ಬಿಪಿ ಕಂಟ್ರೋಲ್ ಮಾಡಬೇಕಾ?; ಈ ತರಕಾರಿಯನ್ನು ಹಸಿಯಾಗಿ ತಿನ್ನಿ

|

Updated on: Jan 16, 2024 | 2:17 PM

ಈ ತರಕಾರಿಯನ್ನು ತಾಜಾ ರೂಪದಲ್ಲಿ ಸೇವಿಸಿದಾಗ ಮಾತ್ರ ಅದರಿಂದ ಹೆಚ್ಚು ಪ್ರಯೋಜನಗಳು ಸಿಗಲು ಸಾಧ್ಯ. ಇದಕ್ಕೆ ಉಪ್ಪು, ಖಾರ ಹಾಕಿ, ಅದನ್ನು ಬೇಯಿಸಿದಾಗ ಅದರಲ್ಲಿರುವ ಪೌಷ್ಟಿಕಾಂಶ ಆವಿಯಾಗಿ, ಕಡಿಮೆ ಆಗುತ್ತದೆ. ಹಾಗಾದರೆ, ರಕ್ತದೊತ್ತಡ ನಿಯಂತ್ರಣದಲ್ಲಿಡುವ ಆ ತರಕಾರಿ ಯಾವುದು?

ಬಿಪಿ ಕಂಟ್ರೋಲ್ ಮಾಡಬೇಕಾ?; ಈ ತರಕಾರಿಯನ್ನು ಹಸಿಯಾಗಿ ತಿನ್ನಿ
ಅಧಿಕ ರಕ್ತದೊತ್ತಡ
Image Credit source: iStock
Follow us on

ಅಧಿಕ ರಕ್ತದೊತ್ತಡಕ್ಕೆ ನಮ್ಮ ಜೀವನಶೈಲಿ ಸರಿಯಾಗಿರದಿರುವುದು ಒಂದು ಮುಖ್ಯ ಕಾರಣ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಕೆಲವೊಂದು ಆಹಾರಗಳು ನಮ್ಮ ದೇಹದ ರಕ್ತದೊತ್ತಡ ಅಥವಾ ಬಿಪಿಯನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತವೆ. ಅದರಲ್ಲಿ ಟೊಮ್ಯಾಟೊ ಕೂಡ ಒಂದು. ಟೊಮ್ಯಾಟೋ ಹಣ್ಣಿನ ಸೇವನೆಯು ನಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು, ಪ್ರತಿದಿನ ಟೊಮ್ಯಾಟೊ ಸೇವಿಸುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಆಗುತ್ತದೆ ಎಂದು ಕಂಡುಹಿಡಿದಿದೆ.

ಅಧಿಕ ರಕ್ತದೊತ್ತಡ ಇಲ್ಲದ ಜನರಿಗೆ ಬಿಪಿ ಬರುವ ಸಾಧ್ಯತೆ ಜಾಸ್ತಿ ಟೊಮ್ಯಾಟೊ ಆಧಾರಿತ ಆಹಾರವನ್ನು ಸೇವಿಸುವವರಿಗಿಂತಲೂ ಕಡಿಮೆ ಟೊಮ್ಯಾಟೋ ಸೇವಿಸುವವರಿಗೆ ಹೆಚ್ಚು. ಹೆಚ್ಚು ಟೊಮ್ಯಾಟೋ ಸೇವಿಸುವವರಲ್ಲಿ ಬಿಪಿಯ ಅಪಾಯವು ಶೇ. 36ರಷ್ಟು ಕಡಿಮೆಯಾಗಿದೆ. ಈಗಾಗಲೇ ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಅದರಲ್ಲೂ ವಿಶೇಷವಾಗಿ ಮೊದಲ ಹಂತದ ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರಲ್ಲಿ, ಟೊಮ್ಯಾಟೋ ಹಣ್ಣಿನ ಸೇವನೆಯು ರಕ್ತದೊತ್ತಡದ ಇಳಿಕೆಗೆ ಉಪಯುಕ್ತವಾಗಿದೆ. ಈ ಅಧ್ಯಯನದ ಮೊದಲು, ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸಹ ರಕ್ತದೊತ್ತಡವನ್ನು ಕಡಿಮೆ ಮಾಡಲು ಆಹಾರದಲ್ಲಿ ಟೊಮ್ಯಾಟೊ ಸೇರಿಸಿಕೊಳ್ಳಬೇಕೆಂದು ಶಿಫಾರಸು ಮಾಡಿತ್ತು.

ಇದನ್ನೂ ಓದಿ: ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಬಳಸಿ

ಟೊಮ್ಯಾಟೋ ಬಿಪಿಯನ್ನು ಹೇಗೆ ಕಡಿಮೆ ಮಾಡುತ್ತದೆ?:

ಆಹಾರದಲ್ಲಿ ಹೆಚ್ಚಿದ ಸೋಡಿಯಂ ಸೇವನೆಯಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಅದಕ್ಕಾಗಿಯೇ ಉಪ್ಪು ಸೇವನೆಯನ್ನು ಮಿತಿಗೊಳಿಸಬೇಕೆಂದು ಬಿಪಿ ಇರುವ ರೋಗಿಗಳಿಗೆ ವೈದ್ಯರು ಸೂಚಿಸುತ್ತಾರೆ. ದಿನಕ್ಕೆ ನಿಮ್ಮ ಒಟ್ಟು ಸೋಡಿಯಂ ಪ್ರಮಾಣವು 1,500-2,000 ಮಿಲಿಗ್ರಾಂ (mg)ಗಿಂತ ಹೆಚ್ಚಿರಬಾರದು. ಟೊಮ್ಯಾಟೋ ಸುಲಭವಾಗಿ ಲಭ್ಯವಿರುವ ಪೊಟ್ಯಾಸಿಯಮ್ ಮೂಲವಾಗಿದೆ.

ಟೊಮ್ಯಾಟೊ ಹಣ್ಣಿನಲ್ಲಿ ಲೈಕೋಪೀನ್ ಸಮೃದ್ಧವಾಗಿದೆ. ಇದು ಎಂಡೋಥೀಲಿಯಂ ಅಥವಾ ಅಪಧಮನಿಗಳ ಗೋಡೆಗಳನ್ನು ಸ್ಥಿರಗೊಳಿಸುತ್ತದೆ. ಇದು ಎಂಡೋಥೀಲಿಯಂನಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದೇಹದ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳನ್ನು ಕಿರಿದಾಗಿಸುತ್ತದೆ.

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ 5 ಯೋಗಾಸನಗಳನ್ನು ಮಾಡಿ

ಟೊಮ್ಯಾಟೋ ಹಣ್ಣನ್ನು ಹೇಗೆ ಸೇವಿಸಬೇಕು?:

ಟೊಮ್ಯಾಟೋ ಹಣ್ಣುಗಳನ್ನು ತಾಜಾ ರೂಪದಲ್ಲಿ ಸೇವಿಸಿದಾಗ ಮಾತ್ರ ಅದರಿಂದ ಹೆಚ್ಚು ಪ್ರಯೋಜನಗಳು ಸಿಗಲು ಸಾಧ್ಯ. ಟೊಮ್ಯಾಟೋ ಹಣ್ಣಿಗೆ ಉಪ್ಪು, ಖಾರ ಹಾಕಿ, ಅದನ್ನು ಬೇಯಿಸಿದಾಗ ಅದರಲ್ಲಿರುವ ಪೌಷ್ಟಿಕಾಂಶ ಆವಿಯಾಗಿ, ಕಡಿಮೆ ಆಗುತ್ತದೆ. ಅದಕ್ಕಾಗಿಯೇ ಭಾರತೀಯರು ತಮ್ಮ ಆಹಾರದಲ್ಲಿ ಸಾಕಷ್ಟು ಟೊಮ್ಯಾಟೊವನ್ನು ಬಳಸುತ್ತಿದ್ದರೂ ಅದರ ಪೌಷ್ಟಿಕಾಂಶದ ಪ್ರಯೋಜನಗಳು ಅವರಿಗೆ ಸಿಗುತ್ತಿಲ್ಲ. ಟೊಮ್ಯಾಟೋ ಹಣ್ಣನ್ನು ಹಸಿಯಾಗಿ, ಸಲಾಡ್ ರೂಪದಲ್ಲಿ ತಿನ್ನುವುದು ಉತ್ತಮ. ಟೊಮ್ಯಾಟೊ ಸಲಾಡ್‌ನಲ್ಲಿ ಉಪ್ಪನ್ನು ಚಿಮುಕಿಸುವುದರಿಂದ ಸಹ ಅದರ ಆಹಾರದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ರಸಂ, ಸೂಪ್ ಮುಂತಾದ ರೂಪದಲ್ಲಿ ಟೊಮ್ಯಾಟೋ ಹಣ್ಣನ್ನು ಸೇವಿಸುವ ಬದಲು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ