ನೀವು ಪ್ರೀತಿಯಿಂದ ಸಾಕಿರುವ ನಾಯಿಗೂ ಬುದ್ಧಿಮಾಂದ್ಯತೆ ಬರಬಹುದು; ಅದಕ್ಕಿಂತ ಮೊದಲು ಅದರ ಬಗ್ಗೆ ತಿಳಿಯಿರಿ

ವಯಸ್ಸಾದಂತೆ ಮಾನವನ ಮೆದುಳು ದುರ್ಬಲಗೊಳ್ಳುವಂತೆಯೇ, ನಾಯಿಯ ಮೆದುಳು ಸಹ ಕಾಲಾನಂತರದಲ್ಲಿ ಹದಗೆಡುತ್ತದೆ. ಆದರೆ ಯಾವುದೇ ಮಾಲೀಕರಿಗಾಗಲಿ ತಾವು ಸಾಕಿರುವ ನಾಯಿಗೆ ವಯಸ್ಸಾಗುವುದನ್ನು ನೋಡುವುದು ತುಂಬಾ ಕಷ್ಟ. ನಾಯಿಗಳಿಗೆ ವಯಸ್ಸಾದಂತೆ ಬುದ್ಧಿಮಾಂದ್ಯತೆ ಕಂಡುಬರಬಹುದು, ಇದನ್ನು ಕ್ಯಾನೈನ್ ಕಾಗ್ನಿಟಿವ್ ಡಿಸ್ಫಂಕ್ಷನ್ (CCD) ಎಂದು ಕರೆಯುತ್ತಾರೆ. ಹಾಗಾಗಿ ಇಂತಹ ಸಮಯದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅವುಗಳನ್ನು ಹೇಗೆ ಕಾಳಜಿ ಮಾಡಬೇಕು ಎಂದು ತಿಳಿದಿರುವುದು ಬಹಳ ಅಗತ್ಯ. ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ನೀವು ಪ್ರೀತಿಯಿಂದ ಸಾಕಿರುವ ನಾಯಿಗೂ ಬುದ್ಧಿಮಾಂದ್ಯತೆ ಬರಬಹುದು; ಅದಕ್ಕಿಂತ ಮೊದಲು ಅದರ ಬಗ್ಗೆ ತಿಳಿಯಿರಿ
Dog Dementia

Updated on: Dec 12, 2025 | 5:15 PM

ವಯಸ್ಸಾದಂತೆ ಮಾನವನ ಮೆದುಳು ದುರ್ಬಲಗೊಳ್ಳುವಂತೆ, ನಾಯಿಯ ಮೆದುಳು ಸಹ ಕಾಲಾನಂತರದಲ್ಲಿ ಹದಗೆಡುತ್ತದೆ. ಹಾಗಾಗಿ ನಾಯಿಗಳಿಗೆ ವಯಸ್ಸಾದಂತೆ ಬುದ್ಧಿಮಾಂದ್ಯತೆ ಕಂಡುಬರಬಹುದು, ಇದನ್ನು ಕ್ಯಾನೈನ್ ಕಾಗ್ನಿಟಿವ್ ಡಿಸ್ಫಂಕ್ಷನ್ (CCD) ಎಂದು ಕರೆಯುತ್ತಾರೆ. ಇದು ನಾಯಿಗೆ ದೈನಂದಿನ ಜೀವನ ನಡೆಸಲು ತುಂಬಾ ಕಷ್ಟಕರವಾಗಿಸುತ್ತದೆ. ಯಾರಿಗೆ ಆಗಲಿ ಯಾವು ಪ್ರೀತಿಯಿಂದ ಸಾಕಿರುವ ನಾಯಿಗೆ ವಯಸ್ಸಾಗುವುದನ್ನು ನೋಡುವುದಕ್ಕೆ ತುಂಬಾ ಕಷ್ಟ. ಹಾಗಾಗಿ ಇಂತಹ ಸಮಯದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅವುಗಳನ್ನು ಹೇಗೆ ಕಾಳಜಿ ಮಾಡಬೇಕು ಎಂದು ತಿಳಿದಿರುವುದು ಅಗತ್ಯ.

ನಾಯಿಗಳು ವಯಸ್ಸಾದಂತೆ, ಅವುಗಳ ಉತ್ಸಾಹ ಕಡಿಮೆಯಾಗುತ್ತದೆ, ಅವುಗಳ ಇಂದ್ರಿಯಗಳು ದುರ್ಬಲಗೊಳ್ಳುತ್ತವೆ. ಸಾಮಾನ್ಯವಾಗಿ ನಾಯಿ ಬುದ್ಧಿಮಾಂದ್ಯತೆ ಎಂದು ಕರೆಯಲ್ಪಡುವ ಈ ಸ್ಥಿತಿಯು, ಮಾನವರಲ್ಲಿ ಬುದ್ಧಿಮಾಂದ್ಯತೆಯಂತೆಯೇ ಮೆದುಳಿನಲ್ಲಿ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳಿಂದ ಉಂಟಾಗುತ್ತದೆ. ಆದ್ದರಿಂದ, ನಾಯಿ ಮಾಲೀಕರು ಸಿಸಿಡಿ ಲಕ್ಷಣಗಳನ್ನು ಗುರುತಿಸುವುದು ಮತ್ತು ಸರಿಯಾದ ಚಿಕಿತ್ಸೆ ನೀಡಿ ಆರೈಕೆ ಮಾಡುವ ಮೂಲಕ ಸಾಕು ನಾಯಿಯ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸಬಹುದು.

ಸಿಸಿಡಿ ರೋಗಲಕ್ಷಣಗಳನ್ನು ಹೇಗೆ ಗುರುತಿಸುವುದು?

ಇದರ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವುದಿಲ್ಲ, ಬದಲಾಗಿ ಕ್ರಮೇಣ ಬೆಳೆಯುತ್ತವೆ. ರಾತ್ರಿಯಲ್ಲಿ ಕಂಡು ಬರುವ ಅಸ್ವಸ್ಥತೆ, ಮನೆಯ ಸುತ್ತಲೂ ಅಲೆದಾಟ, ಕಾರಣವಿಲ್ಲದೆ ಬೊಗಳುವುದು ಅಥವಾ ಕಿರುಚುವುದು, ಅಥವಾ ನಿದ್ರೆಯ ಮಾದರಿಗಳಲ್ಲಿ ಅಡಚಣೆ, ಆಟವಾಡಲು ಅಥವಾ ನಡೆಯಲು ಆಸಕ್ತಿ ಕಳೆದುಕೊಳ್ಳುವುದು. ಮನೆಯವರೊಂದಿಗೆ ಮತ್ತು ಇತರ ಸಾಕುಪ್ರಾಣಿಗಳೊಂದಿಗೆ ಸಂವಹನ ಕಡಿಮೆಯಾಗುವುದು, ದಿಕ್ಕು ತಪ್ಪುವುದು ಅಥವಾ ಏನು ಮಾಡಬೇಕು ಎಂದು ತಿಳಿಯದೆಯೇ ಗೊಂದಲವಾಗುವುದು, ಮನೆಯೊಳಗೆ ಇದ್ದಕ್ಕಿದ್ದಂತೆ ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆ ಮಾಡುವುದು ಇತ್ಯಾದಿ. ಹೀಗೆ ಕಂಡುಬರುವ ಲಕ್ಷಣಗಳು ಕಾಲಾನಂತರದಲ್ಲಿ, ಉಲ್ಬಣಗೊಳ್ಳಬಹುದು. ನೋವು, ದೃಷ್ಟಿ ಅಥವಾ ಶ್ರವಣ ನಷ್ಟ ಅಥವಾ ಇತರ ಚಯಾಪಚಯ ಅಸ್ವಸ್ಥತೆಗಳು ಕೂಡ ಉಂಟಾಗಬಹುದು.

ಇದನ್ನೂ ಓದಿ: ನಿಮ್ಮ ಕನಸಿನಲ್ಲಿ ನಾಯಿ ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?

 ಸಿಸಿಡಿ ತಡೆಗಟ್ಟುವ ಕ್ರಮ?

ಸಿಸಿಡಿಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲದಿದ್ದರೂ, ಸರಿಯಾದ ಆರೈಕೆಯು ಅದರ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಮತ್ತು ನಾಯಿಯ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಕೆಲವು ಔಷಧಿಗಳು, ಆಹಾರ ಪೂರಕಗಳು ಮತ್ತು ಸರಿಯಾದ ಆಹಾರವು ರೋಗಲಕ್ಷಣಗಳನ್ನು ಸುಧಾರಿಸಬಹುದು ಅಥವಾ ರೋಗದ ಪ್ರಗತಿಯನ್ನು ನಿಧಾನಗೊಳಿಸಬಹುದು. ಹೆಚ್ಚುವರಿಯಾಗಿ, ನಿಯಮಿತವಾಗಿ ತಪಾಸಣೆ ಮಾಡಿಸುವುದು ಒಳ್ಳೆಯದು. ಅದರ ಜೊತೆಗೆ ನಾಯಿಗೆ ಊಟ, ನಡಿಗೆ ಮತ್ತು ನಿದ್ರೆಗೆ ಸ್ಥಿರವಾದ ವೇಳಾಪಟ್ಟಿಯನ್ನು ಇಟ್ಟುಕೊಳ್ಳಿ. ಸರಳವಾದ ಒಳಾಂಗಣ ಆಟ, ಸಣ್ಣ ನಡಿಗೆ ಮತ್ತು ಸುರಕ್ಷಿತ ಆಟಿಕೆಗಳನ್ನು ಪರಿಚಯಿಸಿ. ಆದರೆ ಅವುಗಳಿಗೆ ಒತ್ತಡ ನೀಡಬೇಡಿ. ಪ್ರೀತಿಯಿಂದ ನೋಡಿಕೊಳ್ಳಿ. ಬೈಯುವುದು ಅಥವಾ ಶಿಕ್ಷಿಸುವುದನ್ನು ತಪ್ಪಿಸಿ. ನೋವು, ಸೋಂಕು ಅಥವಾ ಇತರ ಕಾಯಿಲೆಗಳು ಬುದ್ಧಿಮಾಂದ್ಯತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾಗಿ ಈ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ