಾರೆ.
ಲಸಿಕೆ ಪಡೆದವರಲ್ಲಿಯೂ ಕೊರೊನಾ ಸೋಂಕು ಹರಡಲು ಕಾರಣ?
ಕೊವಿಡ್ 19 ದೂರವಾಗಿಸುವಲ್ಲಿ ಎರಡು ಲಸಿಕೆಗಳನ್ನು ಪಡೆದ ಹೊರತಾಗಿಯೂ ಜನರು ಸೋಂಕಿಗೆ ಒಳಗಾಗಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ರೋಗನಿರೋಧಕ ಶಕ್ತಿ ಹೆಚ್ಚಿದರೂ ಸೋಂಕಿಗೆ ಒಳಗಾಗಬಹುದು. ಲಸಿಕೆ ಸೋಂಕಿನಿಂದ ಶೇಕಡಾ 100 ರಷ್ಟು ರಕ್ಷಣೆಯನ್ನು ಒದಗಿಸುವುದಿಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎಂದು ಡಾ. ಜಿ.ಡಿ. ಪುರಿ ಹೇಳುತ್ತಾರೆ.
ರೋಗನಿರೋಧಕ ಶಕ್ತಿ ಇದ್ದರೂ ಕೊರೊನಾ ಸೋಂಕು ದೃಢಪಡಲು ಪ್ರಮುಖವಾದ ಕಾರಣವೆಂದರೆ ನೀವು ಎರಡು ಬಾರಿ ಲಸಿಕೆ ಪಡೆಯದ ಹೊರತು ಲಸಿಕೆ 100 ಪ್ರತಿಶತದಷ್ಟು ರಕ್ಷಣೆ ನೀಡಲು ಸಾಧ್ಯವಿಲ್ಲ ಮತ್ತು ಎರಡು ಡೋಸ್ಗಳ ನಡುವೆ ನಿಮಗೆ ತಿಂಗಳ ಅಂತರವಿದೆ. ಆ ನಂತರ ಮಾತ್ರ ಎರಡನೇ ಲಸಿಕೆ ಪಡಯಬಹುದು. ಮತ್ತೆ ಪುನಃ ಎರಡು ವಾರಗಳ ನಂತರ ನೀವು ಲಸಿಕೆಯಿಂದ ಗರಿಷ್ಠ ರೋಗನಿರೋಧಕ ಶಕ್ತಿಯನ್ನು ಪಡೆಯುತ್ತೀರಿ. ಅದು ಶೇಕಡಾ 80 ರಿಂದ 90. ಆದರೆ ನೀವು ಸಂಪೂರ್ಣ ರೋಗನಿರೋಧಕ ಶಕ್ತಿ ಪಡೆಯದೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ಡಾ. ಜಿ.ಡಿ. ಪುರಿ ಹೇಳಿದ್ದಾರೆ.
ಡಾ. ಪುರಿ ಅವರ ಪ್ರಕಾರ, ಎರಡು ಲಸಿಕೆಗಳನ್ನು ಪಡೆದ ನಂತರ ಸೋಂಕಿನ ದಾಳಿ ಸೌಮ್ಯವಾಗಿರುತ್ತದೆ. ಆದರೆ ಹೆಚ್ಚು ಜನಸಾಂದ್ರತೆ ಇರುವ ಪ್ರದೇಶದಲ್ಲಿ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವ ಅಭ್ಯಾಸವನ್ನು ಬಿಡಿ. ಏಕೆಂದರೆ ತಿನ್ನುವಾಗ ಮಾಸ್ಕ್ ತೆಗೆಯಬೇಕಾಗುತ್ತದೆ. ಇಂತಹ ಸಮಯದಲ್ಲೇ ಹೆಚ್ಚು ಜನ ಇದ್ದಲ್ಲಿ ಸೋಂಕು ಹರಡುವ ಸಾಧ್ಯತೆ ಕೂಡ ಹೆಚ್ಚು ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ ಗುಂಪು ಸೇರುವಲ್ಲಿ ಊಟ ಮಾಡುವುದನ್ನು ಅಥವಾ ಸಂವಾದ ನಡೆಸುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಕೊರೊನಾದಿಂದಾಗುವ ಅನಾಹುತಗಳನ್ನು ಲಸಿಕೆ ತಪ್ಪಿಸುತ್ತದೆಯೇ?
ಲಸಿಕೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಡಾ.ಪುರಿ ಹೇಳುತ್ತಾರೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವ್ಯಾಕ್ಸಿನೇಷನ್ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಆದರೆ ಒಬ್ಬರು ಇನ್ನೊಬ್ಬರಿಂದ ಸೋಂಕನ್ನು ಪಡೆಯಲು ಶೇಕಡಾ 15 ರಿಂದ 20 ರಷ್ಟು ಅವಕಾಶವಿದೆ. ನೀವು ಚುಚ್ಚುಮದ್ದನ್ನು ಪಡೆದಾಗ, ನಿಮಗೆ ಸ್ವಲ್ಪ ರೋಗನಿರೋಧಕ ಶಕ್ತಿ ಇರುತ್ತದೆ. ಆಗ ನೀವು ಸೋಂಕಿನಿಂದ ಗೆಲ್ಲಬಹುದು. ಆದರೆ ನೀವು ಮಾಸ್ಕ್ ಹಾಕದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು ತಪ್ಪಿಸಬೇಕಾಗುತ್ತದೆ.
ಲಸಿಕೆ ರೋಗನಿರೋಧಕ ಶಕ್ತಿಯನ್ನು ಎಷ್ಟು ಸಮಯದವರೆಗೆ ನೀಡುತ್ತದೆ?
ಈ ಸೋಂಕಿನಿಂದ ಒಬ್ಬರು ಎಷ್ಟು ಸಮಯದವರೆಗೆ ರೋಗನಿರೋಧಕ ಶಕ್ತಿಯನ್ನು ಪಡೆಯುತ್ತಾರೆ ಎಂಬುದರ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಒಂದೆರಡು ತಿಂಗಳ ನಂತರ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಲಸಿಕೆ ನಿಮಗೆ ಶಾಶ್ವತ ರೋಗನಿರೋಧಕ ಶಕ್ತಿಯನ್ನು ನೀಡುವುದಿಲ್ಲ. ಆರು ತಿಂಗಳಿಂದ ಒಂದು ವರ್ಷದವರೆಗೆ, ಒಬ್ಬರು ಮತ್ತೊಂದು ಲಸಿಕೆ ಪಡೆಯಬೇಕು. ಪ್ರತಿ ವರ್ಷ ಹೊಸ ಲಸಿಕೆ ಅಗತ್ಯವಿದೆ ಎಂಬುದು ಡಾ ಜಿ.ಡಿ. ಪುರಿ ಅವರ ಅಭಿಪ್ರಾಯ
ಹೆಚ್ಚುವರಿಯಾಗಿ ಹೇಳಬೇಕಾದರೆ ವೈರಸ್ನ ಅನೇಕ ರೂಪಾಂತರಗಳು ಲಸಿಕೆ ಸಂಶೋಧಕರಿಗೆ ಹೊಸ ಹೊಸ ಸವಾಲನ್ನು ನೀಡಿವೆ ಎನ್ನುವುದು ಸತ್ಯ ಎನ್ನುತ್ತಾರೆ ಡಾ. ಜಿ.ಡಿ. ಪುರಿ.
ಇದನ್ನೂ ಓದಿ:
ಉಸಿರಾಟದ ತೊಂದರೆ ಅನುಭವಿಸುತ್ತಿದ್ದರೆ ಈ ಕೆಳಗಿನ ಆಹಾರ ಪದ್ಧತಿಯನ್ನು ನಿತ್ಯವು ಅನುಸರಿಸಿ
(vaccinated people testing positive for Covid19 Here is Answers for all your questions)
Published On - 6:44 am, Sat, 1 May 21