ನೆಲದ ಮೇಲೆ ಮಲಗುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯೇ? ತಡವೇಕೆ ಹಾಸಿಗೆ ಮಡಚಿಟ್ಟುಬಿಡಿ!
Sleeping on Floor : ನೆಲದ ಮೇಲೆ ಮಲಗುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದು ಯಾವುದೇ ತೊಡಕುಗಳು ಇಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದಲ್ಲದೆ, ಒತ್ತಡ, ದೈಹಿಕ- ಮಾನಸಿಕ ಅಸ್ವಸ್ಥತೆಯನ್ನು ತೊಡೆದುಹಾಕುತ್ತದೆ. ನೆಲದ ಮೇಲೆ ಮಲಗುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
ಹೆಚ್ಚಿನ ಜನರು ಮಂಚದ ಮೇಲೆ, ಹಾಸಿಗೆಯಲ್ಲಿ ಮಲಗಲು (Sleeping) ಇಷ್ಟಪಡುತ್ತಾರೆ. ಆದರೆ ನೆಲದ ಮೇಲೆ (Floor) ಮಲಗುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ನೆಲದ ಮೇಲೆ ಮಲಗುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಒಂದು ಕಾಲದಲ್ಲಿ ಜನರು ನೆಲದ ಮೇಲೆಯೇ ಮಲಗುತ್ತಿದ್ದರು. ಆದರೆ ಕಾಲಾನಂತರದಲ್ಲಿ ಈ ವಿಧಾನವೂ ಬದಲಾಯಿತು. ಅದೂ ಅಲ್ಲದೆ ವಿವಿಧ ಬಗೆಯ ಹಾಸಿಗೆಗಳೂ ಬರತೊಡಗಿದವು. ಆದರೆ ನೆಲದ ಮೇಲೆ ಮಲಗುವುದು ಉತ್ತಮ (Health Benefits) ಎನ್ನುತ್ತಾರೆ ತಜ್ಞರು. ಅದು ಹೆಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ..
ನೆಲದ ಮೇಲೆ ಮಲಗುವುದರಿಂದ ಬೆನ್ನುಮೂಳೆಯು ಉತ್ತಮ ಸ್ಥಿತಿಯಲ್ಲಿರುತ್ತದೆ. ಇದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೆಲದ ಮೇಲೆ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತದ ಅಪಾಯದಿಂದ ಪಾರಾಗುವುದು ಹೇಗೆ?
ನೆಲದ ಮೇಲೆ ಮಲಗುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದು ಯಾವುದೇ ತೊಡಕುಗಳು ಇಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದಲ್ಲದೆ, ಒತ್ತಡ, ದೈಹಿಕ- ಮಾನಸಿಕ ಅಸ್ವಸ್ಥತೆಯನ್ನು ತೊಡೆದುಹಾಕುತ್ತದೆ. ನೆಲದ ಮೇಲೆ ಮಲಗುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಪರಿಸರ ಸಮತೋಲನಕ್ಕೆ ಸಾಧುಜೀವಿ ಜೀಬ್ರಾಗಳ ಸಂರಕ್ಷಣೆ ಅಗತ್ಯ
ನೆಲದ ಮೇಲೆ ಮಲಗುವುದರಿಂದ ಕೆಲವು ಅನುಕೂಲಗಳು ಹಾಗೂ ಅನಾನುಕೂಲಗಳೂ ಇವೆ. ಕೀಟಗಳು ಮತ್ತು ನೆಲದ ಮೇಲಿನ ಧೂಳಿನಿಂದ ಅಲರ್ಜಿ ಇರುವವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಅದಕ್ಕಾಗಿಯೇ ನೆಲದ ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಅಲರ್ಜಿಯನ್ನು ಕಡಿಮೆ ಮಾಡಿಕೊಳಬಹುದು. ಅದೇ ರೀತಿ ಬೆನ್ನು ನೋವು ಇರುವವರು ಮತ್ತು ಗರ್ಭಿಣಿಯರು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ನೆಲದ ಮೇಲೆ ಮಲಗಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Fri, 2 February 24