ಡಯಾಬಿಟಿಸ್ ಸಮಸ್ಯೆ ಇದೆಯಾ?; ಈ ಹಣ್ಣುಗಳನ್ನು ತಿನ್ನುವ ಮುನ್ನ ಯೋಚಿಸಿ

|

Updated on: Jan 29, 2024 | 7:31 PM

ಹಣ್ಣುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಜ. ಆದರೆ, ಕೆಲವು ಹಣ್ಣುಗಳಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಅಂತಹ ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಡಯಾಬಿಟಿಸ್ ಸಮಸ್ಯೆ ಇದೆಯಾ?; ಈ ಹಣ್ಣುಗಳನ್ನು ತಿನ್ನುವ ಮುನ್ನ ಯೋಚಿಸಿ
ಹಣ್ಣುಗಳು
Image Credit source: iStock
Follow us on

ಡಯಾಬಿಟಿಸ್ ಇತ್ತೀಚೆಗೆ ಬಹುತೇಕ ಜನರಲ್ಲಿ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ನಾವು ಸೇವಿಸುವ ಕೆಲವು ಆಹಾರಗಳಿಂದಲೂ ಮಧುಮೇಹ ಸಮಸ್ಯೆ ಉಲ್ಬಣವಾಗುತ್ತದೆ. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ಸಕ್ಕರೆ ಅಂಶ ಹೆಚ್ಚಾಗಿರುವ ಕೆಲವು ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಬೇಕು. ಹಣ್ಣುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಜ. ಆದರೆ, ಕೆಲವು ಹಣ್ಣುಗಳಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಅಂತಹ ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಹಣ್ಣುಗಳು:

ದ್ರಾಕ್ಷಿ:

ದ್ರಾಕ್ಷಿ ಹಣ್ಣು ವಿವಿಧ ಬಣ್ಣಗಳಲ್ಲಿ ಬರುವ ಸಣ್ಣ, ಸಿಹಿ ಮತ್ತು ರಸಭರಿತವಾದ ಹಣ್ಣುಗಳಾಗಿವೆ. ಅವುಗಳನ್ನು ತಿನ್ನಲು ಸುಲಭ. ಆದರೆ, ಅದರಲ್ಲಿ ಹೆಚ್ಚು ನೈಸರ್ಗಿಕ ಸಕ್ಕರೆ ಅಂಶ ಇರುತ್ತದೆ.

ಇದನ್ನೂ ಓದಿ: ಡಯಾಬಿಟಿಸ್ ಇರುವವರು ಓಡಬಾರದಾ? ಅಸಲಿ ಸಂಗತಿ ಇಲ್ಲಿದೆ

ಮಾವಿನ ಹಣ್ಣು:

ಮಾವಿನ ಹಣ್ಣುಗಳು ಸಿಹಿ, ಕಿತ್ತಳೆ ಮತ್ತು ಹಳದಿ ತಿರುಳನ್ನು ಹೊಂದಿರುವ ಉಷ್ಣವಲಯದ ಹಣ್ಣುಗಳಾಗಿವೆ. ಅವು ತಮ್ಮ ಸುವಾಸನೆ ಮತ್ತು ಹೆಚ್ಚಿನ ಸಕ್ಕರೆ ಅಂಶಕ್ಕೆ ಜನಪ್ರಿಯವಾಗಿವೆ.

ಬಾಳೆಹಣ್ಣುಗಳು:

ಬಾಳೆಹಣ್ಣುಗಳು ಹಳದಿ ಬಣ್ಣದ ಹಣ್ಣುಗಾಳಗಿದ್ದು, ಸಾಕಷ್ಟು ಪೌಷ್ಟಿಕಾಂಶವಾದ ಹಣ್ಣಾಗಿದೆ. ಇದು ಮೃದುವಾದ ವಿನ್ಯಾಸ ಮತ್ತು ಸಿಹಿ ರುಚಿಯನ್ನು ಹೊಂದಿರುತ್ತವೆ.

ಚೆರಿ ಹಣ್ಣು:

ಚೆರಿಗಳು ಸಣ್ಣ, ಕೆಂಪು ಅಥವಾ ನೇರಳೆ ಹಣ್ಣುಗಳಾಗಿವೆ. ಅವು ರುಚಿಕರವಾದವು ಮಾತ್ರವಲ್ಲದೆ ನೈಸರ್ಗಿಕ ಸಕ್ಕರೆ ಅಂಶದಿಂದ ಕೂಡಿದ ಹಣ್ಣುಗಳಾಗಿವೆ. ಅವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.

ಕಲ್ಲಂಗಡಿ:

ಕಲ್ಲಂಗಡಿ ಸಿಹಿ, ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುವ ದೊಡ್ಡದಾದ ಹಣ್ಣಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಆದರೆ, ಅಧಿಕ ಪ್ರಮಾಣದ ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುತ್ತದೆ.

ಇದನ್ನೂ ಓದಿ: ನಿದ್ರಾಹೀನತೆಯಿಂದ ಮಹಿಳೆಯರಲ್ಲಿ ಡಯಾಬಿಟಿಸ್ ಹೆಚ್ಚಳ; ಅಧ್ಯಯನದಲ್ಲಿ ಬಯಲು

ಪೈನಾಪಲ್:

ಅನಾನಸ್ ಸಿಹಿ ಮತ್ತು ಸ್ವಲ್ಪ ಹುಳಿಯ ರುಚಿಯನ್ನು ಹೊಂದಿರುವ ಉಷ್ಣವಲಯದ ಹಣ್ಣು. ಇದು ನೈಸರ್ಗಿಕ ಸಿಹಿಕಾರಕ ಹಣ್ಣಾಗಿದೆ.

ಖರ್ಜೂರ:

ಖರ್ಜೂರ ಚಿಕ್ಕದಾದ ಹಣ್ಣಾಗಿದೆ. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶ ಅಧಿಕವಾಗಿರುತ್ತದೆ.

ಅಂಜೂರ:

ಅಂಜೂರದ ಹಣ್ಣುಗಳು ಮೃದುವಾದ, ಸಿಹಿ ರುಚಿಯನ್ನು ಹೊಂದಿರುವ ಹಣ್ಣು. ಇದು ಪಿಯರ್ ಆಕಾರದ ಹಣ್ಣುಗಳಾಗಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ