ನವದೆಹಲಿ: ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸುವವರಿದ್ದಾರೆ. ಆದರೆ, ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ತೊಂದರೆ ಉಂಟಾಗುತ್ತದೆ. ಹೀಗಾಗಿ, ಆ್ಯಂಟಿಬಯೋಟಿಕ್‌ಗಳ ಮಿತಿಮೀರಿದ ಪ್ರಿಸ್ಕ್ರಿಪ್ಷನ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರವು ಸೂಚನೆಯನ್ನು ಹೊರಡಿಸಿದ್ದು, “ವೈದ್ಯರು ರೋಗಿಗಳಿಗೆ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡುವಾಗ ಕಡ್ಡಾಯವಾಗಿ ಅದಕ್ಕೆ ಕಾರಣ ಅಥವಾ ಸಮರ್ಥನೆಯನ್ನು ತಿಳಿಸಲೇಬೇಕು” ಎಂದು ಹೇಳಿದೆ.
ಮೂಲಗಳ ಪ್ರಕಾರ, ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯೆಲ್ ವೈದ್ಯಕೀಯ ಕಾಲೇಜುಗಳಲ್ಲಿನ ಎಲ್ಲಾ ವೈದ್ಯರಿಗೆ ಪತ್ರದಲ್ಲಿ “ಆ್ಯಂಟಿಮೈಕ್ರೊಬಿಯಲ್ಗಳನ್ನು ಶಿಫಾರಸು ಮಾಡುವಾಗ ನಿಖರವಾದ ಸೂಚನೆ/ಕಾರಣ/ಸಮರ್ಥನೆಯನ್ನು ಕಡ್ಡಾಯವಾಗಿ ನಮೂದಿಸಬೇಕು” ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಲಿವರ್ ಆರೋಗ್ಯಕ್ಕೆ ಆಲ್ಕೋಹಾಲ್ಗಿಂತ ಹೆಚ್ಚು ಅಪಾಯಕಾರಿ ಆಹಾರಗಳಿವು
ಆ್ಯಂಟಿಮೈಕ್ರೊಬಿಯಲ್‌ಗಳ ದುರ್ಬಳಕೆ ಮತ್ತು ಮಿತಿಮೀರಿದ ಬಳಕೆಯು ರೋಗಕಾರಕಗಳ ಹೊರಹೊಮ್ಮುವಿಕೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸರ್ಕಾರದ ಪ್ರಕಾರ, ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟನ್ಸ್ (AMR) ಜಾಗತಿಕ ಸಾರ್ವಜನಿಕ ಆರೋಗ್ಯ ಆತಂಕಗಳಲ್ಲಿ ಒಂದಾಗಿದೆ. 2019ರಲ್ಲಿ 1.27 ಮಿಲಿಯನ್ ಜಾಗತಿಕ ಸಾವುಗಳಿಗೆ ಬ್ಯಾಕ್ಟೀರಿಯಾದ AMR ನೇರವಾಗಿ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. 4.95 ಮಿಲಿಯನ್ ಸಾವುಗಳು ಔಷಧ ನಿರೋಧಕ ಸೋಂಕುಗಳೊಂದಿಗೆ ಸಂಬಂಧಿಸಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಈ ಸೂಚನೆಯನ್ನು ಹೊರಡಿಸಿದೆ.
ಇದನ್ನೂ ಓದಿ: ನೊಣ ಬಿದ್ದ ಆಹಾರ ಸೇವಿಸುತ್ತೀರಾ?; ನಿಮಗೆ ಗೊತ್ತಿಲ್ಲದ ಸಂಗತಿ ಇಲ್ಲಿದೆ
AMR ನಿರೋಧಕ ಸೂಕ್ಷ್ಮಜೀವಿಗಳಿಂದ ಉಂಟಾಗುವ ಸೋಂಕುಗಳ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಅಪಾಯವನ್ನು ಉಂಟುಮಾಡುತ್ತದೆ. ಇದು ದೀರ್ಘಕಾಲದ ಅನಾರೋಗ್ಯ ಮತ್ತು ಸಾವಿನ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ. ಚಿಕಿತ್ಸೆಯ ವೈಫಲ್ಯಗಳು ಸಹ ದೀರ್ಘಾವಧಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ