ಹೆಚ್ಚಿನವರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. 50 ವರ್ಷ ದಾಟಿದವರಲ್ಲಿ ಮಾತ್ರ ಕಾಣುತ್ತಿದ್ದ ಈ ಸಮಸ್ಯೆಯು ಇದೀಗ ವಯಸ್ಸಾಗದವರಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ದೊಡ್ಡವರಿಂದ ಹಿಡಿದು ಮಕ್ಕಳು ಕೂಡ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳಲ್ಲಿ ಸಕ್ಕರೆ ಕಾಯಿಲೆಯು ಕಾಣಿಸಿಕೊಳ್ಳುವ ಪ್ರಮಾಣವು ಏರಿಕೆಯಾಗುತ್ತಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡರೆ ಮಧುಮೇಹ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸರಿಯಾದ ಚಿಕಿತ್ಸೆಯಿಂದ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
* ಅತಿಯಾದ ಬಾಯಾರಿಕೆ
* ಪದೇ ಪದೇ ಮೂತ್ರ ವಿಸರ್ಜನೆ
* ಅತಿಯಾದ ಹಸಿವು
* ತೂಕ ಇಳಿಕೆ
* ಆಯಾಸ
* ದೃಷ್ಟಿ ಮಂದವಾಗುವುದು
* ಗಾಯವಾಗಿದ್ದರೆ ಗುಣಮುಖವಾಗದೇ ಇರುವುದು, ಈ ಎಲ್ಲಾ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಈ ರೀತಿಯ ಆಹಾರ ಪದ್ಧತಿ ಬಂಜೆತನಕ್ಕೆ ಕಾರಣವಾಗಬಹುದು; ಸಂಶೋಧನೆ
ಪೋಷಕರು ತಮ್ಮ ಮಕ್ಕಳಿಗೆ ಕುಕೀಸ್, ಮಿಠಾಯಿಗಳು ಮತ್ತು ಪೇಸ್ಟ್ರಿಗಳನ್ನು ನೀಡುತ್ತಾರೆ. ಇದರ ಸೇವನೆಯಿಂದ ಸಕ್ಕರೆ ಪ್ರಮಾಣ ಹೆಚ್ಚಾಗಿಗಿ ಸಣ್ಣ ಮಕ್ಕಳು ಮಧುಮೇಹಕ್ಕೆ ತುತ್ತಾಗುತ್ತಾರೆ. ಚಿಪ್ಸ್, ಪಿಜ್ಜಾ, ಬರ್ಗರ್ ನಂತಹ ಜಂಕ್ ಫುಡ್ ಗೆ ಮಕ್ಕಳನ್ನು ಒಗ್ಗುವಂತೆ ಮಾಡುವುದು ಒಳ್ಳೆಯದಲ್ಲ. ಹೆಚ್ಚಿನ ಕ್ಯಾಲೋರಿ ಆಹಾರದಿಂದ ಮಕ್ಕಳನ್ನು ದೂರವಿರಿಸಬೇಕು. ಯಾವುದೇ ಸಂದರ್ಭದಲ್ಲೂ ಕೂಲ್ ಡ್ರಿಂಕ್ಸ್ ಕೊಡಬಾರದು ಎನ್ನುತ್ತಾರೆ ತಜ್ಞರು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ