ನೀವು ಬೆಳಿಗ್ಗೆ ಎದ್ದಾಗ ನಿಮ್ಮ ಗಂಟಲು ಒಣಗಿರುವುದನ್ನು ನೀವು ಹೆಚ್ಚಾಗಿ ಗಮನಿಸಿರುತ್ತೀರಿ. ಅಷ್ಟ ಅಲ್ಲ ನಿದ್ದೆ ಮಾಡುವಾಗಲೂ (Sleeping) ಕೆಲವೊಮ್ಮೆ ಬಾಯಿ ಅಥವಾ ಗಂಟಲು ಒಣಗುವುದು ಅಥವಾ ಪಸೆ ಇಂಗುವುದು (Dry Mouth) ತುಂಬಾ ಸಾಮಾನ್ಯವಾಗಿದೆ. ಏಕೆಂದರೆ ನಿದ್ರೆಯ ಸಮಯದಲ್ಲಿ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ ಇದು ನಿರಂತವಾಗಿದ್ದು, ದಿನವೂ ಕಾಡುತ್ತಿದ್ದು, ತೀವ್ರವಾಗಿದ್ದರೆ ಗಂಭೀರವಾಗಿ ಅದರ ಕಡೆ ಗಮನ ಕೊಡುವುದು ಮುಖ್ಯ. ಏಕೆಂದರೆ ಇದು ಕೆಲವು ಕಾಯಿಲೆಗಳ ಲಕ್ಷಣವೂ ಆಗಿರಬಹುದು (Health Tips).
ನಿದ್ರಿಸುವಾಗ ಅತಿಯಾದ ಒಣ ಬಾಯಿ, ಪಸೆ ಇಂಗುವುದಕ್ಕೆ ಕಾರಣಗಳು:
☛ ಇದಕ್ಕೆ ಕಾರಣಗಳಲ್ಲಿ ಒಂದು ಬಾಯಿ ಉಸಿರಾಟದ ಕಾಯಿಲೆಯಾಗಿರಬಹುದು.
☛ ದೇಹದಲ್ಲಿ ನೀರಿನ ಕೊರತೆಯೂ ಸಮಸ್ಯೆಯಾಗಿರಬಹುದು
☛ ವೈದ್ಯಕೀಯವಾಗಿ ಕೆಲವು ವಿಧದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಮತ್ತೆ ಮತ್ತೆ ಒಣ ಬಾಯಿ ಉಂಟಾಗುತ್ತದೆ.
☛ ವಿವಿಧ ರೀತಿಯ ಆಹಾರ ತಿಂದರೂ ಬಾಯಿ ಒಣಗುತ್ತದೆ.
☛ ಕೆಲವು ವೈದ್ಯಕೀಯ ಪರಿಸ್ಥಿತಿಗಳು ಸಹ ಇದಕ್ಕೆ ಕಾರಣವಾಗುತ್ತವೆ
ತಜ್ಞರು ಏನು ಹೇಳುತ್ತಾರೆ?
ತಜ್ಞರ ಪ್ರಕಾರ ನಿದ್ದೆ ಮಾಡುವಾಗ ಬಾಯಿ ಒಣಗುವುದು ಸಹಜ. ಆದರೆ ಆಗಾಗ್ಗೆ ನಿರಂತರವಾಗಿ ಸಂಭವಿಸುವುದು ಸ್ವಯಂ ನಿರೋಧತೆ ಇಲ್ಲದಿರುವುದರ ಸಂಕೇತವಾಗಿದೆ. ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಣ್ಣುಗಳು, ಬಾಯಿ ಮತ್ತು ಸುತ್ತಮುತ್ತಲಿನ ಅಂಗಗಳಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ.
ಇತರ ಕಾರಣಗಳ ಬಗ್ಗೆ ಮಾತನಾಡುವುದಾದರೆ ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಯು ಗಂಟಲು ಮತ್ತು ಬಾಯಿ ಒಣಗಲು ಕಾರಣವಾಗಬಹುದು. ಕೆಲವೊಮ್ಮೆ ವಿವಿಧ ರೀತಿಯ ಮೌತ್ ವಾಶ್ ಕೂಡ ಈ ಸಮಸ್ಯೆಯನ್ನು ಉಂಟುಮಾಡಬಹುದು.
☛ ಬಾಯಿಯಲ್ಲಿ ಜಿಗುಟಾದ ಅಥವಾ ಒಣ ಭಾವನೆ ಅಥವಾ ಪಸೆ ಇಂಗುವುದು
☛ ಮತ್ತೆ ಮತ್ತೆ ಬಾಯಾರಿಕೆ
☛ ಬಾಯಿ ಹುಣ್ಣುಗಳು
☛ ಒಡೆದ ತುಟಿಗಳು, ಒಣ ಗಂಟಲು
☛ ಕೆಟ್ಟ ಉಸಿರು
☛ ನುಂಗಲು ತೊಂದರೆ
☛ ಒರಟುತನ ಅಥವಾ ಮಾತನಾಡಲು ತೊಂದರೆ
☛ ಬಾಯಿಯಲ್ಲಿ ಕಹಿ ರುಚಿ
☛ ದಪ್ಪ ಲಾಲಾರಸವನ್ನು ಹೊಂದಿರುತ್ತದೆ
☛ ನಿದ್ರೆಯಿಂದ ತೊಂದರೆಯಾಗುವುದು
Also Read: ನೆಲದ ಮೇಲೆ ಮಲಗುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯೇ? ತಡವೇಕೆ ಹಾಸಿಗೆ ಮಡಚಿಟ್ಟುಬಿಡಿ!
ತಡೆಗಟ್ಟುವ ವಿಧಾನಗಳು
☛ ನಿಮ್ಮಲ್ಲಿ ನೀರಿನಾಂಶ ಹೆಚ್ಚಿರುವುಂತೆ ಹೈಡ್ರೀಕರಿಸಿಟ್ಟುಕೊಳ್ಳಿ. ಅದಕ್ಕಾಗಿ ಆಗಾಗ್ಗೆ ನೀರು ಕುಡಿಯಿರಿ
☛ ದೇಹವನ್ನು ನಿರ್ಜಲೀಕರಣಗೊಳಿಸಬೇಡಿ
☛ ಮದ್ಯ ಮತ್ತು ತಂಬಾಕನ್ನು ತಪ್ಪಿಸಿ
☛ ಆಲ್ಕೋಹಾಲ್ ಆಧಾರಿತ ಮೌತ್ ವಾಶ್ ಅನ್ನು ಬಳಸಬೇಡಿ
ಬೆಳಗ್ಗೆ ಎದ್ದ ಕೂಡಲೇ ಬಾಯಿ ಅಥವಾ ಗಂಟಲು ಒಣಗುತ್ತಿದೆ ಎಂದೆನಿಸಿದಾಗ ಈ ಎಲ್ಲಾ ವಿಷಯಗಳನ್ನು ನೆನಪಿಟ್ಟುಕೊಳ್ಳಿ ಮತ್ತು ಈ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ